ಶುಕ್ರವಾರ, ಮೇ 14, 2021
21 °C

ಯೋಧರ ಪತ್ತೆಗೆ ತೀವ್ರ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಭಾರತದ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಸಿಯಾಚಿನ್ ಪ್ರದೇಶದ ಸೇನಾ ಶಿಬಿರದ ಬಳಿ ಶನಿವಾರ ಸಂಭವಿಸಿದ ಹಿಮಕುಸಿತದಲ್ಲಿ ಮೃತಪಟ್ಟ 139 ಪಾಕ್ ಸೈನಿಕರ ಶೋಧಕಾರ್ಯ ಸೋಮವಾರವೂ ಮುಂದುವರಿದಿದ್ದು, ಇದುವರೆಗೂ ಯಾರ ಸುಳಿವೂ ಸಿಕ್ಕಿಲ್ಲ.



`ಇಂತಹ ಭಾರಿ ಹಿಮಕುಸಿತದಲ್ಲಿ ಯಾರಾದರೂ ಬದುಕುಳಿದ್ದಿದ್ದರೆ, ಅದೊಂದು ರೀತಿಯ ಪವಾಡವೇ ಸರಿ~ ಎಂದು ಸೇನಾ  ವಕ್ತಾರ ಮೇಜರ್ ಜನರಲ್ ಅತ್ತರ್ ಅಬ್ಬಾಸ್ ತಿಳಿಸಿದ್ದಾರೆ.



`ರಕ್ಷಣಾ ಕಾರ್ಯಕ್ಕೆ ತಾಂತ್ರಿಕ ನೆರವು ನೀಡಲು ಅಮೆರಿಕದಿಂದ ಎಂಟು ಜನರನ್ನೊಳಗೊಂಡ ಪರಿಣತರ ತಂಡ ಈಗಾಗಲೇ ಆಗಮಿಸಿದ್ದು, ಈ ತಂಡದೊಂದಿಗೆ ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ~ ಎಂದು ಸೇನೆ ತಿಳಿಸಿದೆ.



ರಕ್ಷಣಾ ಕಾರ್ಯವು ಜಟಿಲವಾಗುತ್ತಿರುವುದರಿಂದ ಪಾಕ್, ಇದಕ್ಕಾಗಿ ಇನ್ನಷ್ಟು ದೇಶಗಳಿಂದ ತಾಂತ್ರಿಕ ನೆರವು ಪಡೆಯಲು ಚಿಂತನೆ ನಡೆಸಿದೆ ಎಂದೂ ಹೇಳಲಾಗುತ್ತಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.