ಬೆಂಗಳೂರು: `ಇತಿಹಾಸ ಅಥವಾ ಕಲಾ ಇತಿಹಾಸದ ದಾಖಲಾತಿ ಆಗದೆ ಹೋದರೆ, ಮುಂದಿನ ದಿನಗಳಲ್ಲಿ ಎಲ್ಲವೂ ಕಳೆದು ಹೋಗುವ ಸಾಧ್ಯತೆಯಿದೆ~ ಎಂದು ಕರ್ನಾಟಕ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಎಂ.ಎಚ್. ಕೃಷ್ಣಯ್ಯ ಹೇಳಿದರು.

ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಲಲಿತಕಲಾ ಅಕಾಡೆಮಿಯ ವೆಬ್ಸೈಟ್ ಬಿಡುಗಡೆ ಮತ್ತು ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ಯಾವುದೇ ಒಂದು ಯೋಜನೆಯನ್ನು ಆರಂಭಿಸುವುದು ಮುಖ್ಯವಲ್ಲ. ಅದನ್ನು ಕೊನೆಯವರೆಗೂ ನಿರ್ವಹಣೆ ಮಾಡುವುದು ಮುಖ್ಯ. ಈ ವೆಬ್ಸೈಟಿಗೆ ಹೊಸ ರೂಪು ನೀಡುತ್ತ, ಸಮಕಾಲೀನ ವಿಷಯಗಳನ್ನು ನವೀಕರಿಸುತ್ತ, ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು~ ಎಂದರು.

`ಕರ್ನಾಟಕ ಸಾಹಿತ್ಯ ಪರಿಷತ್ತಿನಲ್ಲಿ ಮಾದರಿಯಾಗಿ ಬಹುಮಾಧ್ಯಮದಲ್ಲಿ `ಕವಿತೆಯ ಓದು~ ಎನ್ನುವುದನ್ನು ಆರಂಭ ಮಾಡಲಾಗಿತ್ತು. ಅದರಲ್ಲಿ ಚಂದ್ರಶೇಖರ ಕಂಬಾರ ಅವರು ತಮ್ಮ ಕವನವನ್ನು ಹಾಡಿದ್ದರು. ಒಟ್ಟು 5 ಸಾಹಿತಿಗಳ ಕವನ ವಾಚನ ಅವರ ಧ್ವನಿಯಲ್ಲಿಯೇ ಮಾಡಲಾಗಿತ್ತು. ಅದಕ್ಕೆ ಬಂದ ಪ್ರತಿಕ್ರಿಯೆ ಅಭೂತಪೂರ್ವವಾದದ್ದು ಮತ್ತು ಅಪೂರ್ವವಾದದ್ದು~ ಎಂದು ಹೇಳಿದರು.

ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಚಿ.ಸು. ಕೃಷ್ಣಸೆಟ್ಟಿ ಮಾತನಾಡಿ, `ಅಕಾಡೆಮಿಯಿಂದ ಅನೇಕ ಯೋಜನೆಗಳನ್ನು ಆರಂಭಿಸಲಾಗುತ್ತಿದೆ. ರಾಜ್ಯದ ಅನೇಕ ಕಲಾವಿದರನ್ನು ಅಕಾಡೆಮಿಯು ತಲುಪಿಲ್ಲ ಎಂಬ ಕೂಗುಗಳು ಕೇಳಿ ಬರುತ್ತಿತ್ತು. ಆದರೆ, ಇಂದು ಅದಕ್ಕೆ ಉತ್ತರವಾಗಿ ವೆಬ್ಸೈಟ್ ಅನ್ನು ಆರಂಭಮಾಡಲಾಗಿದೆ. ಸಮಕಾಲೀನತೆಗೆ ತಕ್ಕಂತೆ ಅಕಾಡೆಮಿಯು ಇನ್ನು ಮುಂದೆ ಹೆಜ್ಜೆ ಹಾಕಲಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.

