ಚಿತ್ರದುರ್ಗ: ಸದ್ದುಗ್ದ್ದದಲವಿಲ್ಲದೆ ನಡೆಯುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರ ಚುನಾವಣೆ ಈಗ ಚರ್ಚೆಗೆ ಗ್ರಾಸವಾಗಿದೆ. ಕನ್ನಡಿಗರನ್ನು ಒಗ್ಗೂಡಿಸುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಸಾಹಿತ್ಯ ಪರಿಷತ್ ಚುನಾವಣೆ ಬಿಸಿಲೇರಿದಂತೆ ರಂಗೇರುತ್ತಿದೆ.

ಚುನಾವಣೆಯಲ್ಲಿ ನಾಡು, ನುಡಿ ಏಳ್ಗೆಯ ವಿಷಯಗಳಿಗಿಂತ ಜಾತಿ ವಿಷಯ ಪ್ರಾಬಲ್ಯ ಪಡೆದಿದೆ. ಇದರ ಜತೆಗೆ ವ್ಯಕ್ತಿಯ ವರ್ಚಸ್ಸು ಸಹ ಅಷ್ಟೇ ಪ್ರಾಮುಖ್ಯತೆ ಪಡೆಯುತ್ತಿದ್ದು, ಜಿಲ್ಲೆಯಲ್ಲಿನ ಮಠಗಳು ಸಹ ಪರೋಕ್ಷವಾಗಿ ತಮ್ಮದೇ ಆದ ಪಾತ್ರ ವಹಿಸುತ್ತಿವೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವಿವರಗಳು ಹಾಗೂ ಪ್ರಣಾಳಿಕೆ ಇರುವ ಕರಪತ್ರಗಳೊಂದಿಗೆ ಪ್ರಚಾರದಲ್ಲಿ ತೊಡಗಿದ್ದಾರೆ.

ಬಹುತೇಕರು ವೈಯಕ್ತಿಕವಾಗಿ ಮತದಾರರನ್ನು ಭೇಟಿಯಾಗಿ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಜತೆಗೆ ಬೆಂಬಲಿಗರು, ಆತ್ಮೀಯರು, ಸ್ನೇಹಿತರನ್ನು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಜಾನಕೊಂಡದ ಓಬಳನರಸಿಂಹಸ್ವಾಮಿ ಗ್ರಾಮಾಂತರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆರ್. ಮಲ್ಲಿಕಾರ್ಜುನಯ್ಯ, ನಾಯಕನಹಟ್ಟಿ ಪ್ರೌಢಶಾಲೆಯ ಶಿಕ್ಷಕ ಟಿ.ಎಂ. ತಿಪ್ಪೇಸ್ವಾಮಿ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ದೊಡ್ಡಮಲ್ಲಯ್ಯ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಹಾಗೂ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಕೆ.ಎಸ್. ಪಾಂಡುರಂಗಸ್ವಾಮಿ, ಪತ್ರಕರ್ತ ಶ. ಮಂಜುನಾಥ್, ಭರಮಸಾಗರದ ಎಸ್ಜೆಎಂ ಶಾಲೆ ಶಿಕ್ಷಕ ಪಿ.ಎಂ.ಕೆ. ರಾಜೇಶ್, ಮಕ್ಕಳ ಸಾಹಿತ್ಯ ವೇದಿಕೆಯ ಮಾಜಿ ಅಧ್ಯಕ್ಷೆ ಲಲಿತಾ ಕೃಷ್ಣಮೂರ್ತಿ, ಜೆಡಿಎಸ್ ಮುಖಂಡ ಆರ್. ಶೇಷಣ್ಣಕುಮಾರ್ ಕಣದಲ್ಲಿದ್ದಾರೆ.

ಕಣದಲ್ಲಿ 8 ಅಭ್ಯರ್ಥಿಗಳಿದ್ದರೂ ಮೂರ್ನಾಲ್ಕು ಅಭ್ಯರ್ಥಿಗಳ ನಡುವೆ ಮಾತ್ರ ಪ್ರಬಲ ಪೈಪೋಟಿ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕನ್ನಡ ಭವನ ನಿರ್ಮಾಣ, ಶಾಲೆ ಅಂಗಳದಲ್ಲಿ ಸಾಹಿತ್ಯ ಸಿಂಚನ, ಯುವ ಸಾಹಿತಿಗಳಿಗೆ ಪ್ರೋತ್ಸಾಹ ಮುಂತಾದ ವಿಷಯಗಳನ್ನು ಅಭ್ಯರ್ಥಿಗಳು ಪ್ರಣಾಳಿಕೆಯಲ್ಲಿ ಸೇರಿಸಿದ್ದಾರೆ.

ವಿಧಾನ ಪರಿಷತ್ ಚುನಾವಣೆ ಕಾವು: ವಿಧಾನ ಪರಿಷತ್ನ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವು ಸಹ ಕಸಾಪ ಚುನಾವಣೆಗೆ ತಟ್ಟಿದೆ. ಮತದಾರರ ಪಟ್ಟಿಯಲ್ಲಿ ಸುಮಾರು ಶೇ.50ರಷ್ಟು ಶಿಕ್ಷಕರು ಇರುವುದರಿಂದ ವಿಧಾನ ಪರಿಷತ್ ಚುನಾವಣೆಯ ಆಕಾಂಕ್ಷಿಗಳು ಸಹ ಈ ಚುನಾವಣೆಗೆ ಧುಮುಕಿದ್ದಾರೆ. ಕೆಲವು ಅಭ್ಯರ್ಥಿಗಳನ್ನು ಬೆಂಬಲಿಸಿ ತೆರೆಮರೆಯ ಪ್ರಚಾರದಲ್ಲೂ ತೊಡಗಿದ್ದಾರೆ. ಅಲ್ಲಲ್ಲಿ ಸಭೆ, ಸಮಾರಂಭಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ಬರವಿದ್ದರೂ ಮೇಜುವಾನಿಗಳಿಗೆ ಬರದ ಛಾಯೆ ಕಾಣಿಸುತ್ತಿಲ್ಲ.

`ಸರಳವಾಗಿ ನಡೆಯುತ್ತಿದ್ದ ಸಾಹಿತ್ಯ ಪರಿಷತ್ ಚುನಾವಣೆ ಈ ಬಾರಿ ಹೊಸ ಸ್ವರೂಪ ಪಡೆದುಕೊಂಡಿದೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಖರ್ಚು ಹೆಚ್ಚಾಗಿದೆ. ಕಾರು, ಕರಪತ್ರ ಮುಂತಾದ ವೆಚ್ಚಗಳು ಹೆಚ್ಚಾಗಿವೆ.~ ಎನ್ನುವುದು ಸಾಹಿತ್ಯ ವಲಯದಲ್ಲಿ ಕೇಳಿ ಬಂದಿದೆ.

ಈಗ ಶಾಲೆಗಳಿಗೂ ರಜೆ ಇರುವುದರಿಂದ ಅಭ್ಯರ್ಥಿಗಳ ಪರ ಶಿಕ್ಷಕರು ಪ್ರಚಾರದಲ್ಲಿ ತೊಡಗಿಸಿದ್ದಾರೆ.

ಮತದಾರರ ವಿವರ: ಜಿಲ್ಲೆಯಲ್ಲಿ ಒಟ್ಟು 2,478 ಮತದಾರರಿದ್ದಾರೆ. ಚಳ್ಳಕೆರೆ ತಾಲ್ಲೂಕಿನಲ್ಲಿ 576, ಹೊಸದುರ್ಗ ತಾಲ್ಲೂಕಿನಲ್ಲಿ 189, ಚಿತ್ರದುರ್ಗ ತಾಲ್ಲೂಕಿನಲ್ಲಿ 1,117, ಹೊಳಲ್ಕೆರೆ ತಾಲ್ಲೂಕಿನಲ್ಲಿ 192, ಮೊಳಕಾಲ್ಮುರು ತಾಲ್ಲೂಕಿನಲ್ಲಿ 182, ಹಿರಿಯೂರು ತಾಲ್ಲೂಕಿನಲ್ಲಿ 222 ಮತದಾರರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.