ನವದೆಹಲಿ (ಐಎಎನ್ಎಸ್): ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದ ಶೂಟರ್ ವಿಜಯ್ ಕುಮಾರ್ ಹಾಗೂ ಕಂಚು ಪಡೆದ ಕುಸ್ತಿಪಟು ಯೋಗೇಶ್ವರ್ ದತ್ ಅವರ ಹೆಸರನ್ನು ದೇಶದ ಉನ್ನತ ಕ್ರೀಡಾ ಪ್ರಶಸ್ತಿಯಾದ `ಖೇಲ್ರತ್ನ~ಕ್ಕೆ ಶಿಫಾರಸು ಮಾಡಲಾಗಿದೆ.

ಪ್ರಶಸ್ತಿ ಆಯ್ಕೆ ಸಮಿತಿಯು ಈಗಾಗಲೇ ಅಂತಿಮ ಪಟ್ಟಿಯನ್ನು ಕೇಂದ್ರ ಕ್ರೀಡಾ ಇಲಾಖೆಗೆ ಸಲ್ಲಿಸಿದೆ. ಅಧಿಕೃತ ಪ್ರಕಟ ಕೆಲವು ದಿನಗಳಲ್ಲಿ ಹೊರಬೀಳುವ ನಿರೀಕ್ಷೆಯಿದೆ. ಕ್ರಿಕೆಟಿಗ ಯುವರಾಜ್ ಸಿಂಗ್ ಅವರೇ ಅಲ್ಲದೆ, ಈ ಸಲ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದ ಅಶ್ವಿನಿ ಪೊನ್ನಪ್ಪ, ದೀಪಿಕಾ ಕುಮಾರಿ, ಗೀತಾ ಫೋಗಟ್, ಪಿ.ಕಶ್ಯಪ್, ಸರ್ದಾರ್ ಸಿಂಗ್ ಮುಂತಾದವರಿಗೂ ಅರ್ಜುನ ಪ್ರಶಸ್ತಿ ಸಿಗುವ ಸಾಧ್ಯತೆ ಇದೆ. ಕ್ರೀಡಾ ಪ್ರಶಸ್ತಿಯ ಅಂತಿಮ ಪಟ್ಟಿ ಬಿಡುಗಡೆ ಮಾಡಿಲ್ಲವೆಂದು ಕೇಂದ್ರ ಕ್ರೀಡಾ ಇಲಾಖೆ ವಕ್ತಾರ ರಾಜೇಶ್ ಮಲ್ಹೋತ್ರಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.