ನಗರದಲ್ಲಿನ ಪಂಚತಾರಾ, ಬಹುತಾರಾ ಹೋಟೆಲ್ಗಳೆಲ್ಲ ಕೇಂದ್ರೀಕೃತಗೊಂಡಿರುವುದು ವೈಟ್ಫೀಲ್ಡ್, ಎಂಜಿ ರಸ್ತೆ ಮತ್ತು ವಿಧಾನಸೌಧದ ಅಕ್ಕಪಕ್ಕ ಹಾಗೂ ಜಯನಗರ ಪ್ರದೇಶದಲ್ಲಿ.

ಇದನ್ನು ಬಿಟ್ಟರೆ ಬೆಂಗಳೂರಿನ ಪಶ್ಚಿಮ, ಉತ್ತರ ಭಾಗದಲ್ಲಿ (ಯಶವಂತಪುರ ಸುತ್ತಮುತ್ತ) ತಾರಾ ಹೋಟೆಲ್ಗಳೇ ಇರಲಿಲ್ಲ. ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ದೇವನಹಳ್ಳಿ ರಸ್ತೆಗೆ ಸ್ಥಳಾಂತರಗೊಂಡ ನಂತರವಂತೂ ಈ ಭಾಗದಲ್ಲಿ ಐಷಾರಾಮಿ ಹೋಟೆಲ್ನ ಅಗತ್ಯ, ಬೇಡಿಕೆ ಎರಡೂ ಹೆಚ್ಚಿತ್ತು.

ಇದೀಗ ಆ ಕೊರತೆ ನೀಗಿಸುವ ಪ್ರಯತ್ನ ಆರಂಭವಾಗಿದೆ. ಅದಕ್ಕೆ ನಿದರ್ಶನ ಎಂಬಂತೆ ಕಳೆದ ತಿಂಗಳು ಮೆಟ್ರೊ ಹಿಂಭಾಗದಲ್ಲಿ ತಲೆಯೆತ್ತಿದ ಶೆರಾಟನ್ ಹೋಟೆಲ್ ಜತೆ ಎರಡು ದಿನದಲ್ಲಿ ಮತ್ತೆರಡು ತಾರಾ ಹೋಟೆಲ್ಗಳು ಯಶವಂತಪುರ ಆಸುಪಾಸು ಕಾರ್ಯಾರಂಭ ಮಾಡಿವೆ.

ತಾಜ್ ವಿವಂತ
ಪ್ರತಿಷ್ಠಿತ ತಾಜ್ ಸಮೂಹದ ಐಷಾರಾಮಿ ಸರಣಿಯ `ವಿವಂತ ಬೈ ತಾಜ್ ಎಟ್ ಯಶವಂತಪುರ~ ಹೋಟೆಲ್ಗೆ ಗುರುವಾರ ಅಧಿಕೃತ ಚಾಲನೆ ಸಿಕ್ಕಿದೆ. ತುಮಕೂರು ರಸ್ತೆಗೆ ಹೊಂದಿಕೊಂಡು 3.5 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು, ಅತ್ಯಂತ ಕಲಾತ್ಮಕವಾಗಿ ನಿರ್ಮಾಣಗೊಂಡಿದೆ.

11 ಮಹಡಿಗಳಲ್ಲಿ ವಿವಿಧ ಶ್ರೇಣಿಯ 327 ಕೋಣೆಗಳು, ಯೋಗ ಮತ್ತು ಫಿಟ್ನೆಸ್ ಕೇಂದ್ರ, ದೇಶ ವಿದೇಶದ ವೈವಿಧ್ಯಮಯ ಖಾದ್ಯಗಳನ್ನು ಉಣಬಡಿಸುವ ನಾಲ್ಕು ರೆಸ್ಟೊರೆಂಟ್ಗಳು, 2 ನೇ ಮಹಡಿಯಲ್ಲಿ ಅತ್ಯಾಕರ್ಷಕ ಈಜುಗೊಳಗಳಿಂದ ಸಜ್ಜಿತವಾಗಿದೆ. ನಗರದಲ್ಲಿಯೇ ತಾರಾ ಹೋಟೆಲ್ಗಳ ಪೈಕಿ ಅತಿ ದೊಡ್ಡ ಸಮ್ಮೇಳನ ಸಭಾಂಗಣ ಹೊಂದಿರುವುದು ಇದರ ವಿಶೇಷ.

