ಮಂಗಳವಾರ, ಜುಲೈ 14, 2020
27 °C

ರಂಗನತಿಟ್ಟು: ಪಕ್ಷಿಗಳಿಗೆ ತಾಯ್ತನದ ಸುಖ!

ವಿಶೇಷ ವರದಿ Updated:

ಅಕ್ಷರ ಗಾತ್ರ : | |

ರಂಗನತಿಟ್ಟು: ಪಕ್ಷಿಗಳಿಗೆ ತಾಯ್ತನದ ಸುಖ!

ಶ್ರೀರಂಗಪಟ್ಟಣ: ಇಲ್ಲಿಗೆ ಸಮೀಪದ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೆ ವಂಶಾಭಿವೃದ್ಧಿಗಾಗಿ ಬಂದಿರುವ ಪಕ್ಷಿ ಸಂಕುಲ ಮೊಟ್ಟೆ ಇಟ್ಟು ಮರಿ ಮಾಡಿದ್ದು, ತಾಯ್ತನದ ಸುಖ ಅನುಭವಿಸುತ್ತಿವೆ.ಪಕ್ಷಿಧಾಮದಲ್ಲಿ ಓಪನ್ ಬಿಲ್, ವೈಟ್ ಐಬಿಸ್, ಕೆಟಲ್ ಇಗ್ರೆಟ್, ನೈಟ್ ಹೆರೋನ್, ಪೇಂಟೆಡ್ ಸ್ಟೋರ್ಕ್, ಪ್ಯಾಡಿ ಬರ್ಡ್, ಲಿಟಲ್ ಇಗ್ರೆಟ್, ಸ್ನೇಕ್ ಬರ್ಡ್ ಇತರ ಪಕ್ಷಿಗಳು ಮರಿ ಮಾಡಿವೆ.  ಅವುಗಳಿಗೆ ಗುಟುಕು ನೀಡುತ್ತಿವೆ. ಇದೇ ಮೊದಲ ಬಾರಿಗೆ ರಂಗನತಿಟ್ಟಿಗೆ ಆಗಮಿಸಿರುವ ಹೆಜ್ಜಾರ್ಲೆ (ಪೆಲಿಕಾನ್) ಬಳಗ ಕೂಡ ಎತ್ತರದ ಮರಗಳ ಮೇಲೆ ಮೊಟ್ಟೆಯಿಟ್ಟು ಮರಿ ಮಾಡಿದ್ದು, ಪೋಷಿಸುತ್ತಿದೆ. ಲಾರ್ಜ್ ಇಗ್ರೆಟ್, ಸ್ನೇಕ್ ಬರ್ಡ್ ಹಾಗೂ ಪೇಂಟೆಡ್ ಸ್ಟೋರ್ಕ್ ಹಾಗೂ ಓಪನ್ ಬಿಲ್ ಮರಿಗಳು ಹೆಚ್ಚು ಕಂಡು ಬರುತ್ತಿವೆ.ಓಪನ್ ಬಿಲ್ ಹಾಗೂ ಪೇಂಟೆಡ್ ಸ್ಟೋರ್ಕ್ ಜಾತಿಯ ಮರಿಗಳು ಸಾಕಷ್ಟು ಬೆಳೆದಿದ್ದು ಹಾರುವ ಯತ್ನ ನಡೆಸುತ್ತಿವೆ. ಕೆಟಲ್ ಇಗ್ರೆಟ್ ಹಾಗೂ ವೈಟ್ ಐಬಿಸ್‌ನ ಎಳೆಯ ಮರಿಗಳು ಅಲ್ಲಲ್ಲಿ ಕಂಡು ಬರುತ್ತಿದ್ದು, ವಯಸ್ಕ ಪಕ್ಷಿಗಳು ಅವುಗಳ ಪೋಷಣೆಗೆ ನಿಂತಿವೆ. ತಾಯಿ ಪಕ್ಷಿ ತನ್ನ ಕಂದಮ್ಮಗಳಿಗೆ ಗುಟುಕು ನೀಡುವ ದೃಶ್ಯ ಸಾಮಾನ್ಯವಾಗಿದೆ. ಪಾಂಡ್ ಹೆರೋನ್, ಕಾರ್ಮೊರೆಂಟ್ ಪಕ್ಷಿಗಳು ಮರದಿಂದ ಮರಕ್ಕೆ ಹಾರಾಡುತ್ತಿವೆ. `ಪಕ್ಷಿಧಾಮದಲ್ಲಿ ನವಜಾತ ಮರಿಗಳು ಸೇರಿ ವಿವಿಧ ಜಾತಿಯ ಸುಮಾರು 8 ಸಾವಿರ ಪಕ್ಷಿಗಳು ಇವೆ~ ಎಂದು ಫಾರೆಸ್ಟರ್ ಆನಂದ್ ತಿಳಿಸಿದ್ದಾರೆ.ದಾಖಲೆ ಆದಾಯ

ಪಕ್ಷಿಧಾಮ ಪ್ರವೇಶ ಹಾಗೂ ದೋಣಿ ವಿಹಾರ ಶುಲ್ಕ ದುಪ್ಪಟ್ಟಾಗಿದ್ದರೂ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಯಾವುದೇ ಇಳಿಮುಖವಾಗಿಲ್ಲ. 2010-11ನೇ ಸಾಲಿಗೆ 3,09,823 ಭಾರತೀಯರು ಹಾಗೂ 6,636 ಮಂದಿ ವಿದೇಶಿಯರು ಇಲ್ಲಿಗೆ ಭೇಟಿ ನೀಡಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ 29 ಸಾವಿರ ಹಾಗೂ ಮೇ ತಿಂಗಳಲ್ಲಿ 41 ಸಾವಿರ ಪಕ್ಷಿ ಪ್ರಿಯರು ಇಲ್ಲಿಗೆ ಆಗಮಿಸಿ ಪಕ್ಷಿ ವೀಕ್ಷಿಸಿದ್ದಾರೆ. ಎರಡು ತಿಂಗಳಲ್ಲಿ ರೂ.62.50 ಲಕ್ಷ ಹಾಗೂ 2010-11ನೇ ಸಾಲಿನಲ್ಲಿ ದಾಖಲೆಯ ರೂ.1.53 ಕೋಟಿ ಆದಾಯ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.