ಬೆಂಗಳೂರು: ಪಠಾಣ್ಕೋಟ್ ದಾಳಿ ಯಲ್ಲಿ ಸಾವನ್ನಪ್ಪಿದ್ದ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಅವರ ಮನೆಗೆ ಬಿಬಿಎಂಪಿ ಅಧಿಕಾರಿಗಳು ಮಂಗಳವಾರ ಗುರುತು ಹಾಕಿದ್ದಾರೆ.

ದೊಡ್ಡ ಬೊಮ್ಮಸಂದ್ರದ ಸುಬ್ಬಣ್ಣ ಬಡಾವಣೆಯಲ್ಲಿರುವ ನಿರಂಜನ್ ಅವರ ಮನೆ ರಾಜಕಾಲುವೆಗೆ ಹೊಂದಿಕೊಂಡಿದೆ. ಮುಖ್ಯಗೇಟ್ನಿಂದ ಮನೆಯ ಮುಂದಿನ ಪಿಲ್ಲರ್ಗಳವರೆಗೆ ಗುರುತು ಮಾಡಲಾಗಿದೆ. ಮನೆಯಲ್ಲಿ ನಿರಂಜನ್ ಅವರ ತಾಯಿ ರಾಧಾ ವಾಸವಿದ್ದು, ಅಧಿಕಾರಿಗಳು ಮನೆಗೆ ಗುರುತು ಮಾಡುವುದನ್ನು ಗಮನಿಸುತ್ತಿದ್ದ ದೃಶ್ಯ ಕಂಡುಬಂತು.

ರಾಧಾ ಅವರ ಮನೆ ಪಕ್ಕದಲ್ಲಿರುವ ದೇವಸ್ಥಾನವನ್ನು ರಾಜಕಾಲುವೆ ಮೇಲೆ ನಿರ್ಮಿಸಲಾಗಿದೆ. ಇಡೀ ದೇವಸ್ಥಾನವನ್ನು ತೆರವುಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದರು.
‘ದೊಡ್ಡ ಬೊಮ್ಮಸಂದ್ರದಲ್ಲಿ ರಾಜ ಕಾಲುವೆಯು ಒತ್ತುವರಿಯಾಗಿದೆ. ಕಟ್ಟಡಗಳನ್ನು ಧ್ವಂಸಗೊಳಿಸಬೇಕಾದ ಭಾಗಗಳಿಗೆ ಅಧಿಕಾರಿಗಳು ಗುರುತು ಹಾಕಿ ದ್ದಾರೆ. ಎಷ್ಟು ಪ್ರಮಾಣದಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ, ಎಷ್ಟು ಮನೆಗಳನ್ನು ತೆರವುಗೊಳಿಸಬೇಕು ಎಂಬುದರ ಕುರಿತು ಅಧಿಕಾರಿಗಳು ವರದಿ ನೀಡುತ್ತಾರೆ. ಅದರ ಆಧಾರದ ಮೇಲೆ ಬುಧವಾರ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ’ ಎಂದು ಯಲಹಂಕ ವಲಯದ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಥಣಿಸಂದ್ರದ ರಾಜಕಾಲುವೆಯನ್ನು ಮೂರು ಕಡೆಗಳಲ್ಲಿ ಮಣ್ಣು ಹಾಕಿ ಮುಚ್ಚಲಾಗಿತ್ತು. ಇದನ್ನು ತೆರವುಗೊಳಿಸಿ ನೀರು ಸರಾಗವಾಗಿ ಕೆರೆಗೆ ಹರಿಯುವಂತೆ ಮಾಡಲಾಗಿದೆ’ ಎಂದು ಹೇಳಿದರು.

ಬೊಮ್ಮನಹಳ್ಳಿ ವಲಯದ ಅವನಿ ಶೃಂಗೇರಿನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ನಿವಾಸಿಗಳು ಮಂಗಳವಾರ ತಮ್ಮ ಮನೆಗಳನ್ನು ತಾವೇ ಒಡೆದು ತೆರವು ಮಾಡುತ್ತಿದ್ದ ನೋಟ ಕಾಣಸಿಕ್ಕಿತು.

