ಕೆಲಸದಲ್ಲಿಯೇ ದೇವರನ್ನು ಕಾಣುವವರಿಗೆ ಯಾವುದೇ ರೀತಿಯ ಫಲಾಪೇಕ್ಷೆಯ ಹಂಬಲವಿರುವುದಿಲ್ಲ. ತಾವು ಮಾಡಬೇಕಾಗಿರುವ ಕೆಲಸದತ್ತ ಅವರ ಚಿತ್ತವಿರುತ್ತದೆ.

ಸಮಾಜದಲ್ಲಿ ಗುರುತಿಸಿಕೊಳ್ಳಲೇಬೇಕು ಎಂಬ ಬಯಕೆಗಿಂತ ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ತುಡಿತವೇ ಅವರಲ್ಲಿ ಹೆಚ್ಚಾಗಿರುತ್ತದೆ.

ಕಳೆದ ಮೂವತ್ತು ವರ್ಷಗಳಿಂದ ಸಮಾಜದಲ್ಲಿ ಯಾವುದೇ ರೀತಿಯ ಪ್ರತಿಫಲವನ್ನು ಬಯಸದೇ ಎಲೆಮರೆ ಕಾಯಿಯಂತೆ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವವರನ್ನು `ರಂಗಚೇತನ~ ಸಂಸ್ಥೆಯು ಗುರುತಿಸಿ ಅವರಿಗೆ `ನಾಡಚೇತನ~ ಪ್ರಶಸ್ತಿ ನೀಡುತ್ತಾ ಬಂದಿದೆ.

ಈ ವರ್ಷ ಸುಮಾರು ಆರು ಜನರಿಗೆ ನಾಡಚೇತನ ಪ್ರಶಸ್ತಿ ಹಾಗೂ ರಂಗಭೂಮಿಯ ಎಲ್ಲಾ ವಿಭಾಗದಲ್ಲಿ ದಿವಂಗತ ಸಿ.ಜಿ.ಕೆ. ಅವರಂತೆ ಸೇವೆ ಮಾಡಿರುವ ಹಿರಿಯ ಕಲಾವಿದರಿಗೆ ಸಿ.ಜಿ.ಕೆ. ಹೆಸರಿನಲ್ಲಿ ನಗದು ಪ್ರಶಸ್ತಿಯನ್ನು ನೀಡಲಾಗುವುದು.

ಬಿ.ವಿಠಲ್ (ಅಪ್ಪಯ್ಯ) ಸಿ.ಜಿ.ಕೆ. ನಗದು ಪ್ರಶಸ್ತಿ, ಡಾ. ಬಸವರಾಜ ಸಾದರ (ಸಾಹಿತ್ಯ) ನಾಡಚೇತನ ಪ್ರಶಸ್ತಿ, ಡಾ. ಎಸ್. ಫಿಲಿಪ್ ಲೂಯಿಸ್ (ಕೈಗಾರಿಕೆ ಅಭಿವೃದ್ಧಿ) ನಾಡಚೇತನ ಪ್ರಶಸ್ತಿ, ವಿಜಯಪುನಂ (ವಿಜಯ ಕುಮಾರಿ) (ಶಿಕ್ಷಣ) ನಾಡಚೇತನ ಪ್ರಶಸ್ತಿ, ಶಿವನಂಜಪ್ಪ ಬಾಳೇಕಾಯಿ (ಸಾವಯವಕೃಷಿ) ನಾಡಚೇತನ ಪ್ರಶಸ್ತಿ, ಶಕುಂತಲ ಪ್ರಸಾದ್ (ಕುಷ್ಠರೋಗಿಗಳ ಸೇವೆ) ನಾಡಚೇತನ ಪ್ರಶಸ್ತಿ, ಎಂ.ಡಿ.ನರಸಿಂಹಮೂರ್ತಿ (ರಂಗಭೂಮಿ ಸೇವೆ) ನಾಡಚೇತನ ಪ್ರಶಸ್ತಿ ಪುರಸ್ಕೃತರು.

