ಬುಧವಾರ, ಮೇ 12, 2021
27 °C

ರಸಗೊಬ್ಬರ ಕೊರತೆ: ತಪ್ಪದ ಬವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ತಾಲ್ಲೂಕಿನ ಮರಳಿ ಗ್ರಾಮದಲ್ಲಿ ಶನಿವಾರ ಗೊಬ್ಬರಕ್ಕಾಗಿ ರೈತರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.ಶುಕ್ರವಾರವಷ್ಟೆ ಜಿಲ್ಲಾಡಳಿತವು, ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ 20ರಿಂದ 34 ಟನ್ ಗೊಬ್ಬರ ಪೂರೈಸಿದೆಯಾದರೂ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಸಲ್ಲಿಸಿದ ಬೇಡಿಕೆಯ ಕನಿಷ್ಟ ಶೇ, 10ರಷ್ಟು ಪೂರೈಕೆಯಾಗುತ್ತಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದರು.ಕೇಳಿದ್ದು 250 ಟನ್: `ವಿ.ಎಸ್.ಎಸ್.ಎನ್ ವ್ಯಾಪ್ತಿಯ ಮೂರು ಗ್ರಾಮದ ಮಧ್ಯೆ 2ಸಾವಿರ ಎಕರೆ ಭೂಮಿಯಿದೆ. ಸುಮಾರು 250 ಟನ್ ಗೊಬ್ಬರ ಕೇಳಲಾಗಿತ್ತು. ಆದರೆ ಪೂರೈಸಿರುವುದು ಮಾತ್ರ ಕೇವಲ 51 ಟನ್~ ಎಂದು ಮರಳಿ ವ್ಯವಸಾಯ ಸೇವಾ ಸಹಕಾರ ಸಂಘದ ವ್ಯವಸ್ಥಾಪಕ ಎಸ್.ಎಂ. ಗೌಡರ್ ಹೇಳಿದರು.ತಲಾ 2 ಚೀಲ ಬೇಕು: ಬ್ಯಾಂಕ್ ವ್ಯಾಪ್ತಿಯಲ್ಲಿ ಆ. ನರಸಾಪುರ 770, ಮರಳಿ 1400 ಮತ್ತು ಕಲ್ಗುಡಿಗೆ ಸುಮಾರು ಸಾವಿರ ಎಕರೆ ಕೃಷಿ ಜಮೀನಿದೆ. ಎಕರೆಗೆ ತಲಾ ಎರಡು ಚೀಲದಂತೆ ಕನಿಷ್ಟ ಇನ್ನೂ ಎರಡು ಸಾವಿರ ಚೀಲ ರಸಗೊಬ್ಬರದ ಅಗತ್ಯವಿದೆ ಎಂದು ಲಕ್ಷ್ಮಣ ನಾಯಕ್, ರಾಮಣ್ಣ ಉಪ್ಪಾರ ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.