ಶುಕ್ರವಾರ, ಮೇ 14, 2021
31 °C

ರಸಗೊಬ್ಬರ ಬೆಲೆ ದ್ವಿಗುಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:  ಮುಂಗಾರಿಗೂ ಮುನ್ನವೇ ರಸಗೊಬ್ಬರದ ಬೆಲೆ ದ್ವಿಗುಣಗೊಂಡಿದೆ!

ಹೌದು, ಕಳೆದ ವರ್ಷದಿಂದ ಏರುಮುಖದಲ್ಲೇ ಸಾಗಿರುವ ರಸಗೊಬ್ಬರದ ದರ ಈಗ ಗಗನಕ್ಕೆ ಏರಿದೆ. ಯೂರಿಯಾ ಹೊರತುಪಡಿಸಿ ಎಲ್ಲ ರಸಗೊಬ್ಬರಗಳ ಬೆಲೆಯಲ್ಲಿ ಭಾರಿ ಹೆಚ್ಚಳ ಕಂಡು ಬಂದಿದೆ.ಎಂಒಪಿ, ಡಿಎಪಿ, 10:26:26ಗಳ ದರ ಎರಡು ಪಟ್ಟು ಹೆಚ್ಚಾಗಿದೆ. 20:20:13, ಎಸ್‌ಎಸ್‌ಪಿ, 28:28, 24:24 ಸೇರಿದಂತೆ ಅನೇಕ ರಸಗೊಬ್ಬರಗಳ ಬೆಲೆ ಏರಿದೆ. ಮಾರ್ಚ್ ಕೊನೆಯ ವಾರದಲ್ಲೇ ತರಹೇವಾರಿ ಹತ್ತಿ ಬೀಜಗಳು ಮೈಸೂರಿನ ಮಾರುಕಟ್ಟೆಗೆ ಬಂದಿದ್ದು, ಬಿತ್ತನೆ ಬೀಜಗಳನ್ನು ವಿಚಾರಿಸಲು ಅಂಗಡಿಗಳನ್ನು ಎಡತಾಕುತ್ತಿರುವ ರೈತರು ರಸಗೊಬ್ಬರದ ಬೆಲೆ ಕೇಳಿ ದಿಗಿಲಾಗಿದ್ದಾರೆ.ಕಳೆದ ಮೇ ತಿಂಗಳಿನಲ್ಲಿ  ರೂ315ಕ್ಕೆ ಸಿಗುತ್ತಿದ್ದ 50 ಕೆಜಿ ಐ.ಪಿ.ಎಲ್ ಕಂಪನಿಯ ಎಂ.ಒ.ಪಿ ರಸಗೊಬ್ಬರಕ್ಕೆ ಈಗ ಬರೋಬ್ಬರಿ ರೂ630 ಬೆಲೆ ಇದೆ.  ರೂ268 ಇದ್ದ ಆರ್.ಸಿ.ಎಫ್. ಕಂಪನಿಯ ಎಂ.ಒ.ಪಿ ರಸಗೊಬ್ಬರಕ್ಕೆ ಈಗ ರೂ588. ಡಿಎಪಿ (ಐಪಿಎಲ್)  ರೂ630 ರಿಂದ ರೂ1050ಕ್ಕೆ, ಸ್ಪಿಕ್ ರೂ662 ರಿಂದ ್ಙ969ಕ್ಕೆ ಜಿಗಿದಿದೆ.ರೂ180ಕ್ಕೆ ಸಿಗುತ್ತಿದ್ದ ಎಸ್‌ಎಸ್‌ಪಿ (ಆರ್‌ಕೆಆರ್- ಪುಡಿ)ಯ ಬೆಲೆ ರೂ310 ಆಗಿದೆ. 10:26:26 (ಸಿ.ಎಫ್.ಎಲ್)  ರೂ467 ರಿಂದ ರೂ840ಕ್ಕೆ ಹೆಚ್ಚಳವಾಗಿದೆ. 20:20;13 ಬೆಲೆ ರೂ493 ರಿಂದ  ರೂ800ಕ್ಕೆ ಏರಿದೆ. ಆದರೆ ಯೂರಿಯಾ ಮಾತ್ರ ರೂ281ಕ್ಕೆ ನಿಂತಿದೆ.ಪ್ರತಿ ಮುಂಗಾರಿನಲ್ಲಿ ರಾಜ್ಯಕ್ಕೆ ಸುಮಾರು 12 ಲಕ್ಷ ಮೆಟ್ರಿಕ್ ಟನ್‌ಗೂ ಹೆಚ್ಚು ರಸಗೊಬ್ಬರದ ಅಗತ್ಯವಿದೆ. ಹೀಗಾಗಿ ರಸಗೊಬ್ಬರದ ಅಭಾವನ್ನು ಪರಿಹರಿಸಲು  ರೂ1,163 ಕೋಟಿ ಮೌಲ್ಯದ 8 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ.1.5 ಲಕ್ಷ ಟನ್ ಯೂರಿಯಾ, 2.5 ಲಕ್ಷ ಟನ್ ಕಾಂಪ್ಲೆಕ್ಸ್, 3 ಲಕ್ಷ ಟನ್ ಡಿಎಪಿ, 1 ಲಕ್ಷ ಟನ್ ಎಂಒಪಿ ರಸಗೊಬ್ಬರಗಳನ್ನು ಅಗತ್ಯಕ್ಕೆ ತಕ್ಕಂತೆ ಆಯಾ ಜಿಲ್ಲಾ ಕೇಂದ್ರಗಳಲ್ಲೇ ಸಂಗ್ರಹಿಸಲಾಗುತ್ತಿದೆ.

 ಹೀಗಾಗಿ ರಸಗೊಬ್ಬರದ ಅಭಾವಕ್ಕಿಂತ ಬೆಲೆ ಏರಿಕೆಯ ಬಿಸಿ ರೈತರನ್ನು ತೀವ್ರವಾಗಿ ತಟ್ಟಲಿದೆ.ಕಚ್ಚಾವಸ್ತು ಬೆಲೆ ಹೆಚ್ಚಳ:  ರಸಗೊಬ್ಬರದ ಕಚ್ಚಾವಸ್ತುಗಳಾದ ಪೊಟ್ಯಾಷ್, ಪಾಸ್ಪೆರಿಕ್ ಆಸಿಡ್ ಹಾಗೂ ಸಲ್ಫೂರಿಕ್ ಆಸಿಡ್‌ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವುಗಳ ಬೆಲೆಯಲ್ಲಿ ವಿಪರೀತ  ಏರಿಕೆ ಕಂಡಿದೆ.   ಸರ್ಕಾರದ ಸಬ್ಸಿಡಿ ಮಾತ್ರ ಹಾಗೇ ಇದೆ. ಅಲ್ಲದೆ, ಪ್ರತಿ ವರ್ಷ ರಸಗೊಬ್ಬರದ ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ ರಸಗೊಬ್ಬರದ ದರ ಏರಿಕೆಯಾಗಿದೆ~ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.