ಭಾನುವಾರ, ಜೂನ್ 13, 2021
22 °C

ಯಾಸೀನ್‌, ಅಖ್ತರ್‌, ರೆಹಮಾನ್‌ ಹಾಜರಿಗೆ ಕೋರ್ಟ್‌ ವಾರಂಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ದೇಶದ ವಿವಿಧೆಡೆ ಭಯೋತ್ಪಾದನಾ ದಾಳಿಗೆ ಸಂಚು ರೂಪಿ­ಸಿ­ದ್ದರು ಎನ್ನಲಾದ ಪ್ರಕರಣಕ್ಕೆ ಸಂಬಂಧಿ­ಸಿ­ದಂತೆ­ ಇಂಡಿ­ಯನ್‌ ಮುಜಾ­ಹಿದೀನ್‌ ಸಹ­­ಸಂಸ್ಥಾ­­ಪಕ ಯಾಸೀನ್‌ ಭಟ್ಕಳ ಮತ್ತು­ ಆತನ ಇಬ್ಬರು ಸಹಚರರನ್ನು ಏ. 2­ರಂದು ತನ್ನೆದುರು ಹಾಜರುಪ­ಡಿ­ಸಲು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ವಿಶೇಷ ನ್ಯಾಯಾಲಯ ವಾರಂಟ್‌ ಜಾರಿ ಮಾಡಿದೆ.ಪ್ರಕರಣದ ರಹಸ್ಯ ವಿಚಾರಣೆ ನಡೆ­ಸಿದ ಜಿಲ್ಲಾ ನ್ಯಾಯಾಧೀಶ ಐ.ಎಸ್‌. ಮೆಹ್ತಾ ಅವರು, ಭಟ್ಕಳ ಮತ್ತು ಆತನ ಸಹಚರರಾದ ಅಸಾದುಲ್ಲಾ ಅಖ್ತರ್‌ ಹಾಗೂ ಒಬೇದ್ ಉರ್‌ ರೆಹಮಾನ್‌ ಅವ­ರನ್ನು ತನ್ನೆದುರು ಹಾಜರುಪಡಿಸು­ವಂತೆ ವಾರಂಟ್‌ ಹೊರ­ಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಪ್ರಕರಣದ ಕುರಿತು ಮಂಗಳವಾರ ನಡೆದ ವಿಚಾರಣೆ ವೇಳೆ ಆರೋಪ ಪಟ್ಟಿ­ಯಲ್ಲಿ ಹೆಸರಿಸಲಾದ ಈ ಮೂವರನ್ನು  ನ್ಯಾಯಾ­ಲಯಕ್ಕೆ ಹಾಜರುಪಡಿಸಿರಲಿಲ್ಲ ಎಂದು ಅವು ಹೇಳಿವೆ. ಭಟ್ಕಳ ಮತ್ತು ಅಖ್ತರ್‌ ಸದ್ಯ ಮಹಾ­ರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ವಶದಲ್ಲಿದ್ದರೆ, ಒಬೆದ್‌ ಉರ್‌ ರೆಹ­ಮಾನ್‌ ಪ್ರಕರಣವೊಂದಕ್ಕೆ ಸಂಬಂ­ಧಿ­ಸಿ­ದಂತೆ ಬೆಂಗಳೂರು ಪೊಲೀಸರ ವಶದಲ್ಲಿ­ದ್ದಾರೆ ಎನ್ನಲಾಗಿದೆ.ಪ್ರಕರಣದ ವಿಚಾರಣೆಯನ್ನು ಏ. 2ಕ್ಕೆ ನಿಗದಿಗೊಳಿಸಿರುವ ನ್ಯಾಯಾಲಯವು ಆರೋಪಪಟ್ಟಿ ಮತ್ತು ಅದರೊಂದಿಗೆ ಸಲ್ಲಿಸಿದ ಇತರೆ ದಾಖಲೆಗಳ ಪ್ರತಿ­ಗಳನ್ನು ಆರೋಪಿ ಪರ ವಕೀಲರಿಗೆ ಸಲ್ಲಿಸುವಂತೆ ಎನ್‌ಐಎಗೆ ಸೂಚಿಸಿದೆ. ಎನ್‌ಐಎ ಸಲ್ಲಿಸಿದ 277 ಪುಟಗಳ ಪೂರಕ ಆರೋಪ­ ಪಟ್ಟಿ­ಯೊಂದಿಗೆ ಸಲ್ಲಿ­ಸಿದ ಇತರ ದಾಖಲೆ­ಗಳ ಪರಿಶೀಲನೆ ನಡೆ­ಯುತ್ತಿದೆ ಎಂದು ಆರೋಪಿ ಪರ ವಕೀಲ ನ್ಯಾಯಾಲಯಕ್ಕೆ ತಿಳಿಸಿದರು ಎಂದು ಮೂಲಗಳು ಹೇಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.