ರಂಗಚೇತನ ಸಂಸ್ಥೆಯ ಕುರಿತು:
ಸಮಾಜದಲ್ಲಿ ಶೋಷಣೆಗೆ ಒಳಗಾಗಿ ಜನಸಮುದಾಯದಿಂದ ತಿರಸ್ಕರಿಸಲ್ಪಟ್ಟು, ಧ್ವನಿ ಕಳೆದುಕೊಂಡವರ ಕೊರಳ ಧ್ವನಿಯಾಗಿ, ಆತ್ಮಸ್ಥೈರ್ಯ ತುಂಬಲು 1983ರಲ್ಲಿ ಹುಟ್ಟಿದ ಸಂಸ್ಥೆ ರಂಗಚೇತನ. ಇದು ಮೊದಲಿನಿಂದಲೂ ಸಮಾಜದ ಅಂಕುಡೊಂಕುಗಳನ್ನು ರಂಗಭೂಮಿಯ ಮೂಲಕ ತಿದ್ದಲು ಸ್ವಪ್ರಯತ್ನದಿಂದ, ಸ್ವಾಭಿಮಾನದಿಂದ ಹೋರಾಟ ನಡೆಸಿಕೊಂಡು ಬರುತ್ತಿರುವ ಸಂಸ್ಥೆ. ಹೊಸ ನಾಟಕಗಳ ಪ್ರಯೋಗ, ರಂಗ ತರಬೇತಿ ಶಿಬಿರ, ಲಲಿತ ಕಲೆಗಳ ಶಿಬಿರ, ರಕ್ತದಾನ ಶಿಬಿರ, ಆಡಳಿತ ದಲಿತ ಕನ್ನಡ ತರಬೇತಿ ಶಿಬಿರ, ಉಚಿತ ವೈದ್ಯಕೀಯ ತಪಾಸಣೆ ಶಿಬಿರ, ಗ್ರಾಮೀಣ ಪ್ರದೇಶದ ರೈತಾಪಿ ಕೂಲಿ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರೊಂದಿಗೆ ಸಮಾಜ ಸೇವೆಯಲ್ಲೂ ರಂಗಚೇತನ ಜನಮನ್ನಣೆ ಗಳಿಸಿದೆ.

ರಂಗಚೇತನ ತನ್ನ ಚಳವಳಿಯನ್ನು ವಿಸ್ತರಿಸಿ ಪ್ರತಿವರ್ಷ ಒಂದೊಂದು ಹೊಸ ನಾಟಕವನ್ನು ಪ್ರದರ್ಶಿಸುವುದರ ಜತೆಗೆ ಹೊಸ ಕಲಾವಿದರನ್ನು ರಂಗಭೂಮಿಗೆ ಪರಿಚಯಿಸುತ್ತಾ, ತನ್ನ ರಂಗ ಚಳವಳಿಯನ್ನು ಮೇಲ್ಮಟ್ಟಕ್ಕೆ ಒಯ್ಯುತ್ತಿದೆ. ಕಳೆದ ಹನ್ನೆರೆಡು ವರ್ಷಗಳಿಂದ ಸಮಾಜದ ಜನ ಸಾಮಾನ್ಯರೊಳಗೆ ಹಾಸುಹೊಕ್ಕಾಗಿ ಬಡವರ ಜತೆ ಸೇರಿ ಸಮಾಜ ಸುಧಾರಣೆ ಮಾಡುತ್ತಿರುವವರಿಗೆ ನಾಡಚೇತನ, ನಾಡರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸುವ ಸಂಪ್ರದಾಯವನ್ನು ರಂಗಚೇತನ ಮುಂದುವರೆಸುತ್ತಾ ಬಂದಿದೆ.

ಏಪ್ರಿಲ್ 16ರಿಂದ ಏಪ್ರಿಲ್ 20 ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಜನಪರ ಸಂಸ್ಕೃತಿ ಉತ್ಸವದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.