ಪಿರಿಯಾಪಟ್ಟಣ: ತಾಲ್ಲೂಕಿನ ಬೆಟ್ಟದ ಪುರದ ಐತಿಹಾಸಿಕ ಸಿಡಿಲು ಮಲ್ಲಿ ಕಾರ್ಜುನ ಸ್ವಾಮಿ ರಥೋತ್ಸವವು ಪ್ರತಿಭಟನೆಯ ನಡುವೆ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವರ ಉತ್ಸವ ಮೂರ್ತಿಯೊಂದಿಗೆ ಗಣಪತಿ, ನಂದಿ ಮೂರ್ತಿಗಳನ್ನು ಶೃಂಗಾರಗೊಂಡ ತೇರಿಗಳಲ್ಲಿ ಪ್ರತಿ ಷ್ಠಾಪಿಸಿ ಗ್ರಾಮದ ರಥ ಬೀದಿ ಯಲ್ಲಿ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಹಣ್ಣು ಜವನ ಅರ್ಪಿಸಿ ಪುನೀತರಾದರು. ಬೆಟ್ಟವೇರಿದ ಭಕ್ತರಿಗೆ ಮಹಾದೇವ ಎಂಬುವವರು ಲಘು ಉಪಹಾರದ ವ್ಯವಸ್ಥೆ ಕಲ್ಪಸಿದ್ದರು. ಜನಸಹಾಯ ಕೇಂದ್ರ ದಿಂದ ಮಜ್ಜಿಗೆ ವಿತರಿಸಲಾಯಿತು. ಸನ್ಯಾಸಿಪುರದ ಗ್ರಾಮದ ವಾಲ್ಮೀಕಿ ಯುವಕ ಸಂಘದ ವತಿಯಿಂದ ಮತ್ತು ಜನಶಕ್ತಿ ಮಹಿಳಾ ಒಕ್ಕೂಟದಿಂದ ಜಾನಪದ ಕುಣಿತಗಳನ್ನು ಏರ್ಪಡಿಸ ಲಾಗಿತ್ತು. ರಥಗಳನ್ನು ನಿರ್ಮಿಸಿ ಹಲವಾರು ವರ್ಷಗಳಾಗಿರುವುದ ರಿಂದ ರಥಗಳು ಶಿಥಿಲಗೊಂಡಿದ್ದು ಗಣಪತಿ ರಥದ ಗಾಲಿ ಮುರಿದು ಹೋಯಿತು. ಕೊನೆಯ ಘಟ್ಟವಾದ್ದ ರಿಂದ ಯಾವುದೇ ರೀತಿಯ ಅನಾಹುತ ಸಂಭವಿಸಲಿಲ್ಲ.ರಥೋತ್ಸವದಲ್ಲಿ ಶಾಸಕ ಕೆ.ವೆಂಕ ಟೇಶ್, ಉಪ ವಿಭಾಗಾ ಧಿಕಾರಿ ಲಿಂಗಮೂರ್ತಿ, ತಹಶೀಲ್ದಾರ್ ಡಾ.ನಂಜುಂಡೇಗೌಡ, ತಾ.ಪಂ.ಸದಸ್ಯೆ ಅನಿತಾತೋಟಪ್ಪಶೆಟ್ಟಿ, ಎಸ್ಐ ಗುರು ಸಿದ್ದಯ್ಯ, ನಾಗೇಗೌಡ, ಕೆ.ಕೆ. ರಘು ಮತ್ತಿತರರು ಹಾಜರಿದ್ದರು.

ಭಕ್ತರ ಪ್ರತಿಭಟನೆ: ಜಾತ್ರಾ ಮಹೋತ್ಸವದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲವೆಂದು ಆರೋಪಿಸಿ ಭಕ್ತರು ರಥದ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದರು. ಜಾತ್ರೆ ಸಮಯದಲ್ಲಿ ಪ್ರಮುಖ ಬೀದಿಗಳು ಸೇರಿದಂತೆ ಎಲ್ಲೆಡೆ ಸ್ವಚ್ಛತೆ ಕೊರತೆ, ಗಿರಿಜಾ ಕಲ್ಯಾಣ, ರಥೋತ್ಸವ ನೋಡಲು ಬಂದವರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದಿರುವುದನ್ನು ಖಂಡಿಸಿ ಭಕ್ತರು ಪ್ರತಿಭಟಿಸಿದರು.

ಜಾತ್ರೆಯಲ್ಲಿ ಹರಾಜಿನ ಹಣ ಪಡೆದು ನಾಪತ್ತೆಯಾಗುವ ಅಧಿಕಾರಿ ಗಳು ಮೂಲ ಸೌಕರ್ಯಗಳನ್ನು ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನಾನಿರತ ರನ್ನು ಸಮಾಧಾನ ಪಡಿಸಿದ ತಹಶೀಲ್ದಾರ್ ಡಾ.ನಂಜುಂಡೇಗೌಡ ಮುಂದಿನ ವರ್ಷದೊಳಗೆ ನೂತನ ರಥ ನಿರ್ಮಿಸಿ ಮೂಲ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದರು. ನಂತರ ಭಕ್ತರು ಪ್ರತಿಭಟನೆ ಅಂತ್ಯ ಗೊಳಿಸಿದರು. ತಾಲ್ಲೂಕು ರೈತಸಂಘದ ಉಪಾಧ್ಯಕ್ಷ ಬಿ.ಜೆ. ದೇವರಾಜು, ಹೊನ್ನಸಿಳ್ಳೇ ಗೌಡ, ಗಿರೀಶ್, ಲೋಕೇಶ್, ಉದಯ, ರವಿಕುಮಾರ್ , ಸುರೇಶ್ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.