ಬೆಂಗಳೂರು: ‘ಕನ್ನಡಪರ ಹೋರಾಟ, ರಂಗಭೂಮಿ, ಚಲನಚಿತ್ರ, ರಾಜಕೀಯ ಕ್ಷೇತ್ರಗಳಿಗೆ ಉದ್ದೇಶಪೂರ್ವಕವಾಗಿ ನಾನು ಬರಲಿಲ್ಲ. ಅದೊಂದು ಆಕಸ್ಮಿಕವಷ್ಟೆ. ಸಿಕ್ಕ ಎಲ್ಲ ಅವಕಾಶಗಳನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದೇನೆ...’

‘ಮುಖ್ಯಮಂತ್ರಿ’ ನಾಟಕದ ಮೂಲಕ ಜನಮಾನಸದಲ್ಲಿ ಶಾಶ್ವತ ‘ಮುಖ್ಯಮಂತ್ರಿ’ಯಾಗಿ ನೆಲೆನಿಂತ ಚಂದ್ರಶೇಖರ್ (‘ಮುಖ್ಯಮಂತ್ರಿ’ ಚಂದ್ರು) ಅವರ ಮನದಾಳದ ಮಾತು ಇದು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶನಿವಾರ ನಗರದಲ್ಲಿ ಆಯೋಜಿಸಿದ್ದ 172ನೇ ‘ಮನೆಯಂಗಳದಲ್ಲಿಮಾತುಕತೆ’ಯಲ್ಲಿ ಅವರು ತಿಂಗಳ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

‘ಪದವಿ ಮುಗಿಸಿದ ಬಳಿಕ ನನಗೆ ಎಲ್ಲೂ ಕೆಲಸ ಸಿಗಲಿಲ್ಲ. ಬಳಿಕ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಲಸ ದೊರೆಯಿತು. ಅಲ್ಲಿ ಇಲಾಖಾ ಮಟ್ಟದ ಪರೀಕ್ಷೆಯನ್ನು ಇಂಗ್ಲಿಷ್ನಲ್ಲಿ ನಡೆಸಲಾಯಿತು. ನಾನು ಕನ್ನಡದಲ್ಲೇ ಉತ್ತರ ಬರೆದಿದ್ದೆ. ಕನ್ನಡ ಆಡಳಿತ ಭಾಷೆ ವಿರೋಧಿ ನೀತಿ ತಳೆದಿರುವ ಬೆಂಗಳೂರು ವಿವಿಗೆ ವಿರುದ್ಧ ಹೋರಾಟಕ್ಕಿಳಿದೆ. ಇದರಿಂದ ಪರೀಕ್ಷೆಯಲ್ಲಿ ಪಾಸ್ ಮಾಡಲಾಯಿತು. ಇಂಗ್ಲಿಷ್ನ ಅರಿವಿಲ್ಲದ ಸಾಕಷ್ಟು ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಅನಿವಾರ್ಯವಾಗಿ ಕನ್ನಡಪರ ಹೋರಾಟಕ್ಕಿಳಿದೆ’ ಎಂದರು.

‘ಗುಮಾಸ್ತನಾಗಿದ್ದ ನನ್ನನ್ನು ಚುನಾವಣೆಗೆ ನಿಲ್ಲುವಂತೆ ರಾಮಕೃಷ್ಣ ಹೆಗಡೆ ಅವರು ಒತ್ತಾಯ ಮಾಡಿದರು. ಸರ್ಕಾರಿ ಕೆಲಸದಲ್ಲಿ ಇರುವವರು ಚುನಾವಣೆಗೆ ನಿಲ್ಲುವಂತಿಲ್ಲ ಎಂದೆ. ಹೆಗಡೆ ಅವರು ಬೆಂಗಳೂರು ವಿವಿ ಕುಲಪತಿಗೆ ಫೋನ್ ಮಾಡಿ ಚಂದ್ರಶೇಖರ್ ಅವರನ್ನು ಕೆಲಸದಿಂದ ತೆಗೆಯುವಂತೆ ಸೂಚಿಸಿದರು. ಈಗ ನೀನು ಸರ್ಕಾರಿ ನೌಕರನಲ್ಲ. ಚುನಾವಣೆಗೆ ನಿಲ್ಲು ಎಂದರು. ಅನಿವಾರ್ಯವಾಗಿ ರಾಜಕೀಯಕ್ಕೆ ಪ್ರವೇಶ ಮಾಡಿದೆ’ ಎಂದು ನೆನಪು ಮಾಡಿಕೊಂಡರು.

‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡೆ. ಸರ್ಕಾರಿ ವಾಹನಗಳಿಗೆ ಕನ್ನಡದ ಅಂಕಿಗಳನ್ನೂ ಹಾಕಬೇಕೆಂದು ನಿಯಮಾವಳಿ ರೂಪಿಸಿದೆ. ಅಂದಿನ ಸಿಎಂ ಯಡಿಯೂರಪ್ಪ ಅವರ ಕಾರಿನ ನಾಮಫಲಕದಲ್ಲಿ ಕನ್ನಡದ ಅಂಕಿ ಇಲ್ಲವೆಂದು ಅವರಿಗೂ ನೋಟಿಸ್ ನೀಡಿದ್ದೆ. ಬಳಿಕ ಕನ್ನಡದ ಅಂಕಿಯ ನಾಮಫಲಕ ಅಳವಡಿಸಲಾಯಿತು’ ಎಂದು ಅಪರೂಪದ ಘಟನೆಯನ್ನು ನೆನಪು ಮಾಡಿಕೊಂಡರು. ‘ರಂಗಕರ್ಮಿ ಪ್ರಸನ್ನ ಅವರ ನಿರ್ದೇಶನದ ‘ಒಂದು ಹುತ್ತವ ಬಡಿದರೆ’ ನಾಟಕಕ್ಕೆ ನಟನೊಬ್ಬ ಗೈರು ಹಾಜರಿಯಾಗಿದ್ದರಿಂದ ನನಗೆ ಅವಕಾಶ ದೊರೆಯಿತು. ಮೂಕಾಭಿನಯದಲ್ಲೂ ತೊಡಗಿಸಿಕೊಂಡೆ’ ಎಂದರು.

‘40 ವರ್ಷಗಳಿಂದ ರಂಗಭೂಮಿ, 35 ವರ್ಷಗಳಿಂದ ಚಲನಚಿತ್ರ, ಧಾರಾವಾಹಿ, ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ನಾಡು–ನುಡಿಗಾಗಿ ಜೀವನವಿಡೀ ಹೋರಾಟ ನಡೆಸುತ್ತೇನೆ’ ಎಂದು ಹೇಳಿದರು.

ಡಬ್ಬಿಂಗ್ ಬೇಡ
ಕನ್ನಡ ಚಿತ್ರರಂಗದ ಇಂದಿನ ಸ್ಥಿತಿಯಲ್ಲಿ ಡಬ್ಬಿಂಗ್ ಅನಿವಾರ್ಯವಲ್ಲ. ಇದನ್ನು ನಾನು ವೈಯಕ್ತಿಕವಾಗಿ ವಿರೋಧಿಸುತ್ತೇನೆ. ಬೇರೆ ಭಾಷೆ ಕಥೆಯನ್ನು ಕನ್ನಡದಲ್ಲಿ ರೀಮೇಕ್ ಮಾಡಲಿ. ಇದರಿಂದ ಇಲ್ಲಿನ ಕಲಾವಿದರಿಗೆ ಉದ್ಯೋಗ ದೊರೆಯುತ್ತದೆ’ ಎಂದು ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.