ಇದು ದೇಶದ 21ನೇ ಮತ್ತು ಬೆಂಗಳೂರಿನ 3 ನೇ ವಿವಂತ ಶ್ರೇಣಿಯ ಹೋಟೆಲ್. ಅಂತರ್ರಾಷ್ಟ್ರೀಯ ಪ್ರದರ್ಶನ ಕೇಂದ್ರ, ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹತ್ತಿರದಲ್ಲಿ ಇರುವುದರ ಜತೆಗೆ, ಯಶವಂತಪುರ ರೈಲು ನಿಲ್ದಾಣದಿಂದ ಇಲ್ಲಿಗೆ ಒಂದು ನಿಮಿಷದ ಹಾದಿ. ವಿಮಾನ ನಿಲ್ದಾಣಕ್ಕೆ ಕೇವಲ 35 ಕಿಮಿ ದೂರ. ಬೆಂಗಳೂರಿನ ಪರಂಪರೆಯನ್ನು ನಾವು ಇಲ್ಲಿ ಅಳವಡಿಸಿಕೊಂಡಿದ್ದೇವೆ ಎನ್ನತ್ತಾರೆ ಹೋಟೆಲ್ನ ಸಿಒಒ ವೀರ್ವಿಜಯ ಸಿಂಗ್.

ಮೊವೆನಪಿಕ್
ಹೊಸ ಬಿಇಎಲ್ ರಸ್ತೆ ಮತ್ತು ರಿಂಗ್ ರಸ್ತೆಗೆ ಹೊಂದಿಕೊಂಡು ಮತ್ತೀಕೆರೆಯಲ್ಲಿ ಬುಧವಾರ ಪ್ರಾರಂಭವಾದ ಮೊವೆನ್ಪಿಕ್ ಹೋಟೆಲ್ ಅಂಡ್ ಸ್ಪಾ ಕೂಡ ಪಂಚತಾರಾ ಶ್ರೇಣಿಯ ಮತ್ತೊಂದು ಐಷಾರಾಮಿ ಹೋಟೆಲ್.

ಎಂಎಸ್ ರಾಮಯ್ಯ ಸಮೂಹ ಇದರ ಸಂಸ್ಥಾಪಕರು. ಈ ಹೋಟೆಲ್ನ ಇನ್ನೊಂದು ವಿಶೇಷ ಎಂದರೆ ಇದರ ಮೂಲಕ ಸ್ವಿಜರ್ಲೆಂಡ್ನ ಆತಿಥ್ಯ ಕಂಪೆನಿ `ಮೊವೆನ್ಪಿಕ್~ ಮೊದಲ ಸಲ ಭಾರತಕ್ಕೆ ಕಾಲಿಟ್ಟಿದೆ. ಅಂತರ್ರಾಷ್ಟ್ರೀಯ ದರ್ಜೆಯ ಹೋಟೆಲ್ ಸೇವೆಯನ್ನು ಬೆಂಗಳೂರಿಗೆ ಪರಿಚಯಿಸುತ್ತಿದೆ.

182 ಐಷಾರಾಮಿ ಕೋಣೆಗಳು, ಆಕರ್ಷಕ ವಿನ್ಯಾಸದ ಭವ್ಯ ಕಟ್ಟಡ, ಕಣ್ಮನ ಸೆಳೆಯುವ ಜಲಧಾರೆ, ದೀಪ ವ್ಯವಸ್ಥೆ, 4 ರೆಸ್ಟೊರೆಂಟ್ಗಳು, ಸ್ಪಾ, ಒಂದು ಇಡೀ ಮಹಡಿಯನ್ನೇ ಆವರಿಸಿಕೊಂಡ ಬ್ಯಾಂಕ್ವೆಟ್ ಹಾಲ್ಗಳು ಮತ್ತಿತರ ಸೌಲಭ್ಯಗಳು ಇಲ್ಲಿವೆ.

ಎಲ್ಲ ಕೋಣೆಗಳಿಗೆ ಮಾತ್ರವಲ್ಲದೆ ಇಡೀ ಹೋಟೆಲ್ನಲ್ಲಿ ಉಚಿತ ವೈಫೈ, ನಿಗದಿತ ಸಮಯದ ಚೆಕ್ಇನ್- ಚೆಕ್ಔಟ್ ಬದಲಾಗಿ 24 ತಾಸು `ದರ ಪದ್ಧತಿ~ ಇಲ್ಲಿನ ವಿಶೇಷ. ಬೆಂಗಳೂರಲ್ಲಿ ಬೇರಾವುದೇ ತಾರಾ ಹೋಟೆಲ್ನಲ್ಲೂ ಈ ವ್ಯವಸ್ಥೆ ಇಲ್ಲ ಎನ್ನುತ್ತಾರೆ ಮೊವೆನ್ಪೆಕ್ ಸಮೂಹದ ಅಧ್ಯಕ್ಷ ಜೀನ್ ಗೇಬ್ರಿಯೆಲ್ ಪೆರೇಸ್ ಮತ್ತು ಎಂಎಸ್ಆರ್ ಹೋಟೆಲ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಕೋದಂಡರಾಮ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.