ಇಂದಿನಿಂದ ಪದವಿ ಪೂರ್ವ ಶಿಕ್ಷಣದ (ಪಿಯೂ) ಪರೀಕ್ಷಾ ಮೌಲ್ಯಮಾಪನ ಆರಂಭವಾಗುತ್ತಿದೆ. ಈ ಮೌಲ್ಯಮಾಪನ ಕಾರ್ಯಕ್ಕೆ ಸುಮಾರು 15 ಸಾವಿರ ಮಂದಿ ಉಪನ್ಯಾಸಕರನ್ನು ಬಳಸಿಕೊಳ್ಳಲಾಗುತ್ತಿದೆ. ಉಪನ್ಯಾಸಕರ ಸಂಘಟನೆಯಲ್ಲಿ ಒಡಕಿನ ದನಿ ಇದೆ. ಹಾಗಾಗಿ ಕೆಲವರು ಮೌಲ್ಯಮಾಪನ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಮೌಲ್ಯ ಮಾಪನ ಹತ್ತಿರ ಬರುತ್ತಿದ್ದಂತೆ ಉಪನ್ಯಾಸಕರು ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಬಳಸುವ ಬೆದರಿಕೆಯ ಅಸ್ತ್ರವಿದು. ಈ ತಂತ್ರಗಾರಿಕೆ ಹೊಸದೇನೂ ಅಲ್ಲ. ಹಲವಾರು ವರ್ಷಗಳಿಂದ ಇದು ನಡೆದು ಬಂದಿದೆ.

ಕೆಲವೊಮ್ಮೆ ಮೌಲ್ಯಮಾಪನದ ಬಹಿಷ್ಕಾರವೂ ನಡೆದು ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವೂ ಆಗಿದೆ. ಇದರ ಪರಿಣಾಮ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಪ್ರಕ್ರಿಯೆಗೆ ಅಡಚಣೆಯೂ ಆಗಿದೆ. ವಿದ್ಯಾರ್ಥಿಗಳಿಗೆ ವರ್ಷವೆಲ್ಲ ಪಾಠ ಹೇಳಿ, ಪರೀಕ್ಷೆ ನಡೆಸಿ ಅವರ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಬಹಿಷ್ಕಾರ ಹಾಕುವುದು ವಿವೇಕದ ನಿರ್ಧಾರ ಎನಿಸದು. ಕಾಲೇಜಿನಲ್ಲಿ ಪಾಠ ಹೇಳಿಕೊಟ್ಟ ಉಪನ್ಯಾಸಕರು ಮೌಲ್ಯಮಾಪನ ಮಾಡದೆ ಮತ್ಯಾರು ಈ ಕಾರ್ಯವನ್ನು ಮಾಡುವುದು? ಉಪನ್ಯಾಸಕರು ಪದೇ ಪದೇ ಇಂತಹ ಬಹಿಷ್ಕಾರಕ್ಕೆ ಕೈಹಾಕುವುದಕ್ಕೆ ಸರ್ಕಾರ ಒಂದು ತಾರ್ಕಿಕ ಅಂತ್ಯ ಕಾಣಿಸಬೇಕು. ಅದಕ್ಕಾಗಿ ಸರ್ಕಾರ ಕಾನೂನು ಮಾರ್ಗವನ್ನೇ ಹುಡುಕಬೇಕು. ಉಪನ್ಯಾಸಕರ ಬೇಡಿಕೆಗೂ ಮೌಲ್ಯಮಾಪನ ಬಹಿಷ್ಕಾರಕ್ಕೂ ಯಾವುದೇ ಸಂಬಂಧವಿರಕೂಡದು.

