ಬುಧವಾರ, ಮೇ 18, 2022
24 °C

ಯುಪಿಸಿಎಲ್‌ಗೆ ಸ್ವಾಮೀಜಿ ಭೇಟಿ ಇಂದು- ಪರಿಸ್ಥಿತಿ ಪರಿಶೀಲನೆ; ಸಮಸ್ಯೆ ಪರಿಹರಿಸುವವರೆಗೂ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ನಂದಿಕೂರಿನಲ್ಲಿರುವ ಉಷ್ಣ ವಿದ್ಯುತ್ ಸ್ಥಾವರ ‘ಉಡುಪಿ ಪವರ್ ಕಂಪೆನಿ ಲಿ.’(ಯುಪಿಸಿಎಲ್) ಕುರಿತು ಅಧಿಕಾರಿಗಳು ಎಲ್ಲವೂ ಸರಿ ಇದೆ ಎಂದು ಹೇಳುತ್ತಾರೆ, ಆದರೆ ಪರಿಸರವಾದಿಗಳು ಸರಿಯಿಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಬಹಳಷ್ಟು ಸಂದೇಹ, ಸಮಸ್ಯೆಗಳಿಗೆ ಉತ್ತರ ದೊರಕಿಲ್ಲ. ಹೀಗಾಗಿ ಮತ್ತೆ ಬುಧವಾರ ಖುದ್ದಾಗಿ ಜನರ ಸಮಸ್ಯೆ ಆಲಿಸುವೆ. ಅಲ್ಲಿನ ಸ್ಥಿತಿ ಜನರಿಗೆ ವಿರುದ್ಧವಾಗಿದೆ ಎನ್ನುವುದು ಗಮನಕ್ಕೆ ಬಂದರೆ ಅದನ್ನು ಸರಿಪಡಿಸುವವರೆಗೂ ಮಾ. 19ರಿಂದ ‘ನಿತ್ಯೋಪವಾಸ’ ಕೈಗೊಳ್ಳುವೆ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಇಲ್ಲಿ ಎಚ್ಚರಿಕೆ ನೀಡಿದರು.

ಯುಪಿಸಿಎಲ್‌ನ ಸಮಸ್ಯೆಗಳ ಕುರಿತಂತೆ ಮಂಗಳವಾರ ಮತ್ತೆ ಕರೆದಿದ್ದ ಮಾಧ್ಯಮ ಸಂವಾದದ ಬಳಿಕ ಸ್ವಾಮೀಜಿ ತಮ್ಮ ನಿರ್ಧಾರ ಪ್ರಕಟಿಸಿದರು. ಅಲ್ಲಿನ ಎಲ್ಲವೂ ಸರಿಯಾಗುವವರೆಗೆ ಕಂಪೆನಿ ತನ್ನ ಕಾರ್ಯ ಸ್ಥಗಿತಗೊಳಿಸಬೇಕು ಎಂದು ಪುನರುಚ್ಛರಿಸಿದರು. ಸಂವಾದದಲ್ಲಿ ಯುಪಿಸಿಎಲ್ ಅಧಿಕಾರಿಗಳು, ಪರಿಸರ ತಜ್ಞರು ಹಾಗೂ ಮಾಧ್ಯಮದವರು ಮಾತ್ರವೇ ಪಾಲ್ಗೊಂಡಿದ್ದರು.

 

