ಮಂಗಳವಾರ, ಏಪ್ರಿಲ್ 20, 2021
32 °C

ಮ್ಯಾನ್ಮಾರ್‌ನಲ್ಲಿ ಭೂಕಂಪ: 12 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾಂಗೂನ್ (ಎಪಿ/ಪಿಟಿಐ): ಉತ್ತರ ಮ್ಯಾನ್ಮಾರ್‌ನಲ್ಲಿ ಭಾನುವಾರ ಪ್ರಬಲ ಭೂಕಂಪ ಸಂಭವಿಸಿದ್ದು, 12 ಜನರು ಮೃತಪಟ್ಟಿದ್ದಾರೆ.ಭೂಕಂಪನದ ತೀವ್ರತೆಯು  6.8ರಷ್ಟಿದ್ದು, ಸ್ಥಳೀಯ ಕಾಲಮಾನ ಬೆಳಿಗ್ಗೆ 7.42ರ ವೇಳೆಯಲ್ಲಿ    ಸಂಭವಿಸಿದೆಪ್ರಮುಖ ಗಣಿಗಾರಿಕೆ ಪ್ರದೇಶವಾದ ಮಾಕೊದಲ್ಲೂ ಭೂಕಂಪದ ಪರಿಣಾಮ ಬೀರಿದ್ದು, ದೇವಾಲಯಗಳು ನಾಶವಾಗಿವೆ.ನೆಪೆತಾವ್‌ನಲ್ಲಿರುವ ಪಾರ್ಲಿಮೆಂಟ್ ಕಟ್ಟದ ಕಿಟಕಿಗಳು ಬಿರುಕು ಬಿಟ್ಟಿವೆ.ಬ್ಯಾಂಕಾಕ್/ಇಂಫಾಲ ವರದಿ: ಭೂಕಂಪವು ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ಗೂ ಪಸರಿಸಿದ್ದು, ಇಲ್ಲಿಯೂ ಭೂಮಿ ಕಂಪಿಸಿದೆ. ಜನರು ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ.  ಮಣಿಪುರದ ರಾಜಧಾನಿ ಇಂಫಾಲದಲ್ಲೂ ಬೆಳಿಗ್ಗೆ 6.44ರ ಸಮಯದಲ್ಲಿ ಅರ್ಧ ನಿಮಿಷ ಭೂಮಿ ಕಂಪಿಸಿದೆ. ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ

ಅಮೆರಿಕದಲ್ಲೂ ಭೂಕಂಪ

ಲ್ಯೂಯಿಸ್‌ವೆಲ್ಲೆ/ಅಮೆರಿಕ(ಎಪಿ):ಅಮೆರಿಕದ ಎಂಟು ರಾಜ್ಯಗಳಲ್ಲಿ ಶನಿವಾರ ಭೂಕಂಪನದ ಅನುಭವವಾಗಿದ್ದು ಜನರನ್ನು ಗಾಬರಿಗೊಳಿಸಿದೆ. ಕಂಪನದ ತೀವ್ರತೆಯು 4.3ರಷ್ಟು ದಾಖಲಾಗಿತ್ತು.  ಇದರ ಕೇಂದ್ರ ಕೆಂಟಕಿಯಲ್ಲಿತ್ತು ಎಂದು ಭೂಗರ್ಭಶಾಸ್ತ್ರಜ್ಞರು ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.