ಶುಕ್ರವಾರ, ನವೆಂಬರ್ 15, 2019
21 °C

ಮೋದಿ ಪ್ರಧಾನಿಯಾಗುವುದು ತಮಗೆ ಇಷ್ಟವಿಲ್ಲ: ಸೇನ್

Published:
Updated:

ಬೀಜಿಂಗ್ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾಗುವುದು ತಮಗೆ ಇಷ್ಟವಿಲ್ಲ ಎಂದು ಖ್ಯಾತ ಅರ್ಥಶಾಸ್ತ್ರಜ್ಞ  ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಸೋಮವಾರ ತಿಳಿಸಿದ್ದಾರೆ.ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮೋದಿ ಜಾತ್ಯತೀತ ಮನೋಭಾವದವರಲ್ಲ ಆಗಾಗಿ ಅವರು ಪ್ರಧಾನಿಯಾಗುವುದು ತಮಗೆ ಇಷ್ಟವಿಲ್ಲ, ಭಾರತೀಯ ಪ್ರಜೆಯಾಗಿ ಈ ಮಾತನ್ನು ಹೇಳುತ್ತಿದ್ದೆನೆ ಎಂದು ಸೇನ್ ತಿಳಿಸಿದರು.ಗುಜರಾತ್ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ವಿಷಯಗಳಲ್ಲಿ ಮುಂದಿದೆ. ಆದರೆ ಮೋದಿ ನೈತಿಕವಾಗಿ ಪಕ್ಷಪಾತಿಯಾಗಿದ್ದಾರೆ ಎಂದು ಸೇನ್ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)