ರಜನೀಕಾಂತ್ ಸ್ವಸ್ಥ: ಆಸ್ಪತ್ರೆಯಿಂದ ಬಿಡುಗಡೆ

7

ರಜನೀಕಾಂತ್ ಸ್ವಸ್ಥ: ಆಸ್ಪತ್ರೆಯಿಂದ ಬಿಡುಗಡೆ

Published:
Updated:
ರಜನೀಕಾಂತ್ ಸ್ವಸ್ಥ: ಆಸ್ಪತ್ರೆಯಿಂದ ಬಿಡುಗಡೆ

ಸಿಂಗಾಪುರ (ಪಿಟಿಐ): ಸೂಪರ್ ಸ್ಟಾರ್ ರಜನೀಕಾಂತ್ ಅವರ ಆರೋಗ್ಯ ಸಂಪೂರ್ಣವಾಗಿ ಸುಧಾರಿಸಿದ್ದು ಅವರನ್ನು ಇಲ್ಲಿನ ಮೌಂಟ್ ಎಲಿಜಬೆತ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಉಸಿರಾಟದ ಸಮಸ್ಯೆಗಳಿಗಾಗಿ ಅವರಿಗೆ ಇಲ್ಲಿ ಚಿಕಿತ್ಸೆ ನೀಡಲಾಗಿತ್ತು.~ಸೂಪರ್ ಸ್ಟಾರ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅವರು ಸಂಪೂರ್ಣವಾಗಿ ಸುಧಾರಿಸಿದ್ದು, ಈಗ ವಿಶ್ತಾಂತಿ ಪಡೆಯುತ್ತಿದ್ದಾರೆ~ ಎಂದು ಅವರ ಅಳಿಯ ನಟ ಧನುಷ್ ~ಟ್ಚಿಟ್ಟರ್~ ಸಂದೇಶದಲ್ಲಿ ತಿಳಿಸಿದ್ದಾರೆ.61ರ ಹರೆಯದ ರಜನೀಕಾಂತ್ ಅವರನ್ನು ಮೇ 28ರಂದು ಇಲ್ಲಿನ ಆಸ್ಪತ್ರೆಗೆ ಚೆನ್ನೈಯಿಂದ ವಿಮಾನ ಮೂಲಕ ಕರೆತಂದ ಬಳಿಕ ದಾಖಲು ಮಾಡಲಾಗಿತ್ತು.ಮೇ 13ರಿಂದ ಚಿಕಿತ್ಸೆ ಪಡೆಯುತ್ತಿದ್ದ ಚೆನ್ನೈಯ ಶ್ರೀ ರಾಮಚಂದ್ರ ವೈದ್ಯಕೀಯ ಕೇಂದ್ರದಿಂದ ಬಿಡುಗಡೆ ಮಾಡಿದ ಬಳಿಕ ಅವರನ್ನು ಇಲ್ಲಿಗೆ ಕರೆತರಲಾಗಿತ್ತು.ರಜನೀಕಾಂತ್ ಅವರು ಇನ್ನೂ ಕೆಲವು ದಿನಗಳ ಕಾಲ ಸಿಂಗಾಪುರದಲ್ಲಿ ಕುಟುಂಬ ಸದಸ್ಯರ ಜೊತೆಗಿದ್ದು ನಂತರ ಮನೆಗೆ ವಾಪಸಾಗುವ ನಿರೀಕ್ಷೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry