ಶನಿವಾರ, ಏಪ್ರಿಲ್ 17, 2021
23 °C

ಯುದ್ಧ ವಿಮಾನ ಅಪಘಾತ: ಪೈಲಟ್ ಗಂಭೀರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ಯಾಂಗ್ಟಕ್ (ಪಿಟಿಐ): ಉತ್ತರ ಸಿಕ್ಕಿಂನ ಗುಡ್ಡಗಾಡು ಪ್ರದೇಶ ದಲ್ಲಿ ಶುಕ್ರವಾರ ಭಾರತೀಯ ವಾಯುಪಡೆಗೆ ಸೇರಿದ ಜಾಗ್ವಾರ್ ಯುದ್ಧ ವಿಮಾನ ಅಪಘಾತಕ್ಕೀಡಾಗಿದ್ದು, ಘಟನೆ ಯಲ್ಲಿ ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಧ್ಯಾಹ್ನ 1.15ಕ್ಕೆ ಈ ಯುದ್ಧ ವಿಮಾನ ಅಪಘಾತ ಕ್ಕೀಡಾಗಿದೆ. ಫ್ಲೈಟ್ ಲೆಫ್ಟಿನೆಂಟ್ ಯೋಗೇಶ್ ಯಾದವ್ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದಾರೆ.

ಅಪಘಾತ ಸ್ಥಳಕ್ಕೆ ದಿಢೀರನೆ ಧಾವಿಸಿದ ಸ್ಥಳೀಯರು ಪೈಲಟ್‌ನನ್ನು ರಕ್ಷಿಸಿ, ಸಮೀಪದ ಶಾಲೆಯ ಬಳಿಯಲ್ಲಿ ಇರಿಸಿದ ನಂತರ ವಾಯುಪಡೆಯ ಅಧಿಕಾರಿಗಳು ಹೆಲಿಕಾಪ್ಟರ್ ಮೂಲಕ ಯೋಗೇಶ್ ಅವರನ್ನು ಸಿಲಿಗುರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.