ಬೆಳಗಾವಿ: ಗ್ರಾಹಕರು ಮೋಸ ಹೋದಾಗ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಸಂಬಂಧಿಸಿದ ಅಂಗಡಿ, ಕಂಪೆನಿ, ಸಂಸ್ಥೆ ಹಾಗೂ ಕಚೇರಿಗಳ ವಿರುದ್ಧ ದೂರು ದಾಖಲು ಮಾಡಿ ಪರಿಹಾರ ಪಡೆದುಕೊಳ್ಳಬೇಕು ಎಂದು ರಾಜ್ಯ ಗ್ರಾಹಕರ ರಕ್ಷಣಾ ಪರಿಷತ್ತ ಸದಸ್ಯ ಹಾಗೂ ನಿವೃತ್ತ ಪ್ರಾಚಾರ್ಯ ವಿ.ಎನ್. ಜೋಶಿ ಕರೆ ನೀಡಿದರು.

ಅಥಣಿ ತಾಲ್ಲೂಕಾ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ, ಕಾನೂನು ಮಾಪನ ಶಾಸ್ತ್ರ ವಿಭಾಗ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮತ್ತಿತರ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಗ್ರಾಹಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಗ್ರಾಹಕರ ರಕ್ಷಣಾ ಕಾಯ್ದೆಯ ಅಡಿ ಗ್ರಾಹಕರಿಗೆ ಹತ್ತು, ಹಲವು ಹಕ್ಕು ಹಾಗೂ ಕರ್ತವ್ಯಗಳನ್ನು ಒದಗಿಸಲಾಗಿದೆ. ಸೇವೆ ಹಾಗೂ ವಸ್ತು ಪಡೆಯುವ ಸಂದರ್ಭದಲ್ಲಿ ಮೋಸ ಹೋದಾಗ ಸಂಬಂಧಿಸಿದ ಅಂಗಡಿ, ಕಂಪೆನಿ, ಸಂಸ್ಥೆ ಹಾಗೂ ಕಚೇರಿಗಳ ವಿರುದ್ಧ ದೂರು ದಾಖಲು ಮಾಡಿ ಪರಿಹಾರ ಕಂಡುಕೊಳ್ಳಬಹುದು. ಗ್ರಾಹಕರು ಕಾನೂನು ರಕ್ಷಣೆ ಮಾಡಿದರೆ ಕಾನೂನು ಗ್ರಾಹಕರ ರಕ್ಷಣೆ ಮಾಡುತ್ತದೆ ಎಂದ ವಿವರಿಸಿದರು.

ಪ್ರತಿಯೊಂದು ವಸ್ತು ಖರೀದಿ ಸಂದರ್ಭದಲ್ಲಿ ಕಡ್ಡಾಯವಾಗಿ ರಸೀದಿಯನ್ನು ಪಡೆದುಕೊಳ್ಳಬೇಕು. ಹಾಗಿದ್ದಲ್ಲಿ ಮಾತ್ರ ಕೊಂಡ ವಸ್ತುವಿನಲ್ಲಿ ದೋಷ ಇದ್ದರೆ ದೂರು ದಾಖಲು ಮಾಡಬಹುದು. ಜತೆಗೆ ಪರಿಹಾರ ಪಡೆದುಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು. ಗ್ರಾಹಕರು 90 ದಿನಗಳ ಅವಧಿಯಲ್ಲಿ ಸಂಬಂಧಪಟ್ಟ ಗ್ರಾಹಕ ವೇದಿಕೆಗಳಲ್ಲಿ ನೇರವಾಗಿ ದೂರು ದಾಖಲು ಮಾಡಬಹುದಾಗಿದೆ. ಗ್ರಾಹಕರು ಹಕ್ಕಿನ ಕುರಿತು ಎಚ್ಚೆತ್ತುಕೊಂಡಾಗ ಮಾತ್ರ ಮೋಸಗಳು ಕಡಿಮೆಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಗ್ರಾಹಕ ಜಾಗೃತಿ ಸಂದೇಶಕರಾಗಿ ಆಗಮಿಸಿದ್ದ ವಕೀಲ ಅಶೋಕ ಹಲಗಲಿ ಅವರು, ಮಾಹಿತಿ ಹಕ್ಕು ಕಾಯ್ದೆ ಬಗ್ಗೆ ವಿವರಿಸಿದರು. ಯಾವುದೇ ಇಲಾಖೆಗಳಲ್ಲಿ ಅಗತ್ಯ ಮಾಹಿತಿಗಳನ್ನು ಈ ಹಕ್ಕಿನಡಿ ಪಡೆದುಕೊಳ್ಳಬಹುದು. ಈ ಕಾಯ್ದೆಯಡಿ ತಪ್ಪು ಮಾಹಿತಿ ನೀಡುವಂತಿಲ್ಲ ಎಂಬ ನಿಯಮವಿದೆ ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ಮಾಹಿತಿ ನೀಡಬೇಕು ಎಂಬ ನಿಯಮವಿದೆ ಎಂದು ತಿಳಿಸಿದರು.

