ಬುಧವಾರ, 29 ಅಕ್ಟೋಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ
Published 28 ಅಕ್ಟೋಬರ್ 2025, 23:30 IST
​ಪ್ರಜಾವಾಣಿ ವಾರ್ತೆ
author
ಮೇಷ
ಪ್ರತಿದಿನವು ಗಣಕಯಂತ್ರದ ಮುಂದೆ ನಡೆಯುವ ಕೆಲಸದ ಮೇಲೆ ಬೇಸರ ಬರಬಹುದು. ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ದೊರಕುವ ಸಂಭವವಿದೆ. ಬರಬೇಕಾದ ಹಣವು ಪೂರ್ಣವಾಗಿ ಬರಲಿದೆ.
ವೃಷಭ
ಅತಿಯಾಗಿ ಆಸೆಪಟ್ಟು ಇತರರೊಂದಿಗೆ ವಾಗ್ವಾದ ನಡೆಸಿ ಪಡೆದ ವಸ್ತುವನ್ನು ಕೈಯ್ಯಾರೆ ಬೇಜವಾಬ್ದಾರಿಯಿಂದ ಹಾಳು ಮಾಡಿಕೊಳ್ಳುವಿರಿ. ರಂಗೋಲಿ ಕಲಾವಿದರ ಬೇಡಿಕೆ ಹಾಗು ಸ್ಥಾನಮಾನ ಹೆಚ್ಚುತ್ತದೆ.
ಮಿಥುನ
ಈವರೆಗೂ ಗಳಿಸಿದ ಒಳ್ಳೆಯ ಹೆಸರಿಗೆ ಕುತಂತ್ರಿಗಳು ಮಸಿ ಬಳೆಯುವ ಉಪಾಯವನ್ನು ಮಾಡುವರು. ಮನಸ್ಸಿನಲ್ಲಿರುವ ದುಗುಡಗಳನ್ನು ಹೇಳಿಕೊಳ್ಳಲು ಸರಿಯಾದ ವ್ಯಕ್ತಿಯ ಕೊರತೆ ಉಂಟಾಗುವುದು.
ಕರ್ಕಾಟಕ
ಜವಾಬ್ದಾರಿಯುತ ಕಾರ್ಯಕ್ರಮ ನಡೆಸಿಕೊಡಲು ತಯಾರಿಯನ್ನು ನಡೆಸುವಿರಿ. ಉತ್ತಮ ಪ್ರಜೆಯಾಗುವುದರ ಜತೆಯಲ್ಲಿ ತಂದೆ ತಾಯಿಯರ ಮಾತಿಗೆ ಗೌರವಿಸುವಂಥ ಉತ್ತಮರೂ ಆಗಬೇಕು.
ಸಿಂಹ
ಬೀಗರ ಮನೆಯಲ್ಲಿನ ವಿಶೇಷ ಸಂದರ್ಭಕ್ಕೆ ತೆರಳುವಿರಿ. ಊಟೋಪಚಾರದಲ್ಲಿ ವ್ಯತ್ಯಾಸಗಳನ್ನು ಮಾಡಿಕೊಂಡು ಆರೋಗ್ಯ ಹಾಳು ಮಾಡಿಕೊಳ್ಳದಿರಿ. ಅಣ್ಣನ ಮಾತನ್ನು ಮೀರುವುದು ಸರಿಯಲ್ಲ.
ಕನ್ಯಾ
ಸಭೆಯಲ್ಲಿ ಸ್ಥಾನ ಹಾಗು ಇತಿಮಿತಿಗಳನ್ನು ಅರಿಯದ ಹೊರತು ಕನಿಷ್ಠ ಗೌರವ ಸಿಗದಂತೆ ಆಗುತ್ತದೆ. ಮಕ್ಕಳಲ್ಲಿನ ಕೆಲವು ವಾಗ್ವಾದಗಳನ್ನು ಮಧ್ಯಪ್ರವೇಶ ಮಾಡಿ ನಿಲ್ಲಿಸುವುದು ಸೂಕ್ತ.
ತುಲಾ
ವಿದ್ಯಾಧಿದೇವತೆಯ ಕೃಪಾಕಟಾಕ್ಷದಿಂದ ಭಾಗವಹಿಸಿದ ಬೌದ್ಧಿಕ ಸ್ಪರ್ಧೆಯಲ್ಲಿ ಉತ್ತಮ ಸ್ಥಾನ ಪಡೆಯುವಿರಿ. ಗೋವುಗಳ ಪಾಲನೆಯಿಂದ ಪುಣ್ಯವು ಪ್ರಾಪ್ತಿ. ವಿಶೇಷ ವ್ಯಕ್ತಿಗಳನ್ನು ಭೇಟಿಯಾಗುವಿರಿ.
ವೃಶ್ಚಿಕ
ಗಂಡ ಹೆಂಡತಿಯರ ನಡುವೆ ಭಿನ್ನಾಭಿಪ್ರಾಯಗಳು ಬರಬಹುದು. ಆದರೆ ಅದನ್ನು ಬಳಸಿಕೊಂಡು ಲಾಭ ಗಳಿಸಲು ಯೋಚಿಸುವಂಥ ಮೂರನೆ ವ್ಯಕ್ತಿಗೆ ತಿಳಿಯದಂತೆ ಬಗೆಹರಿಸಿಕೊಳ್ಳುವುದು ಉತ್ತಮ.
ಧನು
ವಿವಿಧ ರೀತಿಯ ರೋಗಿಗಳನ್ನು ಸಂದರ್ಶಿಸಿದ ವೈದ್ಯರಿಗೆ ಮನಸ್ಸನ್ನು ಮತ್ತೆ ನಿಮ್ಮ ಹಾದಿಗೆ ತಂದುಕೊಳ್ಳಲು ಕ್ರೀಡೆ ಆಡುವುದು ಅಥವಾ ವೀಕ್ಷಿಸುವುದನ್ನು ಮಾಡಬಹುದು. ಹತ್ತಿ ವ್ಯಾಪಾರಿಗಳಿಗೆ ಉತ್ತಮ ದಿನ.
ಮಕರ
ಯಾವುದೋ ಒಂದು ನಂಬಿಕೆಯ ಮೇಲೆ ಸಾಗುತ್ತಿದ್ದ ಜೀವನದಲ್ಲಿ ಇತರರ ಮಾತುಗಳು ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ಜನಗಳ ದೃಷ್ಟಿ ದೋಷಕ್ಕೆ ಒಳಗಾಗದಂತೆ ಜಾಗ್ರತೆವಹಿಸಿ.
ಕುಂಭ
ಹಲವು ವಿಷಯಗಳ ಮೇಲೆ ಒಟ್ಟಿಗೆ ಗಮನ ಇಡುವುದರ ಬದಲು ಒಂದಾದರ ಮೇಲೆ ಒಂದರಂತೆ ಮುಗಿಸುವುದು ನಿಮಗೆ ಲಾಭವಾಗುವುದು. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.
ಮೀನ
ಉದ್ಯೋಗದ ವಿಚಾರದ ಬಗ್ಗೆ ತರಬೇತಿಯನ್ನು ಪಡೆದುಕೊಳ್ಳುವುದರಿಂದ ಬಡ್ತಿಯ ಬಗ್ಗೆ ಯೋಚಿಸಬಹುದು. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಸ್ಥಾನದಲ್ಲಿ ಅಭದ್ರತೆ ಕಾಡಬಹುದು.
ADVERTISEMENT
ADVERTISEMENT