ಯೋಗೇಂದ್ರ ಐಸಿಸಿ ಭ್ರಷ್ಟಾಚಾರ ತಡೆ ಘಟಕದ ಮುಖ್ಯಸ್ಥ

7

ಯೋಗೇಂದ್ರ ಐಸಿಸಿ ಭ್ರಷ್ಟಾಚಾರ ತಡೆ ಘಟಕದ ಮುಖ್ಯಸ್ಥ

Published:
Updated:

ಬೆಂಗಳೂರು: ಯೋಗೇಂದ್ರ ಪಾಲ್ ಸಿಂಗ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಭ್ರಷ್ಟಾಚಾರ ತಡೆ ಘಟಕದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.2007ರ ನವೆಂಬರ್‌ನಿಂದ ಈ ಹುದ್ದೆಯಲ್ಲಿದ್ದ ರವಿ ಸವಾನಿ ಅವರು ನಿವೃತ್ತಿ ಹೊಂದುತ್ತಿದ್ದು ಅವರ ಸ್ಥಾನವನ್ನು 55 ವರ್ಷ ವಯಸ್ಸಿನ ಸಿಂಗ್ ತುಂಬಲಿದ್ದಾರೆಂದು ಐಸಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.ಮೂವತ್ತು ವರ್ಷಗಳ ಕಾಲ ಪೊಲೀಸ್ ಸೇವೆಯಲ್ಲಿದ್ದ ಸಿಂಗ್ ಅವರು ಸಿಬಿಐ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆದ್ದರಿಂದ ಅವರನ್ನು ಸೂಕ್ತವೆಂದು ಐಸಿಸಿ ಪರಿಗಣಿಸಿದೆ ಎಂದು ಐಸಿಸಿ ಮಾಧ್ಯಮ ವ್ಯವಸ್ಥಾಪಕ ಜೇಮ್ಸ ಫಿಟ್‌ಗೆರಾಲ್ಡ್ ಹೇಳಿದ್ದಾರೆ.ಸವಾನಿ ನಿವೃತ್ತಿ ಹೊಂದಿದ ನಂತರವೂ ಐಸಿಸಿ ಭ್ರಷ್ಟಾಚಾರ ತಡೆ ಘಟಕದ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ. ಅವರ ದೀರ್ಘ ಕಾಲದ ಅನುಭವವು ಐಸಿಸಿಗೆ ಅಗತ್ಯವಾಗಿದೆ ಎಂದು ಕೂಡ ಜೇಮ್ಸ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry