ಶನಿವಾರ, ಜೂನ್ 19, 2021
22 °C

ಯುಎನ್‌ಎಚ್‌ಆರ್‌ಸಿ: ಬದಲಾದ ಭಾರತದ ನಿಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ (ಪಿಟಿಐ): ಪ್ರಸ್ತುತ ನಡೆಯುತ್ತಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ಅಧಿವೇಶನದಲ್ಲಿ (ಯುಎನ್‌ಎಚ್‌ಆರ್‌ಸಿ) ಶ್ರೀಲಂಕಾ ವಿರುದ್ಧ ಅಮೆರಿಕ ಮಂಡಿಸಿರುವ ನಿರ್ಣಯದ ಪರವಾಗಿ ಮತ ಚಲಾಯಿಸುವ ಇಂಗಿತ ವ್ಯಕ್ತಪಡಿಸುವ ಮೂಲಕ ಭಾರತವು ಲಂಕಾಗೆ ತೀವ್ರ ಆಘಾತ ನೀಡಿದೆ ಎಂದು ಇಲ್ಲಿನ ಮಾಧ್ಯಮವೊಂದು ಹೇಳಿದೆ.`ಯುಎನ್‌ಎಚ್‌ಆರ್‌ಸಿ ಯಲ್ಲಿ ಯಾವುದೇ ದೇಶದ ನಿರ್ದಿಷ್ಟ ನಿರ್ಣಯವನ್ನು ವಿರೋಧಿಸುವುದಾಗಿ ಭಾರತ ಸರ್ಕಾರ ಸ್ಪಷ್ಟಪಡಿಸಿತ್ತು. ಈ ವಿಷಯದಲ್ಲಿ ಭಾರತವು ಸಾರ್ವತ್ರಿಕ ನಿಲುವು ತಳೆಯುವುದೆಂದು ನಾವು ಭಾವಿಸಿದ್ದೆವು~ ಎಂದು ದಿನಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಅಮೆರಿಕದ ದ್ವಿಮುಖ ನೀತಿಯನ್ನು ಭಾರತ ಅನುಮೋದಿಸಿದೆ ಎಂದು ಟೀಕಿಸಿರುವ ಪತ್ರಿಕೆಯು, ಇದರಿಂದ ಅಮೆರಿಕದ ನಿರ್ಣಯವನ್ನು ವಿಫಲಗೊಳಿಸುವ ಲಂಕಾ ಪ್ರಯತ್ನಕ್ಕೆ ಅಡ್ಡಿಯಾಗಿದೆ ಎಂದು ಹೇಳಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.