ಸೋಮವಾರ, ಜನವರಿ 27, 2020
26 °C

ಯುವಕರಿಗೆ ವಿವೇಕಾನಂದರು ಆದರ್ಶ

`ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ವಿಜಾಪುರ: `ಇಂದಿನ ಯುವಕರಿಗೆ ಸ್ವಾಮಿ ವಿವೇಕಾನಂದರು ಆದರ್ಶ. ಭಾರತೀಯ ಸಂಸ್ಕೃತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಮಹಾಪುರುಷ ಅವರು~ ಎಂದು ಡಾ.ಜಯಶ್ರೀ ಮುಂಡೇವಾಡಿ ಹೇಳಿದರು.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಗರ ಘಟಕದಿಂದ ಸೋಮವಾರ ಇಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಹಾಗೂ ನೇತಾಜಿ ಸುಭಾಷಚಂದ್ರ ಭೋಸ್ ಅವರ ಜನ್ಮದಿನಾಚರಣೆ ಹಾಗೂ ವಿದ್ಯಾರ್ಥಿ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ ಎಬಿವಿಪಿ ವಿಭಾಗ ಪ್ರಮುಖ ಶ್ರಿನಿವಾಸ ಎಸ್. ಬಳ್ಳಿ ಮಾತನಾಡಿ, `ಸ್ವಾಮಿ ವಿವೇಕಾನಂದರು ಹಾಗೂ ನೇತಾಜಿ ಸುಭಾಷಚಂದ್ರ ಬೋಸರು ಈ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದರೆ, ನೇತಾಜಿ ಸುಭಾಷಚಂದ್ರ ಬೋಸರು ದೇಶದ ರಕ್ಷಣೆಗೋಸ್ಕರ ಯುವ ಪಡೆಯನ್ನೇ ಕಟ್ಟಿಕೊಂಡು ಪ್ರಾಣದ ಹಂಗನ್ನು ತೊರೆದು ಬ್ರಿಟಿಷರಿಗೆ ತಲೆನೋವಾಗಿ ಪರಿಣಮಿಸಿದ್ದರು~ ಎಂದರು.ಸಾನ್ನಿಧ್ಯ ವಹಿಸಿದ್ದ ಜ್ಞಾನಯೋಗಾ ಶ್ರಮದ ಶಾಂ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಎಬಿವಿಪಿ ಜಿಲ್ಲಾ ಪ್ರಮುಖ ಕಿರಣ್ ನಡಕಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಎಬಿವಿಪಿ ನಗರ ಘಟಕದ ಅಧ್ಯಕ್ಷ ಎಂ.ಸಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.`ಯುವ ವೈಭವ- 2012~ ರ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ, ಪಾರಿತೋಷಕ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಕುಮಾರ ಬಿ.ಎಸ್., ಜಿಲ್ಲಾ ಸಂಚಾಲಕ ಸಿದ್ದು ಮದರಖಂಡಿ, ಶರತ್ ಬಿರಾದಾರ, ಅರುಣ ಶಿರಬೂರ, ರಮೇಶ ಯಡಹಳ್ಳಿ, ಸುಜೀತ್ ಚೌಧರಿ, ಶಿಲ್ಪಾ ಬಿರಾದಾರ, ಪ್ರೀತಿ ಪಾಟೀಲ, ಉಮಾ ಪಾಟೀಲ, ಕಲಾವತಿ, ಗಿರೀಶ್ ಸಾರವರ ಇತರರು ಸಮಾವೇಶದ ನೇತೃತ್ವ ವಹಿಸಿದ್ದರು. ಸಮಾವೇಶಕ್ಕೂ ಮೊದಲು ಸಿದ್ಧೇಶ್ವರ ದೇವಸ್ಥಾನದಿಂದ ವಿದ್ಯಾರ್ಥಿಗಳು ನಗರದಲ್ಲಿ ಶೋಭಾ ಯಾತ್ರೆ ನಡೆಸಿದರು.ಸಚಿವ ಬೊಮ್ಮೋಯಿ ಪ್ರವಾಸ

ವಿಜಾಪುರ:ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮೋಯಿ ಇದೇ 24ರ ರಾತ್ರಿ 10ಕ್ಕೆ ಆಲಮಟ್ಟಿಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. 25ರ ಬೆಳಿಗ್ಗೆ 8.30ಕ್ಕೆ ಆಲಮಟ್ಟಿಯಿಂದ ಗುಲ್ಬರ್ಗಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 

ಪ್ರತಿಕ್ರಿಯಿಸಿ (+)