ಮೌಲ್ಯಮಾಪನ ಉಪನ್ಯಾಸಕರ ಆದ್ಯ ಕರ್ತವ್ಯವಾಗಬೇಕು. ಈ ಹಿಂದೆ ಮೌಲ್ಯಮಾಪನ ಕಾರ್ಯವನ್ನು ಬಹಿಷ್ಕರಿಸಿದಾಗ ಅಂತಹವರಿಗೆ ಈಗಿರುವ ಶಿಕ್ಷಣದ ಕಾಯ್ದೆಯಂತೆಯೇ ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂದು ನೋಟಿಸ್ ನೀಡಿ, ಭತ್ಯೆ ಕಡಿತ, ಬಂಧನ, ಹಿಂಬಡ್ತಿ ಮತ್ತು ಸೇವೆಯಿಂದಲೇ ವಜಾ ಮಾಡಿರುವ ಪ್ರಕರಣಗಳಿವೆ. ಅನಿವಾರ್ಯ ಆದಾಗ ‘ಎಸ್ಮಾ’ ಜಾರಿಗೆ ತರಲಾಗಿದೆ. ಆದರೆ ಇಂತಹ ಕ್ರಮಗಳು ಸಮಸ್ಯೆಗೆ ಪರಿಹಾರವಲ್ಲ ಎನ್ನುವುದನ್ನು ಸರ್ಕಾರ ತಿಳಿಯಬೇಕು. ಮೌಲ್ಯಮಾಪನ ಕಾರ್ಯವನ್ನು ಕಡ್ಡಾಯ ಮಾಡಬೇಕು. ಇದನ್ನು ಬಹಿಷ್ಕರಿಸುವುದಕ್ಕೆ ಅವಕಾಶವೇ ಇಲ್ಲದಂತೆ ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ ತರುವ ಬಗೆಗೆ ಸರ್ಕಾರ ಇನ್ನಾದರೂ ಗಂಭೀರವಾಗಿ ಯೋಚಿಸಬೇಕು.

ಹಾಗೆಯೇ ಉಪನ್ಯಾಸಕರ ಅನೇಕ ಬೇಡಿಕೆಗಳು ನ್ಯಾಯಬದ್ಧವಾಗಿಯೇ ಇವೆ. ವೇತನ ತಾರತಮ್ಯ, ವೇತನ ಪರಿಷ್ಕರಣೆಯಲ್ಲಾಗುತ್ತಿರುವ ವಿಳಂಬ ಮತ್ತು ಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯ ಇತ್ಯಾದಿ ಬೇಡಿಕೆಗಳನ್ನು ಪರಿಶೀಲಿಸಬೇಕು. ಅವುಗಳನ್ನು ಬಗೆಹರಿಸದೇ ಅನವಶ್ಯಕವಾಗಿ ಮುಂದೂಡುತ್ತಾ ಹೋಗುವುದು ಸರಿಯಲ್ಲ. ಈ ಹಿಂದೆ ನೀಡಿರುವ ಭರವಸೆಯಂತೆ ಈಡೇರಿಸಬಹುದಾದ ಬೇಡಿಕೆಗಳನ್ನು ಜಾರಿಗೆ ತರಬೇಕು.ಉಪನ್ಯಾಸಕರ ಬೇಡಿಕೆಗಳನ್ನು ನಿರ್ಲಕ್ಷಿಸುವುದು ಜಾಣತನವಲ್ಲ. ಅನೇಕ ಸಲ ಸರ್ಕಾರ ಅನುಸರಿಸುವ ಉದಾಸೀನ ಧೋರಣೆಯಿಂದಾಗಿಯೇ ಉಪನ್ಯಾಸಕರು ಮೌಲ್ಯಮಾಪನ ಕಾರ್ಯಕ್ಕೆ ಬಹಿಷ್ಕಾರ ಹಾಕುವಂತಹ ಬ್ಲ್ಯಾಕ್ ಮೇಲ್ ತಂತ್ರವನ್ನು ಬಳಸುತ್ತಾರೆ. ಇದಕ್ಕೆ ಇನ್ನುಮುಂದೆ ಅವಕಾಶ ಇಲ್ಲದಂತೆ ಸೂಕ್ತ ಕ್ರಮಕೈಗೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.