ಗುರುವಾರ , ಏಪ್ರಿಲ್ 22, 2021
23 °C

ರಕ್ಷಣಾ ಕಾರ್ಯಕ್ಕೆ ಅಮೆರಿಕದ ಹಡಗುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಕಳೆದ ವಾರ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಿಂದಾಗಿ ಧ್ವಂಸಗೊಂಡಿರುವ ಜಪಾನ್‌ನಲ್ಲಿ ಈಗ ನಡೆಯುತ್ತಿರುವ ವ್ಯಾಪಕ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಆ ರಾಷ್ಟ್ರಕ್ಕೆ ಅಮೆರಿಕವು ನೌಕಾದಳದ ಎಂಟು ಹಡಗುಗಳನ್ನು ಕಳುಹಿಸಿದೆ. ಅಲ್ಲದೆ ಇನ್ನೂ ಐದು ಹಡಗುಗಳು ಅಲ್ಲಿಗೆ ತೆರಳಲಿವೆ.‘ಹೊನ್‌ಷು ಪೂರ್ವ ಭಾಗದಲ್ಲಿ ಸದ್ಯ ಎಂಟು ಹಡಗುಗಳು ಇವೆ. ಇನ್ನೂ ಐದು ಹಡಗುಗಳು ಶೀಘ್ರವೇ ಆಗಮಿಸಲಿವೆ’ ಎಂದು ರಕ್ಷಣಾ ಇಲಾಖೆ ವಕ್ತಾರ ಡೇವಿಡ್ ಲಪಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.ರಿಯಾಕ್ಟರ್ ಹೊರಸೂಸಿರುವ ವಿಕಿರಣದಿಂದಾಗಿ ಅಮೆರಿಕದ ವಿಮಾನಗಳು ಮತ್ತು ನೌಕಾದಳದ ಹಡಗುಗಳು ಸ್ಥಾನವನ್ನು ಬದಲಿಸಬೇಕಾಯಿತು ಎಂದು ಅವರು ಹೇಳಿದ್ದಾರೆ.ಅಮೆರಿಕದ ಕೆಲವು ವಿಮಾನಗಳು ಸಮುದ್ರದ ಬಳಿಯ ಭಗ್ನಾವಶೇಷ ಪ್ರದೇಶಗಳ ಸಮೀಕ್ಷೆ ಮತ್ತು ನಷ್ಟದ ಅಂದಾಜು ಕಾರ್ಯದಲ್ಲಿ ಭಾಗಿಯಾಗಿವೆ.  ಮುಂದಿನ ಕೆಲವು ದಿನಗಳೊಳಗೆ ಜಪಾನ್‌ಗೆ ಸುಮಾರು 2,200 ನೌಕಾ ಯೋಧರು ಮತ್ತು ನಾವಿಕರು ಆಗಮಿಸುವ ನಿರೀಕ್ಷೆ ಇದೆ ಎಂದೂ ಲಪಾನ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.