ನ್ಯೂಯಾರ್ಕ್ (ಪಿಟಿಐ): ಯಾಹೂ ಅಂತರ್ಜಾಲ ಸಂಸ್ಥೆಯ ಸಹ ಸಂಸ್ಥಾಪಕ ಜೆರ್ರಿ ಯಂಗ್ ಬುಧವಾರ ಸಂಸ್ಥೆಯ ತಮ್ಮ ಎಲ್ಲ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದಾರೆ.

ಯಾಹೂ ಸಂಸ್ಥೆಯು, ಗೂಗಲ್ ಹಾಗೂ ಫೇಸ್ಬುಕ್ನಂಥ ಜಾಲತಾಣಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಹಾಗೂ ಭಾರಿ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಸಂದರ್ಭದಲ್ಲಿಯೇ ಯಂಗ್ ಸಂಸ್ಥೆಯನ್ನು ತೊರೆದಿದ್ದಾರೆ.

`17 ವರ್ಷಗಳ ಹಿಂದೆ ಸಂಸ್ಥೆಯನ್ನು ಹುಟ್ಟುಹಾಕಿದಾಗಿನಿಂದ ಇಲ್ಲಿಯವರೆಗಿನ ನನ್ನ ಅವಧಿಯು ನನ್ನ ಬದುಕಿನ ಅತ್ಯಂತ ಉಪಯುಕ್ತ ಹಾಗೂ ಪ್ರೇರಕ ಕ್ಷಣಗಳಾಗಿವೆ. ಇದೀಗ ಸಂಸ್ಥೆಯನ್ನು ಹೊರತುಪಡಿಸಿ ನನ್ನ ಇತರ ಆಸಕ್ತಿಗಳಿಗೆ ಸ್ಪಂದಿಸುವ ಸಮಯ ಬಂದಿದೆ~ ಎಂದು 43 ವರ್ಷದ ಯಂಗ್ ಅವರು ಯಾಹೂ ಮಂಡಳಿ ಅಧ್ಯಕ್ಷ ರಾಯ್ ಬಾಸ್ಟಾಕ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಎರಡು ವಾರಗಳ ಹಿಂದಷ್ಟೇ ಇ-ಬೇ ಮಾಜಿ ಕಾರ್ಯನಿರ್ವಹಣಾಧಿಕಾರಿ ಸ್ಕಾಟ್ ಥಾಮ್ಸನ್ ಅವರನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು.

ನೂತನ ಸಿಇಒ ಥಾಮ್ಸನ್ ಹಾಗೂ ಯಾಹೂ ನಾಯಕತ್ವ ತಂಡದ ಸಾಮರ್ಥ್ಯದ ಬಗ್ಗೆ ಯಂಗ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.