ಸೋಮವಾರ, ಮೇ 17, 2021
28 °C

ಯುವ ಶಕ್ತಿ ಒಂದಾದಾಗ ಅಭಿವೃದ್ಧಿ ಸಾಧ್ಯ: ಸತ್ಯಜಿತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರತ್ಕಲ್: ಯುವಕರು ಒಂದುಗೂಡಿ ಸಾಮಾಜಿಕ ಚಿಂತನೆ ನಡೆಸಿದಾಗ ಸಮಾಜದ ಅಭಿವೃದ್ಧಿ ಸಾಧ್ಯ. ಭವ್ಯ ಭಾರತದ ನಿರ್ಮಾಣ ಯುವಕರಿದ ಹೊರತು ವೈಜ್ಞಾನಿಕತೆಯಿಂದ ಸಾಧ್ಯವಿಲ್ಲ ಎಂದು ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಸತ್ಯಜಿತ್ ಸುರತ್ಕಲ್ ತಿಳಿಸಿದ್ದಾರೆ. ಅವರು ಮಂಗಳವಾರ ಸುರತ್ಕಲ್ ತಡಂಬೈಲ್‌ನಲ್ಲಿ ನಡೆದ ವೀರಕೇಶರಿ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜ್ಯೋತಿಷಿ ಮಹೇಶ್ ಮೂರ್ತಿ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ, ಕ್ರೀಡಾ ಸಂಘಟನೆಯಲ್ಲಿ ಸಂಘ ಸಂಸ್ಥೆಗಳು ಪಾಲ್ಗೊಳ್ಳಬೇಕು. ದೇಶವನ್ನು ಪ್ರತಿನಿಧಿಸುವ ಪ್ರತಿಭಾವಂತರನ್ನು ಸಂಘಟನೆಗಳು ಬೆಳೆಸಬೇಕು ಎಂದರು.ಕ್ರೀಡಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಚಿನ್ನದ ಪಡೆದ ಪೊಲೀಸ್ ಪೇದೆ ವಿಜಯ ಕಾಂಚನ್ ಅವರನ್ನು ಸನ್ಮಾನಿಸಲಾಯಿತು.

 

ಉದ್ಯಮಿ ರಮೇಶ್ ರಾವ್, ಮಾಜಿ ಮೇಯರ್ ರಜನಿ ದುಗ್ಗಣ್ಣ, ಪಾಲಿಕೆ ಸದಸ್ಯ ಅಶೋಕ್ ಶೆಟ್ಟಿ, ಸಾಮಾಜಿಕ ಮುಂದಾಳುಗಳಾದ ಸತೀಶ್ ಮುಂಚೂರು, ಮಹಾಬಲ ಪೂಜಾರಿ ಕಡಂಬೋಡಿ, ವೀರ ಕೇಸರಿ ಅಧ್ಯಕ್ಷ ಸುಧಾಕರ್ ಸುರತ್ಕಲ್ ಮತ್ತಿತರರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.