ಧರ್ಮ, ಅಧ್ಯಾತ್ಮ ಎಂದುಕೊಂಡಿರುವ ಸ್ವಾಮೀಜಿ ಪರಿಸರದ ಬಗೆಗೆಲ್ಲ ಏಕೆ ಹೋರಾಟ ಮಾಡಬೇಕು ಎಂದು ಹಲವರು ಕೇಳುತ್ತಿದ್ದಾರೆ. ಆದರೆ ನಮ್ಮ ಗ್ರಾಮ, ಸಂಸ್ಕೃತಿ ಇದ್ದರೆ ಮಾತ್ರವೇ ಧರ್ಮ, ಅಧ್ಯಾತ್ಮ ಉಳಿಯಲು ಸಾಧ್ಯ. ಜನರ ಕಷ್ಟ ನಿವಾರಣೆಗೆ ಸ್ಪಂದಿಸುವುದೂ ಧರ್ಮವೇ. ಹೀಗಾಗಿ ಕರಾವಳಿ ಪರಿಸರದಲ್ಲಿ ಜನರಿಗೆ ಆಗುತ್ತಿರುವ ತೊಂದರೆ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿರುವೆ ಎಂದರು.ನಂದಿಕೂರು ಪರಿಸರದಲ್ಲಿ ಯುಪಿಸಿಎಲ್ ಕಂಪೆನಿಯಿಂದ ಸಮಸ್ಯೆ ಉಂಟಾಗಿವೆ ಎನ್ನುವುದನ್ನು ಸರ್ಕಾರವೇ ಒಪ್ಪಿಕೊಂಡಿದೆ. ಅಲ್ಲಿನ ಸಮಸ್ಯೆ ಒಂದು ತಿಂಗಳಲ್ಲಿ ಬಗೆಹರಿಸಿಕೊಡುವುದಾಗಿ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಕಂಪೆನಿಗೆ ನೋಟಿಸ್ ನೀಡಿದೆ. ಇಷ್ಟೆಲ್ಲ ಆದಾಗ್ಯೂ ಅಲ್ಲಿನ ಸಮಸ್ಯೆ ನಿವಾರಣೆಯಾಗಿಲ್ಲ. ಕಳೆದ ತಿಂಗಳು ಅಲ್ಲಿಗೆ ಭೇಟಿ ನೀಡಿದ್ದಾಗ ಹಲವು ಸಮಸ್ಯೆಗಳನ್ನು ಕಂಡಿದ್ದೆ. ಅವನ್ನು ಬಗೆಹರಿಸಲಾಗಿದೆ ಎಂದು ಕಂಪೆನಿ ಪ್ರತಿನಿಧಿಗಳು ನೀಡಿರುವ ಸಮರ್ಥನೆ ತೃಪ್ತಿ ತಂದಿಲ್ಲ.

 

ಮಳೆಗಾಲದಲ್ಲಿ ಹಾರುಬೂದಿ ಹೊಂಡದಲ್ಲಿ ನೀರು ತುಂಬಿಕೊಂಡು ಉಕ್ಕಿದರೆ ಪರಿಹಾರವೇನು ಎನ್ನುವ ಬಗೆಗೆ ಸಮಪರ್ಕಕ ಉತ್ತರವೂ ದೊರಕಿಲ್ಲ. ಹೀಗಾಗಿ ಮತ್ತೆ ಅಲ್ಲಿಗೆ ಭೇಟಿ ನೀಡಿ ತೀರ್ಮಾನಕ್ಕೆ ಬರಬೇಕಿದೆ ಎಂದರು. ಎಲ್ಲವನ್ನೂ ಸರಿಪಡಿಸಿದ್ದೇವೆ-ಯುಪಿಸಿಎಲ್: ಸ್ವಾಮೀಜಿ ಉಪವಾಸಕ್ಕೆ ಕುಳಿತುಕೊಳ್ಳುವಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿಲ್ಲ. ಎಲ್ಲ ತೊಂದರೆ ಸರಿಪಡಿಸಲಾಗಿದೆ. ಹಾರುಬೂದಿ ಸಮಸ್ಯೆ ನಿವಾರಿಸಿದ್ದೇವೆ. ಸ್ವಾಮೀಜಿ ಹಾಗೂ ಮಾಧ್ಯಮದವರನ್ನು ಒಟ್ಟಾಗಿಯೇ ಘಟಕಕ್ಕೆ ಕರೆದೊಯ್ದು ಸ್ಥಳ ಪರಿಶೀಲನೆ ಮಾಡಿಸುತ್ತೇವೆ. ಸ್ವಾಮೀಜಿ ಉಪವಾಸ ನಿರ್ಧಾರ ಕೈ ಬಿಡಬೇಕು ಎಂದು ಯುಪಿಸಿಎಲ್ ಕಂಪೆನಿ ವ್ಯವಹಾರಗಳ ಉಪಾಧ್ಯಕ್ಷ ಕಿಶೋರ್ ಆಳ್ವಾ ತಿಳಿಸಿದರು.ಇದಕ್ಕೂ ಮುನ್ನ ನಡೆದ ಮಾಧ್ಯಮ ಸಂವಾದದಲ್ಲಿ ಯುಪಿಸಿಎಲ್ ಅಧಿಕಾರಿಗಳು, ತಾವು ಕೈಗೊಂಡ ಎಲ್ಲ ಕ್ರಮಗಳನ್ನು ಸಮರ್ಥಿಸಿಕೊಂಡರು. ಪರಿಸರವಾದಿಗಳು ಅವರ ವಾದವನ್ನು ಸ್ಪಷ್ಟವಾಗಿ ತಳ್ಳಿಹಾಕಿದರು. ಇದೆಲ್ಲದರ ಬಳಿಕ ಸ್ವಾಮೀಜಿ, ನಂದಿಕೂರಿಗೆ ಇನ್ನೊಮ್ಮೆ ಭೇಟಿ ನೀಡಿ ಸ್ಥಳಪರಿಶೀಲಿಸುವ ನಿರ್ಧಾರ ಕೈಗೊಂಡರು.

‘ಮಧ್ಯಾಹ್ನ ಮಾತ್ರ ಭೋಜನ’

ಯುಪಿಸಿಎಲ್ ಪರಿಸರದ ಜನರು ಎಲ್ಲವೂ ಸರಿ ಇದೆ ಎಂದು ಹೇಳಿದರೆ ಸಮಾಧಾನವಾದೀತು. ಸಮಸ್ಯೆಯಲ್ಲಿಯೇ ನರಳುತ್ತಿದ್ದೇವೆ ಎಂದು ಹೇಳಿದರೆ, ಎಲ್ಲ ಸಮಸ್ಯೆಗಳನ್ನೂ ಬಗೆಹರಿಸುವವರೆಗೂ ನಿತ್ಯೋಪವಾಸ ಮಾಡುವೆ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಮಂಗಳವಾರ ಘೋಷಿಸಿದರು.

ಶನಿವಾರದಿಂದ ನಿತ್ಯೋಪವಾಸ ಜಾರಿಗೆ ಬರಲಿದ್ದು ಮಧ್ಯಾಹ್ನ ಮಾತ್ರವೇ ಊಟ. ಮುಂದಿನ 24 ಗಂಟೆಗಳವರೆಗೆ ನೀರು, ಹಾಲು, ಹಣ್ಣು ಕೂಡ ಸೇರಿದಂತೆ ಯಾವುದೇ ಆಹಾರ ಸೇವಿಸುವುದಿಲ್ಲ. ಬೀದಿಗಿಳಿದು ಹೋರಾಡುವುದಕ್ಕೆ ಹೋಗುವುದಿಲ್ಲ. ಸಾತ್ವಿಕ ಪ್ರತಿಭಟನೆ ಮೂಲಕ ಸಂಕಷ್ಟ ನಿವಾರಣೆಗೆ ಯತ್ನಿಸುವೆ. ಪ್ರಭಾವಿ ವ್ಯಕ್ತಿ, ಸಚಿವರಿಂದ ಒತ್ತಡ ಬಂದರೂಉಪವಾಸ ಕೈಬಿಡುವುದಿಲ್ಲ ಎಂದು ಶಪಥ ಮಾಡಿದರು.‘ಮಧ್ಯಾಹ್ನ ಮಾತ್ರ ಭೋಜನ’
ಯುಪಿಸಿಎಲ್ ಪರಿಸರದ ಜನರು ಎಲ್ಲವೂ ಸರಿ ಇದೆ ಎಂದು ಹೇಳಿದರೆ ಸಮಾಧಾನವಾದೀತು. ಸಮಸ್ಯೆಯಲ್ಲಿಯೇ ನರಳುತ್ತಿದ್ದೇವೆ ಎಂದು ಹೇಳಿದರೆ, ಎಲ್ಲ ಸಮಸ್ಯೆಗಳನ್ನೂ ಬಗೆಹರಿಸುವವರೆಗೂ ನಿತ್ಯೋಪವಾಸ ಮಾಡುವೆ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಮಂಗಳವಾರ ಘೋಷಿಸಿದರು.

ಶನಿವಾರದಿಂದ ನಿತ್ಯೋಪವಾಸ ಜಾರಿಗೆ ಬರಲಿದ್ದು ಮಧ್ಯಾಹ್ನ ಮಾತ್ರವೇ ಊಟ. ಮುಂದಿನ 24 ಗಂಟೆಗಳವರೆಗೆ ನೀರು, ಹಾಲು, ಹಣ್ಣು ಕೂಡ ಸೇರಿದಂತೆ ಯಾವುದೇ ಆಹಾರ ಸೇವಿಸುವುದಿಲ್ಲ. ಬೀದಿಗಿಳಿದು ಹೋರಾಡುವುದಕ್ಕೆ ಹೋಗುವುದಿಲ್ಲ. ಸಾತ್ವಿಕ ಪ್ರತಿಭಟನೆ ಮೂಲಕ ಸಂಕಷ್ಟ ನಿವಾರಣೆಗೆ ಯತ್ನಿಸುವೆ. ಪ್ರಭಾವಿ ವ್ಯಕ್ತಿ, ಸಚಿವರಿಂದ ಒತ್ತಡ ಬಂದರೂ ಉಪವಾಸ ಕೈಬಿಡುವುದಿಲ್ಲ ಎಂದು ಶಪಥ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.