ಭಾನುವಾರ, ಜನವರಿ 19, 2020
28 °C

ಮ್ಯಾನ್‌ ಹೋಲ್‌ ಮುಚ್ಚಳ ಹಾಕಿ

–ಜೈಶಂಕರ್,ಬಿಟಿಎಸ್‌ ರಸ್ತೆ,ವಿಲ್ಸನ್‌ ಗಾರ್ಡನ್ Updated:

ಅಕ್ಷರ ಗಾತ್ರ : | |

ವಿಲ್ಸನ್‌ ಗಾರ್ಡನ್‌ನ ಬಿಟಿಎಸ್‌ ಮುಖ್ಯರಸ್ತೆ ಆಡುಗೋಡಿ ಅಂಚೆ ಕಚೇರಿಯ ಹತ್ತಿರ ಇರುವ ಮ್ಯಾನ್‌ಹೋಲ್‌ ಅನೇಕ ವರ್ಷಗಳಿಂದ ತೆರೆದೇ ಇದೆ. ಈಗ ಈ ಮ್ಯಾನ್‌ಹೋಲ್‌ನಿಂದ ಚರಂಡಿ ನೀರು ಹೊರಬರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ.



ಅಲ್ಲದೆ ಇಲ್ಲಿ ಓಡಾಡುವ ಶಾಲಾಮಕ್ಕಳು, ಹಿರಿಯನಾಗರಿಕರು ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತಿದೆ. ಈ ಬಗ್ಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ 21–9–2013ರಂದು ಪತ್ರ ಬರೆಯಲಾಗಿದೆ. ಇದಾಗಿ ಎರಡು ತಿಂಗಳು ಕಳೆದಿದ್ದರೂ ಈವರೆಗೆ ಯಾರೂ ಕ್ರಮ ಕೈಗೊಂಡಿಲ್ಲ.

ಪ್ರತಿಕ್ರಿಯಿಸಿ (+)