ಗುರುವಾರ , ಮೇ 28, 2020
27 °C

ರಫ್ತು ನಿಷೇಧ;ಕಹಿಯಾದ ಜೇನು...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಭಾರತದ ಜೇನುತುಪ್ಪಕ್ಕೆ ಐರೋಪ್ಯ ಒಕ್ಕೂಟ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ  ವಿಶ್ವಮಾರುಕಟ್ಟೆಯಲ್ಲಿ ಇದರ ಬೆಲೆ ಇಳಿಯಲಿದೆ! ಇದರಿಂದ ದೇಶದ ಜೇನುತುಪ್ಪ ಉದ್ಯಮಕ್ಕೂ ಹೊಡೆದ ಬೀಳಲಿದೆ. ಈ ಎಲ್ಲ ಬೆಳವಣಿಗೆಯಿಂದಾಗಿ ಜೇನುಸಾಕಣೆಯನ್ನೇ ನಂಬಿಕೊಂಡಿರುವವರು ಸಂಕಷ್ಟ ಎದುರಿಸಬೇಕಾಗಬಹುದು ಎಂದು ಜೇನುತುಪ್ಪ ರಫ್ತಿನಲ್ಲಿ ಮುಂಚೂಣಿಯಲ್ಲಿರುವ ಕಾಶ್ಮೀರ್ ಅಪೈರೀಸ್ ಅಭಿಪ್ರಾಯಪಟ್ಟಿದೆ.ಭಾರತದ ಜೇನುತುಪ್ಪದಲ್ಲಿ ಭಾರಿ ಪ್ರಮಾಣದ ರಾಸಾಯನಿಕ ಅಂಶಗಳು ಪತ್ತೆಯಾದ ಬೆನ್ನಲ್ಲಿಯೇ ಐರೋಪ್ಯ ಒಕ್ಕೂಟ ಭಾರತದಿಂದ ಜೇನುತುಪ್ಪ ಆಮದಿಗೆ ನಿರ್ಬಂಧ ಹೇರಿದೆ. ಅಮೆರಿಕ ಬಿಟ್ಟರೆ ಜೇನುತುಪ್ಪ ರಫ್ತಿನಲ್ಲಿ ಭಾರತವೇ ಎರಡನೇ  ಅತಿ ದೊಡ್ಡ ದೇಶವಾಗಿದೆ. ನಮ್ಮ ದೇಶದಿಂದ ಸುಮಾರು 60 ಕ್ಕೂ ಅಧಿಕ ರಾಷ್ಟ್ರಗಳಿಗೆ ಜೇನುತುಪ್ಪ ರಫ್ತಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.