ಶನಿವಾರ, ಜನವರಿ 18, 2020
21 °C

ರಂಗಶಂಕರದಲ್ಲಿ ಉತ್ತರ ಭೂಪ ಬ್ಚೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಯಾಶೀಲ ರಂಗಕ್ರಿಯೆಯನ್ನು ನಡೆಸಿಕೊಂಡು ಬರುವ ಮೂಲಕ ತನ್ನದೇ ಆದ ಛಾಪನ್ನು ಹವ್ಯಾಸಿ ರಂಗಭೂಮಿಯ ಮೇಳೆ ಮೂಡಿಸಿದ `ಅಂತರಂಗ~ ಇದೀಗ 31ನೇ ವರ್ಷದ ರಂಗ ಮೆಟ್ಟಿಲೇರಿದೆ.ಈ ತಂಡ `ಸುಧಾ~ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ `ನೀವು ಕೇಳಿದಿರಿ~ ಪ್ರಶ್ನೋತ್ತರ ಸಂಗ್ರಹ ಉತ್ತಪ ಭೂಪ ಪುಸ್ತಕ ಆಧಾರಿತ `ಉತ್ತರ ಭೂಪ ಬೀchi~  ಹಾಸ್ಯ ನಾಟಕವನ್ನು ಶುಕ್ರವಾರ (ಜ.20) ಪ್ರದರ್ಶಿಸಲಿದೆ.ಬೀchiಕನ್ನಡ ನಾಡು ಕಂಡ ಅಪರೂಪದ ಹಾಸ್ಯ ಸಾಹಿತಿ. ತಮ್ಮ ಹಾಸ್ಯ ಸಾಹಿತ್ಯ ನಗೆ ಚಟಾಕಿಯ ಮೂಲಕ ಇಂದಿಗೂ ನಮ್ಮ ನಡುವೆ ಎಲ್ಲೋ ಇರುವ ಬೀchiಹಾಸ್ಯ ಸಾಹಿತ್ಯಕ್ಕೊಂದು ಘನತೆ ತಂದು ಕೊಟ್ಟವರು. ಅವರು ಸೃಷ್ಟಿಸಿದ `ತಿಂಮ~ ಇಂದಿಗೂ ಓದುಗರನ್ನು ನಗಿಸುತ್ತಿದ್ದಾನೆ. ಹಾಸ್ಯದ ಮಾತುಗಳಿಂದ ಜನ ಸಮುದಾಯವನ್ನು ನಗಿಸುವುದಷ್ಟೇ ಬೀchiಅವರ ಉದ್ದೇಶವಾಗಿರಲಿಲ್ಲ. ಅದರೊಂದಿಗೆ ಸಮಾಜಕ್ಕೊಂದು ಸೂಕ್ತ ಸಂದೇಶವನ್ನು ಕೊಡುವ ಕಾಳಜಿ ಅವರಲ್ಲಿತ್ತು. ಅರ್ಚನಾ ಶ್ಯಾಮ್ ನಿರ್ದೇಶಿಸಿದ್ದು ಗೀತಸಾಹಿತ್ಯ/ರಂಗರೂಪ ಎನ್.ಸಿ.ಮಹೇಶ್ ಅವರದ್ದು. ಮಾಹಿತಿ ಹಾಗೂ ಟಿಕೆಟ್‌ಗಳಿಗಾಗಿ 99456 22450 ಸ್ಥಳ: ರಂಗಶಂಕರ, ಜೆ.ಪಿ.ನಗರ. ಸಂಜೆ 7.30.

 

ಪ್ರತಿಕ್ರಿಯಿಸಿ (+)