ಬುಧವಾರ, ಮಾರ್ಚ್ 3, 2021
22 °C

ಮೋದಿ ಜಾತಿ: ಕಾಂಗ್ರೆಸ್‌, ಬಿಜೆಪಿ ಕಿತ್ತಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋದಿ ಜಾತಿ: ಕಾಂಗ್ರೆಸ್‌, ಬಿಜೆಪಿ ಕಿತ್ತಾಟ

ನವದೆಹಲಿ (ಐಎಎನ್‌ಎಸ್‌): ಜಾತಿ ವಿಷಯವಾಗಿ ನರೇಂದ್ರ ಮೋದಿ ಅವರ  ಮೇಲೆ ಶುಕ್ರವಾರ ವಾಗ್ದಾಳಿ ನಡೆಸಿದ ಕಾಂಗ್ರೆಸ್‌, ‘ಮೋದಿಯವರ ಇನ್ನೊಂದು ಹುಸಿ ಮುಖವಾಡ ಕಳಚಿಬಿದ್ದಿದೆ’  ಎಂದು ಲೇವಡಿ ಮಾಡಿದೆ.



‘ತಾವು ಹಿಂದುಳಿದ ವರ್ಗಕ್ಕೆ ಸೇರಿದವರೆಂದು ಹೇಳುವ ಮೂಲಕ ಮೋದಿ ಇನ್ನೊಂದು ಸುಳ್ಳು ಹೇಳಿದ್ದಾರೆ.  ಈ ರೀತಿ ಸುಳ್ಳಿನ ಕಂತೆ ಹೆಣೆಯುವ ಮೂಲಕ ಅವರು ಪ್ರತಿಯೊಬ್ಬರನ್ನೂ ಮೂರ್ಖರನ್ನಾಗಿಸಲು ಹುನ್ನಾರ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಶಕೀಲ್‌ ಅಹ್ಮದ್‌ ಟ್ವೀಟ್‌ ಮಾಡಿದ್ದಾರೆ.



‘ಮೋದಿ ಮೇಲ್ವರ್ಗಕ್ಕೆ ಸೇರಿದ್ದಾರೆ . ಆದರೆ ಮತದಾರರ ಅನುಕಂಪ ಗಿಟ್ಟಿಸುವ ಸಲುವಾಗಿ ತಾವು ಹಿಂದುಳಿದ ವರ್ಗಕ್ಕೆ ಸೇರಿದವರೆಂದು  ಹೇಳಿಕೊಂಡಿದ್ದಾರೆ’ ಎಂದು ಗುಜರಾತ್‌್ ಕಾಂಗ್ರೆಸ್‌್ ಗುರುವಾರ ಹೇಳಿಕೆ ಹೊರಡಿಸಿತ್ತು.



ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಹಿರಿಯ ಮುಖಂಡ ಅರುಣ್‌್ ಜೇಟ್ಲಿ, ‘ ಸಾಮಾನ್ಯನೊಬ್ಬನ ಕೈಯಿಂದ ಸೋಲು­ವುದನ್ನು ಅರಗಿಸಿಕೊಳ್ಳುವುದಕ್ಕೆ ಕಾಂಗ್ರೆಸ್‌ಗೆ ಕಷ್ಟವಾಗುತ್ತಿದೆ. ಆದ್ದರಿಂದ ಇದನ್ನು ವಿವಾದ ಮಾಡುತ್ತಿದೆ’ ಎಂದಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.