`ವೆಬ್ಸೈಟಿನಲ್ಲಿ ಲಲಿತಕಲಾ ಅಕಾಡೆಮಿಯ ಸ್ಥಾಪನೆಯಾದಂದಿನಿಂದ ಇಂದಿನವರೆಗಿನ ಇತಿಹಾಸವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ನೀಡಲಾಗಿದೆ. ರಾಜ್ಯದ 400 ಕಲಾವಿದರ ಬಗೆಗಿನ ಮಾಹಿತಿ, ಅವರ ಕಲಾಕೃತಿಗಳು, ಸಾಧನೆಯ ಬಗೆಗೂ ಸಹ ವೆಬ್ಸೈಟಿನಲ್ಲಿ ಅಳವಡಿಸಲಾಗುವುದು~ ಎಂದರು.

`ಅಕಾಡೆಮಿಯಿಂದ ಪ್ರಶಸ್ತಿ ಪಡೆದವರು ಮತ್ತು ವೆಂಕಟಪ್ಪ ಪ್ರಶಸ್ತಿ ಪಡೆದ ಕಲಾವಿದರ ಪರಿಚಯ ಅವರ ಯಾವ ಕೃತಿಗೆ ಪ್ರಶಸ್ತಿ ಬಂದಿದೆ ಎಂಬುದರ ಮಾಹಿತಿ ನೀಡಲಾಗುವುದು. ಎಲ್ಲ ಮಾಹಿತಿಗಳು ಗುಣಾತ್ಮಕವಾಗಿರುವಂತೆ ಗಮನ ಹರಿಸಲಾಗುವುದು. ಏಕೆಂದರೆ, ಇಂಗ್ಲಿಷಿನಲ್ಲಿ ಮಾಹಿತಿ ಇರುವುದರಿಂದ ವಿಶ್ವಮಟ್ಟದಲ್ಲಿ ನಮ್ಮ ರಾಜ್ಯದ ಕಲಾವಿದರ ಪರಿಚಯವಾಗಲಿದೆ. ಅದಕ್ಕಾಗಿ ಗುಣಮಟ್ಟವನ್ನು ಕಾಪಾಡಿಕೊಳ್ಳಲಾಗುವುದು~ ಎಂದರು.

`ಅಕಾಡೆಮಿಗೆ ಸರ್ಕಾರ 10 ಜನ ಸದಸ್ಯರನ್ನು ನೇಮಿಸಿದೆ. ಮೂವರನ್ನು ಆಯ್ಕೆ ಮಾಡಿಕೊಳ್ಳಬಹುದು. ಒಟ್ಟು 13 ಜನ. ಆದರೆ, ಎಲ್ಲಾ ಜಿಲ್ಲೆಯವರಿಗೆ ಪ್ರಾಧಾನ್ಯತೆಯನ್ನು ನೀಡಲಾಗುವುದಿಲ್ಲವೆಂದು ಎಲ್ಲ ಜಿಲ್ಲೆಗಳಲ್ಲಿ ಗೌರವ ಸಂಚಾಲಕರನ್ನು ನೇಮಿಸಲಾಗಿದೆ.

ಎಲ್ಲ ಜಿಲ್ಲೆಗಳಲ್ಲಿ ತಿಂಗಳಿಗೊಂದರಂತೆ ಕಲೆಗೆ ಸಂಬಂಧಿಸಿದ ಚಲನಚಿತ್ರಗಳನ್ನು ಪ್ರದರ್ಶನ ಮಾಡುವ ಯೋಜನೆಯನ್ನು ಹೊಂದಲಾಗಿದೆ~ ಎಂದು ವಿವರಿಸಿದರು.

ಬಿ.ಎಂ. ಪಾಟೀಲ್ ಅವರ ಕೆ.ಬಿ. ಕುಲಕರ್ಣಿ ಪುಸ್ತಕ ಮತ್ತು ಶಿವಾನಂದ ಬಂಟನೂರು ಅವರ ಎಂ.ಬಿ. ಲೋಹಾರ್ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್. ರಾಮಕೃಷ್ಣ, ಅಕಾಡೆಮಿಯ ರಿಜಿಸ್ಟ್ರಾರ್ ಕೆ. ಸುಧೀಂದ್ರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.