ಶನಿವಾರ, ಜೂಲೈ 11, 2020
27 °C

ಯೋಗದಲ್ಲಿ ಪಿಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯೋಗದಲ್ಲಿ ಪಿಜಿ

ನಿಸರ್ಗ ಚಿಕಿತ್ಸೆ ಮತ್ತು ಯೋಗದಲ್ಲಿ ಸ್ನಾತಕೋತ್ತರ ಪದವಿ ನೀಡುವ ದೇಶದ ಎರಡನೇ ಕಾಲೇಜು ‘ಜಿಂದಾಲ್ ನೇಚರ್‌ಕ್ಯೂರ್ ಇನ್‌ಸ್ಟಿಟ್ಯೂಟ್’ ನಗರದ ತುಮಕೂರು ರಸ್ತೆ ಜಿಂದಾಲ್ ಆವರಣದಲ್ಲಿ ಆರಂಭವಾಗಿದೆ.ಇಲ್ಲಿ ನ್ಯಾಚುರೋಪತಿ ಮತ್ತು ಯೋಗದಲ್ಲಿ ಎಂಡಿ ಪದವಿ ನೀಡಲಾಗುತ್ತದೆ. ಪ್ರಾಯೋಗಿಕ ತರಬೇತಿಯನ್ನು ಜಿಂದಾಲ್ ನೇಚರ್‌ಕ್ಯೂರ್ ಸಂಸ್ಥೆಯಲ್ಲಿ ನೀಡಲಾಗುತ್ತದೆ.ನೂತನ ಕಾಲೇಜು 128 ಎಕರೆ ವಿಶಾಲ ಪ್ರದೇಶದಲ್ಲಿ ಸ್ಥಾಪನೆಗೊಂಡಿದ್ದು, ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯ, ಹಾಸ್ಟೆಲ್ ಮತ್ತಿತರ ಸೌಕರ್ಯಗಳಿಂದ ಕೂಡಿದೆ. ಇದರ 360 ಸೀಟುಗಳಲ್ಲಿ ಶೇ 20ನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.ಉದ್ಘಾಟನಾ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಉತ್ತರಾಂಚಲದ ಮಾಜಿ ರಾಜ್ಯಪಾಲ ಸುದರ್ಶನ್ ಅಗರ್‌ವಾಲ್, ಮಾಜಿ ಸಚಿವ ಆರ್.ವಿ. ದೇಶಪಾಂಡೆ, ವಿವೇಕಾನಂದ ಯೋಗ ಕೇಂದ್ರದ ಡಾ. ಎಚ್.ಆರ್. ನಾಗೇಂದ್ರ, ಆರೋಗ್ಯ ಇಲಾಖೆ ಕಾರ್ಯದರ್ಶಿ ಐ.ಎಂ.ವಿಠಲಮೂರ್ತಿ, ದಾನಿ ಮತ್ತು ಜಿಂದಾಲ್ ಸಮೂಹದ ಅಧ್ಯಕ್ಷ ಡಾ. ಸೀತಾರಾಂ ಜಿಂದಾಲ್ ಮತ್ತಿತರರು ಹಾಜರಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.