ಮೌಲ್ಯದ ಬಗ್ಗೆ ಅರಿವು ಮೂಡಿಸಿ

ಶುಕ್ರವಾರ, ಜೂಲೈ 19, 2019
28 °C

ಮೌಲ್ಯದ ಬಗ್ಗೆ ಅರಿವು ಮೂಡಿಸಿ

Published:
Updated:

ಬೆಂಗಳೂರು:`ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ಕ್ರಾಂತಿ ಮಾಡಬೇಕಿಲ್ಲ, ಬದಲಿಗೆ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಮತ್ತು ಮೌಲ್ಯಗಳ ಬಗ್ಗೆ ಅರಿವು ಮೂಡಿಸಬೇಕು~ ಎಂದು ರಾಷ್ಟ್ರೀಯ ಪಠ್ಯಕ್ರಮ ಪರಿಷ್ಕರಣೆ ಹಾಗೂ ಪಠ್ಯಪುಸ್ತಕ ರಚನಾ ಸಂಯೋಜಕ ಜೆ.ಎಸ್.ಮೂಡಂಬಡಿತ್ತಾಯ ಹೇಳಿದರು.ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘವು ನಗರದ ಕನ್ನಡ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ- ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

`ಶಿಕ್ಷಣವೆಂಬುದು ಕೇವಲ ಪಠ್ಯಕ್ಕೆ ಸೀಮಿತಗೊಳ್ಳದೇ ಮಕ್ಕಳಲ್ಲಿರುವ ಕಲೆ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ವಿವಿಧ ಪಠ್ಯೇತರ ವಿಚಾರಗಳಿಗೆ ಒತ್ತು ನೀಡಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಕಲೆಯು ವ್ಯಾಪಾರದ ವಸ್ತುವಾಗದೇ ವ್ಯಕ್ತಿತ್ವ ವಿಕಸನದ ಮಾರ್ಗವಾಗಿ ರೂಪಗೊಳ್ಳಬೇಕು~ ಎಂದು ಸಲಹೆ ನೀಡಿದರು.ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ಎನ್.ಬಿ.ಪಾಟೀಲ, `ಚಿತ್ರಕಲಾ ವಿಷಯ ಕೇವಲ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾಗದೇ, ಪ್ರಾಥಮಿಕ ಶಾಲೆಯ ಪಠ್ಯದಲ್ಲಿ ಚಿತ್ರಕಲಾ ವಿಷಯವನ್ನು ಅಳವಡಿಸಬೇಕು. ಆಗ ಮಾತ್ರ ಕಲಾ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ~ ಎಂದು ತಿಳಿಸಿದರು.`ಪಠ್ಯಪುಸ್ತಕದಷ್ಟೆ ದೈಹಿಕ ಮತ್ತು ಕಲಾ ಶಿಕ್ಷಣ ಪ್ರಮುಖವಾಗಿದ್ದು, ಬಹುತೇಕ ಶಾಲೆಗಳಲ್ಲಿ ಅರೆಕಾಲಿಕರಾಗಿ ಸೇವೆ ಸಲ್ಲಿಸುತ್ತಿರುವ ಚಿತ್ರಕಲಾ ಶಿಕ್ಷಕರನ್ನು ದೀರ್ಘಾವಧಿಗೆ ನೇಮಿಸಿಕೊಳ್ಳಬೇಕು~ ಎಂದು ಒತ್ತಾಯಿಸಿದರು.

ಚಿತ್ರಕಲಾ ಶಿಕ್ಷಕರಿಗೆ `ಶ್ರಮ ಜೀವಿ~ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಿತ್ರಕಲಾ ಶಿಕ್ಷಣ ಪಠ್ಯವಸ್ತು ರಚನಾ ಸಮಿತಿಯ ಅಧ್ಯಕ್ಷ ಐ.ಎನ್.ಜೋಶಿ, ಲಲಿತಕಲಾ ಅಕಾಡೆಮಿ ಅಧ್ಯಕ್ಷ ಚಿ.ಸು.ಕೃಷ್ಣಶೆಟ್ಟಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry