ರಕ್ತದಾನದಿಂದ ಆರೋಗ್ಯ ವೃದ್ಧಿ: ಕೆ. ಅರುಂಧತಿ

ಸೋಮವಾರ, ಮೇ 20, 2019
32 °C

ರಕ್ತದಾನದಿಂದ ಆರೋಗ್ಯ ವೃದ್ಧಿ: ಕೆ. ಅರುಂಧತಿ

Published:
Updated:

ಮುಂಡರಗಿ: `ರಕ್ತದಾನ ಮಾಡುವುದು ಒಂದು ಪವಿತ್ರ ಕಾರ್ಯವಾಗಿದ್ದು 18 ವರ್ಷ ಮೇಲ್ಪಟ್ಟವರು ನಿರ್ಭಯವಾಗಿ ರಕ್ತದಾನ ಮಾಡುವ ಮೂಲಕ ಇತರರಿಗೆ ಜೀವದಾನ ಮಾಡಬೇಕು~ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಡಾ.ಕೆ. ಅರುಂಧತಿ ಹೇಳಿದರು. ಕಾಲೇಜು ಶಿಕ್ಷಣ ಇಲಾಖೆ, ಸ್ಥಳೀಯ ಜಗದ್ಗುರು ತೋಂಟದಾರ್ಯ ಸರಕಾರಿ ಪದವಿ ಕಾಲೇಜು, ಕ.ರಾ.ಬೆಲ್ಲದ ಕಾಲೇಜು, ಜ.ಅ.ಪದವಿ ಪೂರ್ವ ಕಾಲೇಜು ಹಾಗೂ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳ ಆಶ್ರಯದಲ್ಲಿ ಮಂಗಳವಾರ ಪುರಸಭೆ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಒಮ್ಮೆ ರಕ್ತದಾನ ಮಾಡಿದರೆ ಮೂರು ತಿಂಗಳೊಳಗೆ ಮಾನವನ ಶರೀರದಲ್ಲಿ ಮತ್ತೆ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಆ ಮೂಲಕ ದೇಹದಲ್ಲಿ ನವ ಚೈತನ್ಯ, ಉಲ್ಲಾಸ ಮೂಡುತ್ತದೆ. ಆದ್ದರಿಂದ ಯುವಜನತೆ ಯಾವುದೇ ಅಳುಕು, ಅಂಜಿಕೆ ಇಲ್ಲದೆ ರಕ್ತದಾನ ಮಾಡಬಹುದಾಗಿದೆ~ ಎಂದು ಅವರು ಸಲಹೆ ನೀಡಿದರು.`ದೇಶದಲ್ಲಿ ಲಕ್ಷಾಂತರ ಬಡ ರೋಗಿಗಳು ರಕ್ತ ಹೀನತೆಯಿಂದ ಬಳಲುತ್ತಿದ್ದು, ಸಕಾಲದಲ್ಲಿ ರಕ್ತ ದೊರೆ ಯದೆ ಹಲವಾರು ರೋಗಿಗಳು ಸಾವನ್ನ ಪ್ಪುತ್ತಿದ್ದಾರೆ. ದೇಹದಲ್ಲಿ ಸದಾ ಉತ್ಪತ್ತಿ ಯಾಗುತ್ತಲೇ ಇರುವ ರಕ್ತವನ್ನು ದಾನ ಮಾಡುವ ಮುಖಾಂತರ ವಿದ್ಯಾ ರ್ಥಿಗಳು ಬಡ ರೋಗಿಗಳಿಗೆ ನೆರವಾ ಗಬೇಕು~ ಎಂದು ಅವರು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಬಿ.ಟಿ. ತಿಪ್ಪೇರುದ್ರಸ್ವಾಮಿ ಮಾತನಾ ಡಿದರು.

ಬಿ.ಬಿ. ಮಾಲಕಟ್ಟಿ, ಡಾ. ರುಕ್ಮಿಣಿ, ಉಪನ್ಯಾಸಕ ಸಿ.ಎಸ್. ಅರಸನಾಳ ಹಾಜರಿದ್ದರು. ಶಾರದಾ ಹುಳ್ಳಿ ಪ್ರಾರ್ಥಿ ಸಿದರು. ಅಶ್ವತ್ಥ್ ಯಾದವ್ ಸ್ವಾಗತಿ ಸಿದರು. ಶರಣಪ್ಪ ಕಡ್ಡಿ ನಿರೂಪಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry