ನವದೆಹಲಿ (ಪಿಟಿಐ): ಜಾಗತಿಕ ಆರ್ಥಿಕ ಅಸ್ಥಿರತೆ, ಯೂರೋಪ್ ಸಾಲದ ಬಿಕ್ಕಟ್ಟಿನಂತಹ ಪ್ರತಿಕೂಲ ವಾತಾವರಣ ಇದ್ದರೂ, ದೇಶದ ಒಟ್ಟು ರಫ್ತು ವಹಿವಾಟು ಸೆಪ್ಟೆಂಬರ್ ತಿಂಗಳಲ್ಲಿ ಶೇ 36ರಷ್ಟು ಪ್ರಗತಿ ದಾಖಲಿಸಿದ್ದು, 24 ಶತಕೋಟಿ ಡಾಲರ್ ( ರೂ.1,20,000 ಕೋಟಿ ) ವಹಿವಾಟು ದಾಖಲಿಸಿದೆ.

ಇದೇ ಸರಾಸರಿ ಪ್ರಗತಿ ಕಾಯ್ದುಕೊಂಡರೆ ರಫ್ತು ವಹಿವಾಟು ಈ ವರ್ಷಾಂತ್ಯಕ್ಕೆ 290 ರಿಂದ 300 ಶತಕೋಟಿ ಡಾಲರ್ (ರೂ.15,0,00,000 ಕೋಟಿ) ಗುರಿ ದಾಟಲಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ಹೇಳಿದ್ದಾರೆ.

ಕಳೆದ ಆಗಸ್ಟ್ ತಿಂಗಳಲ್ಲಿ ರಫ್ತು ಶೇ 44ರಷ್ಟು ಪ್ರಗತಿ ದಾಖಲಿಸಿತ್ತು. ಅದಕ್ಕೆ ಹೋಲಿಸಿದರೆ ಪ್ರಸಕ್ತ ಅವಧಿಯಲ್ಲಿ ವಹಿವಾಟು ಕಡಿಮೆಯಾಗಿದೆ. ಆದರೆ, ಜಾಗತಿಕ ಆರ್ಥಿಕ ಪ್ರತಿಕೂಲ ವಾತಾವರಣದಲ್ಲಿ ಈ ಪ್ರಗತಿ `ದಾಖಲೆ ಮಟ್ಟದ್ದು~ ಎಂದು ರಾಹುಲ್ ಅಭಿಪ್ರಾಯಟ್ಟಿದ್ದಾರೆ.

ದೇಶದ ಶೇ 30ರಷ್ಟು ರಫ್ತು ವಹಿವಾಟು ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆ ಅವಲಂಬಿಸಿದೆ. ಬಿಕ್ಕಟ್ಟು ಮುಂದುವರೆದಿದ್ದರೂ,ಈ ಮಾರುಕಟ್ಟೆಗಳಿಂದ ಸರಕುಗಳ ಬೇಡಿಕೆ ಕಡಿಮೆಯಾಗಿಲ್ಲ. ಅಲ್ಲದೆ, ಹೊಸ ಮಾರುಕಟ್ಟೆಗಳಾದ ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾ ದೇಶಗಳಿಂದ ಸರಕುಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.

ಆಮದು ವಹಿವಾಟು: ಸೆಪ್ಟೆಂಬರ್ ತಿಂಗಳಲ್ಲಿ ದೇಶದ ಒಟ್ಟು ಆಮದು ವಹಿವಾಟು ಶೇ 17ರಷ್ಟು ಚೇತರಿಸಿಕೊಂಡಿದ್ದು, 34 ಶತಕೋಟಿ ಡಾಲರ್ (ರೂ.1,70,000 ಕೋಟಿ) ಗಳಷ್ಟಾಗಿದೆ. ಈ ಅವಧಿಯಲ್ಲಿ ವ್ಯಾಪಾರ ಕೊರತೆ 9 ಶತಕೋಟಿ ಡಾಲರ್ (ರೂ.45,000 ಕೋಟಿ) ಗಳಷ್ಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.