ಬೆಂಗಳೂರು: `ಅಭಿವೃದ್ದಿ ಶೀಲ ರಾಷ್ಟ್ರಗಳು ಯುರೇನಿಯಂ ಶಕ್ತಿಯ ಉತ್ಪಾದನೆಯನ್ನು ಒಪ್ಪಿಕೊಳ್ಳುತ್ತಿರುವಾಗ ನಮ್ಮಲ್ಲಿ ಮಾತ್ರ ಈ ಕುರಿತು ಸಾಕಷ್ಟು ತಪ್ಪುಕಲ್ಪನೆಗಳಿವೆ. ಸ್ಥಾವರ ಸುತ್ತಮುತ್ತ ವಿಕಿರಣದ ಪ್ರಭಾವವನ್ನು ತಪ್ಪಿಸಲು ಸಾಕಷ್ಟು ಸಿದ್ದತೆ ನಡೆಸಿದ್ದೇವೆ~ ಎಂದು ಅಣು ಶಕ್ತಿ ಇಲಾಖೆಯ ಮುಖ್ಯಸ್ಥ ಡಾ.ಆರ್.ಮೊಹಂತಿ ಪ್ರತಿಪಾದಿಸಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ `ಅಣುಶಕ್ತಿ ಮತ್ತು ಮಾಲಿನ್ಯ~ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದ ಅವರು `ಯುರೇನಿಯಂ ಸ್ಥಾವರ ಸ್ಥಾಪನೆಯಿಂದ ಪರಿಸರಕ್ಕೆ ಯಾವುದೇ ಹಾನಿಯಾಗದು. ವರ್ಷವೊಂದಕ್ಕೆ ಪ್ರತಿ ವ್ಯಕ್ತಿ 7.4 ಕಿಲೊ ವಾಟ್ ವಿದ್ಯುತ್ ಬಳಸುತ್ತಿದ್ದು, ಈ ಯೋಜನೆಯಿಂದ ಹೆಚ್ಚಿನ ಉತ್ಪಾದನೆಗೆ ಅವಕಾಶವಿದ್ದು, ದೇಶ ಪ್ರಗತಿ ಹೊಂದಲು ಸಾಧ್ಯವಿದೆ~ ಎಂದು ಹೇಳಿದರು.

ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತಪಡಿಸಿದ ಯಾದಗಿರಿ ಜಿಲ್ಲೆಯ ಗೋಗಿ ಗ್ರಾಮಸ್ಥರು `ನಮಗೆ ಯುರೇನಿಯಂ ಸ್ಥಾವರ ಬೇಕಿಲ್ಲ. ಸರ್ಕಾರ ಖಾಸಗಿ ವಲಯಕ್ಕೆ ಮಣಿದು ಗ್ರಾಮಸ್ಥರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದೆ. ಸ್ಥಾವರ ಬೇಡ ಎಂಬ ಮನವಿಯನ್ನು ಸರ್ಕಾರ ಕೇಳುತ್ತಿಲ್ಲ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಯುರೇನಿಯಂ ಸ್ಥಾವರಕ್ಕಾಗಿ ಸಾವಿರಾರು ಕಿ.ಮೀ ಆಳ ಬಾವಿಗಳನ್ನು ತೋಡಲಾಗಿದ್ದು, ಸ್ಥಾವರ ಸ್ಥಾಪನೆಯಾಗುವ ಸೂಚನೆಯಾಗಿದೆ. ಇದರ ನೀರನ್ನು ಕಾರ್ಖಾನೆಗಳಿಗೆ ಬಳಸಿಕೊಂಡು, ಮಲಿನ ನೀರನ್ನು ಕೆರೆಗಳಿಗೆ ಬಿಡಲಾಗುತ್ತಿದೆ. ನೀರಿನಲ್ಲಿ ಯುರೇನಿಯಂ ಪ್ರಮಾಣ ಹೆಚ್ಚಾಗಿದ್ದು, ಈ ಭಾಗದಲ್ಲಿ ಹುಟ್ಟುವ ಮಕ್ಕಳು ಅಂಗವಿಕಲರಾಗುತ್ತಿದ್ದಾರೆ~ ಎಂದು ಆರೋಪಿಸಿದರು.

ಈ ಬಗ್ಗೆ ಸ್ಪಷ್ಟನೆ ನೀಡಿದ ಅಣು ಶಕ್ತಿ ಜನಜಾಗೃತಿ ಕಾರ್ಯಕ್ರಮಾಧಿಕಾರಿ ಡಾ.ಎಸ್.ಕೆ.ಮಲ್ಹೋತ್ರ, `ಇದಕ್ಕೆ ಯುರೇನಿಯಂ ಕಂಪೆನಿ ಕಾರಣವಲ್ಲ. ಈ ಮೊದಲೇ ನೀರಿನಲ್ಲಿ ಯುರೇನಿಯಂ ಅಂಶಗಳು ಪತ್ತೆಗೊಂಡಿದೆ. ಸ್ಥಾವರ ಪ್ರಾರಂಭವಾಗುವ ಮೊದಲೇ ನೀರಿನಲ್ಲಿ ಯುರೇನಿಯಂ ಅಂಶ ಕಂಡುಬರುವುದು ಸತ್ಯಕ್ಕೆ ದೂರವಾದ ಮಾತು~ ಎಂದರು.

ಇದರಿಂದ ಭಾವೋದ್ವೇಗಕ್ಕೆ ಒಳಗಾದ ಗ್ರಾಮಸ್ಥರು, `ಕಂಪೆನಿಗಳು ತಮ್ಮ ಲಾಭಕ್ಕಾಗಿ ಜನರ ಆರೋಗ್ಯವನ್ನು ಪಣಕ್ಕಿಟ್ಟಿದೆ. ಸ್ಥಾವರ ಸ್ಥಾಪನೆಯಾಗಲು ಬಿಡುವುದಿಲ್ಲ~ ಎಂದು ಹೇಳಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಎಸ್.ಸದಾಶಿವಯ್ಯ ಜನರ ಅಭಿಪ್ರಾಯ ಮತ್ತು ವಿಜ್ಞಾನಿಗಳ ವರದಿಯನ್ನು ಪರಿಗಣಿಸಿಯೇ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.