ರಾಜ್ಯ ಗ್ರಾಹಕರ ಮಂಡಳಿ ನಿರ್ದೇಶಕ ಎಸ್. ಎಸ್. ದಿವಾನಮಳ ಅವರು ಗ್ರಾಹಕರ ಹಕ್ಕು ಬಾಧ್ಯತೆ ಬಗ್ಗೆ ಮಾತನಾಡಿ ವ್ಯಾಪಾರಿಗಳು ಹೊಸ ವಸ್ತುವೆಂದು, ಹಳೆ ವಸ್ತುಗಳನ್ನು ಪೂರೈಸಿ ಮೋಸ ಮಾಡುತ್ತಿದ್ದಾರೆ. ಹೀಗಾಗಿ ಖರೀದಿ ಸಂದರ್ಭದಲ್ಲಿ ಗುಣಮಟ್ಟದ ಪರಿಶೀಲನೆ ಮಾಡಬೇಕು ಎಂದು ತಿಳಿಸಿದರು.

ಬಿಎಸ್ಎನ್ಎಲ್ ಸೇವೆ ಕುರಿತು ಅಥಣಿ ವಿಭಾಗದ ಎಂಜಿನಿಯರ್ ಎ.ಎನ್. ಕುಲಕರ್ಣಿ, ಹೆಸ್ಕಾಂ ಸೇವೆ ಕುರಿತು ಎಇಇ ಮಠಪತಿ ಮಾಹಿತಿ ನೀಡಿದರು.
ನಾಟಕ: ಕಾರ್ಯಕ್ರಮದಲ್ಲಿ ಬೆಳಗಾವಿಯ ಮಹಿಳಾ ಕಲ್ಯಾಣ ಸಂಸ್ಥೆಯ ಬಿಎಸ್ಡಬ್ಲೂ ಕಾಲೇಜು ವಿದ್ಯಾರ್ಥಿಗಳಿಂದ ಗ್ರಾಹಕ ಜಾಗೃತಿ ಬಿಂಬಿಸುವ ಬೀದಿ ನಾಟಕ ಪ್ರದರ್ಶಿನಗೊಂಡಿತು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರಾದ ಚನಬಸಪ್ಪಾ ಕೊಡ್ಲಿ ಸ್ವಾಗತಿಸಿದರು. ಎನ್.ಲೋಕಪ್ಪ ನಿರ್ವಹಿಸಿದರು. ಅಥಣಿ ತಹಸೀಲ್ದಾರ ಶರಣಬಸಪ್ಪ ವಂದಿಸಿದರು.

ಸಿಇಟಿ ತರಬೇತಿ ಇಂದಿನಿಂದ
ಬೆಳಗಾವಿ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಸಿಇಟಿ 14 ದಿನಗಳ ಉಚಿತ ತರಬೇತಿ ಇದೇ ಏ. 2ರಿಂದ ಆರಂಭವಾಗಲಿದೆ. ನಗರದ 3ನೇ ಗೇಟ್ನ ಬಳಿ ಇರುವ ಜೈನ ಕಾಲೇಜಿನಲ್ಲಿ ತರಬೇತಿ ಶಿಬಿರ ನಡೆಯಲಿದ್ದು, ವಿವಿಧ ಕಾಲೇಜುಗಳ ನುರಿತ ಅಧ್ಯಾಪಕರು ತರಬೇತಿ ನಡೆಸಿ ಕೊಡುವರು.
ತರಬೇತಿ ಶಿಬಿರದ ಉದ್ಘಾಟನೆ ಏ. 2ರಂದು ಬೆಳಿಗ್ಗೆ 9ಕ್ಕೆ ಜೈನ ಕಾಲೇಜಿನಲ್ಲಿ ನಡೆಯಲಿದ್ದು, ಡಿ.ಜಿ.ಕುಲಕರ್ಣಿ ನೆರವೇರಿಸುವರು. ಮಾಹಿತಿಗಾಗಿ ಮಾರುತಿ- 9902216641, ವಿನಯ- 9164254149 ಇಲ್ಲಿಗೆ ಸಂಪರ್ಕಿಸಬಹುದು ಎಂದು ನಗರ ಕಾರ್ಯದರ್ಶಿ ಶಿವಯೋಗಿ ಬೆಂಬಳಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.