ಒತ್ತುವರಿ ಜಾಗದಲ್ಲಿ ನಿರ್ಮಿಸಿದ್ದ ಮನೆಗಳಲ್ಲಿ ಬಾಡಿಗೆಗೆ ಇದ್ದವರು ಮನೆ ಖಾಲಿ ಮಾಡಿಕೊಂಡು ಬೇರೆಡೆ ಹೋಗುತ್ತಿದ್ದಾರೆ. ಜೀವನೋಪಾಯಕ್ಕಾಗಿ ಅಂಗಡಿ ಹೊಂದಿದ್ದವರು ಈಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಕಸವನಹಳ್ಳಿಯಲ್ಲೂ ಕಾರ್ಯಾಚರಣೆ: ಮಹದೇವಪುರ ವಲಯದ ಕಸವನಹಳ್ಳಿಯಲ್ಲಿ ಮಂಗಳವಾರವೂ ಉಪಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿತ್ತು.
ಆದರೆ, ಕಟ್ಟಡಗಳ ಮಾಲೀಕರ ಮನವಿ ಮೇರೆಗೆ ಬಿಬಿಎಂಪಿ ಅಧಿಕಾರಿಗಳು, ಒತ್ತುವರಿ ಪ್ರದೇಶವನ್ನು ಸ್ವಯಂ ತೆರವಿಗೆ ಕೆಲವೆಡೆ ಅವಕಾಶ ನೀಡಿದರು.
ಕಸವನಹಳ್ಳಿಯ ಶುಭ್ ಎನ್ಕ್ಲೇವ್ನಲ್ಲಿ ಮಂಗಳವಾರ ಬೆಳಿಗ್ಗೆ ಕಟರ್ ಯಂತ್ರವು ಬೃಹತ್ ಕಟ್ಟಡವೊಂದರ ಪಾರ್ಶ್ವವನ್ನು ಒಡೆದು ಹಾಕಿತು.

ಮನೆಯೊಡೆಯ ನಿಶಾಂತ್, ಕೂಡಲೇ ಅವಡುಗಚ್ಚಿ ಕಣ್ಣು–ಕಿವಿಗಳನ್ನು ಮುಚ್ಚಿಕೊಂಡರು. ಅಧಿಕಾರಿಗಳ ಬಳಿ ತೆರಳಿ, ಸ್ವಯಂ ತೆರವಿಗೆ ಅವಕಾಶ ನೀಡುವಂತೆ ಬೇಡಿಕೊಂಡರು.

‘ಒತ್ತುವರಿ ಆಗಿದೆ ಎನ್ನಲಾದ ಪ್ರದೇಶದಲ್ಲಿರುವ ಕಟ್ಟಡದ ತೆರವಿಗೆ ಮೂರು ದಿನಗಳ ಕಾಲಾವಕಾಶ ಕೋರಿದ್ದೇವೆ. ಬಿಬಿಎಂಪಿ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಸಂಪೂರ್ಣ ಕಟ್ಟಡವೇ ಸಡಿಲಗೊಳ್ಳುತ್ತದೆ’ ಎಂದು ನಿಶಾಂತ್ ಆತಂಕ ವ್ಯಕ್ತಪಡಿಸಿದರು.

ಮತ್ತೊಂದೆಡೆ, ಭವ್ಯ ಬಂಗಲೆಯ ಮಾಲೀಕ ಕೃಷ್ಣಾ ಗುರ್ರಂ, ಕಾರ್ಮಿಕರನ್ನು ನೇಮಿಸಿಕೊಂಡು ಒತ್ತುವರಿ ತೆರವು ನಡೆಸುತ್ತಿದ್ದರು. ‘ಬಿಬಿಎಂಪಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನ ಶೆಡ್, ಜನರೇಟರ್ ಸೇರಿದಂತೆ ₹1.5 ಕೋಟಿಯಷ್ಟು ನಷ್ಟ ವಾಗಿದೆ. ಕಟ್ಟಡದ ಇನ್ನೊಂದು ಪಾರ್ಶ್ವವೂ ಒತ್ತುವರಿ ಆಗಿದೆ ಎನ್ನುತ್ತಿದ್ದಾರೆ. ಅದರ ತೆರವು ಮಾಡಬೇಕಿದೆ. ಜೆಸಿಬಿಗಳಿಂದಲೇ ತೆಗೆಸಿದರೆ ಹೆಚ್ಚಿನ ಹಾನಿ ಖಚಿತ. ಆದ್ದರಿಂದ ನಾವೇ ಕೆಲಸಗಾರರನ್ನು ನೇಮಿಸಿ ತೆರವು ಮಾಡುತ್ತಿದ್ದೇವೆ’ ಎಂದು ಅವರು ಹೇಳಿದರು.

ಹೈಕೋರ್ಟ್ ಮೊರೆ ಹೋದರು
ರಾಜರಾಜೇಶ್ವರ ನಗರ ಹಾಗೂ ಬೆಂಗಳೂರು ದಕ್ಷಿಣ ವಲಯದಲ್ಲಿ ಮಂಗಳವಾರ ಏಳು ಕಟ್ಟಡಗಳ ತೆರವಿಗೆ ಬಿಬಿಎಂಪಿ ನಿರ್ಧರಿಸಿತ್ತು. ಆದರೆ, ಕೆಲವು ಜನರು ಹೈಕೋರ್ಟ್ ಮೊರೆ ಹೋದ ಕಾರಣ ಕಾರ್ಯಾಚರಣೆಯನ್ನು ಕೈಬಿಡಲಾಯಿತು. ‘ಮುಂದಿನ ದಿನಗಳಲ್ಲಿ ತೆರವು ಕಾರ್ಯಾಚರಣೆ ಮಾಡುತ್ತೇವೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.