ಸೋಮವಾರ, ಮೇ 17, 2021
28 °C

ಯೋಧ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯೋಧ ಸಾವು

ಗುಂಡ್ಲುಪೇಟೆ: ಕೆಲವೇ ದಿನಗಳ ಹಿಂದೆ ಸಹೋದರನ ವಿವಾಹ ಮುಗಿಸಿ ಕರ್ತವ್ಯಕ್ಕೆ ತೆರಳಿದ್ದ ತಾಲ್ಲೂಕಿನ ಗೋಪಾಲಪುರ ಗ್ರಾಮದ ನಿವಾಸಿ, ಸಿಆರ್‌ಪಿಎಫ್ ಯೋಧ ಜಿ.ಎಸ್. ರಾಜಶೇಖರ್ ಅವರು ಉತ್ತರಪ್ರದೇಶದ ಲಖನೌದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.



ಜಿ.ಎಸ್. ಶಾಂತಪ್ಪ ಮತ್ತು ಪಾರ್ವತಮ್ಮ ದಂಪತಿ ಪುತ್ರರಾದ ರಾಜಶೇಖರ್  ಶುಕ್ರವಾರ ಲಖನೌದಲ್ಲಿ ಕರ್ತವ್ಯಕ್ಕೆಂದು ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಲಖನೌದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಮೃತಪಟ್ಟರು.



1999ರಲ್ಲಿ ಸಾಮಾನ್ಯ ಕರ್ತವ್ಯದ ಯೋಧನಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸೇರಿದ್ದ ಅವರು   2ವರ್ಷಗಳಿಂದ ಲಖನೌದಲ್ಲಿ ಸೇವೆಯಲ್ಲಿದ್ದರು.  ಬಾಚಹಳ್ಳಿ ಗ್ರಾಮದ ಶ್ವೇತಾ ಎಂಬುವವರನ್ನು ಮದುವೆಯಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.