ಬುಧವಾರ, ಜನವರಿ 29, 2020
28 °C

ಯಾದಗಿರಿಗೆ ರೈಲ್ವೆ ಬೋಗಿ ಘಟಕ: ಲೋಕಸಭೆ ಸಮ್ಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರಾಜ್ಯದ 30ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿರುವ ದಕ್ಷಿಣ ಮಧ್ಯ ರೈಲ್ವೆ ವಲಯಕ್ಕೆ ಒಳಪಡುವ ಯಾದಗಿರಿಯಲ್ಲಿ ರೂ 7,500 ಕೋಟಿ ಮೊತ್ತದಲ್ಲಿ ರೈಲ್ವೆ ಬೋಗಿ ಘಟಕ ಆರಂಭಕ್ಕೆ ಲೋಕಸಭೆ  ಗುರುವಾರ ಅಂಗೀಕಾರ ನೀಡಿದೆ.ಮಾರ್ಗಗಳ ವಿದ್ಯುದೀಕರಣ, ಮೇಲ್ಸೇ­ತುವೆ ನಿರ್ಮಾಣ ಮತ್ತಿತರ ಕಾಮಗಾರಿಗಳನ್ನು ಕೈಗೊಳ್ಳಲು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರೂ 70,759 ಕೋಟಿ ಮೊತ್ತದ ರೈಲ್ವೆ ಪೂರಕ ಬೇಡಿಕೆಗಳ ಅಂದಾಜು ಮಂಡಿಸಲಾಗಿದ್ದು, ಇದರಲ್ಲಿ ಯಾದಗಿರಿ ಯೋಜನೆಯ ಪ್ರಸ್ತಾಪವೂ ಸೇರಿದೆ.ತೆಲಂಗಾಣ ಮತ್ತಿತರ ವಿಷ­ಯ­ಗಳ ಕುರಿತು ವಿವಿಧ ಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದ್ದರಿಂದ 2013–14ರ ಸಾಲಿನ ಸಾಲಿನ ಪೂರಕ ಬೇಡಿಕೆಗಳ ಅನುದಾನಕ್ಕೆ ಯಾವುದೇ ಚರ್ಚೆ ಇಲ್ಲದೆ ಅಂಗೀಕಾರ ನೀಡಲಾಯಿತು.ಪಶ್ಚಿಮ ಬಂಗಾಳದ ಕಾಟ್ವಾ ಅಜಿಮ್‌­ಗಂಜ್‌, ನಲ್‌ಹತಿ ಅಜಿಮ್‌­ಗಂಜ್‌ ಹಾಗೂ ತಿಲ್ದಂಗ ನವ ಫರಕ್ಕ ಬೈಪಾಸ್‌ ಮಾರ್ಗಗಳ ವಿದ್ಯುದೀ­ಕರಣಕ್ಕೆ ಪ್ರಸ್ತಾಪ ಮಾಡಲಾಗಿದೆ. ಈ ಹಿಂದೆ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಕೆ.ಎಚ್‌. ಮುನಿಯಪ್ಪ ಕೋಲಾರಕ್ಕೆ ರೈಲ್ವೆ ಬೋಗಿ ಘಟಕ ಮಂಜೂರು ಮಾಡಿದ್ದು, ಇದೀಗ ಯಾದಗಿರಿಗೂ ಈ ಅವಕಾಶ ಸಿಕ್ಕಿದೆ.

ಪ್ರತಿಕ್ರಿಯಿಸಿ (+)