ಪರೀಕ್ಷೆಯ ಸಮಯವಾದರೇನಂತೆ? ಅಥವಾ ಪರೀಕ್ಷೆಗೆ ತಯಾರಿ ನಡೆಸುವ ರಜಾದಿನವಾದರೇನಂತೆ? ಕಾಲೇಜು ಕ್ಯಾಂಪಸ್ ಎಂದರೆ ವಿದ್ಯಾರ್ಥಿಗಳಿಗೆ ಸದಾ ಇಷ್ಟದ ಸ್ಥಳ. ಸ್ನೇಹಿತರೊಂದಿಗೆ ಕುಳಿತಕೊಂಡು ಹರಟೆ ಹೊಡೆಯಲು, ಹೊಸ ಹೊಸ ಸ್ನೇಹಿತರನ್ನು ಗಳಿಸಲು ಕಾಲೇಜು ಕ್ಯಾಂಪಸ್ಗಿಂತ ನೆಚ್ಚಿನ ತಾಣ ಬೇರೊಂದಿಲ್ಲ.

ಸೇಂಟ್ ಆ್ಯನ್ಸ್ ಮಹಿಳೆಯರ ಕಾಲೇಜಿನ ವಿದ್ಯಾರ್ಥಿನಿಯರೂ ಅಷ್ಟೆ. ಕಾಲೇಜಿನ ತಮ್ಮ ಬಿಡುವಿನ ವೇಳೆಯಲ್ಲಿ ಹಲವು ಚಟುವಟಿಕೆಗಳಲ್ಲಿ ತೊಡಗುತ್ತಾರೆ.

ಮಿಲ್ಲರ್ಸ್ ರಸ್ತೆಯಲ್ಲಿನ ಸೇಂಟ್ ಆ್ಯನ್ಸ್ ಕಾಲೇಜಿನ ಕ್ಯಾಂ.ಪಸ್ ಒಳಗೆ ಪ್ರವೇಶಿಸಿದರೆ ಅಲ್ಲಿನ ಕಾಲುದಾರಿಯಲ್ಲಿ ಅಥವಾ ಅಲ್ಲಿರುವ ಕಲ್ಲಿನ ಬೆಂಚುಗಳ ಮೇಲೆ ಕುಳಿತ ವಿದ್ಯಾರ್ಥಿನಿಯರು ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸುತ್ತಿರುವುದನ್ನು ಕಾಣಬಹುದು.

ಕಾಲೇಜಿನ ಹೊರ ಆವರಣಕ್ಕೆ ತಾಗಿಕೊಂಡಿರುವ ಉದ್ದನೆಯ ಕಾಲುದಾರಿ ವಿದ್ಯಾರ್ಥಿನಿಯರ ಅತ್ಯಂತ ಇಷ್ಟದ ತಾಣ. ಏಕೆಂದರೆ ಟಿಫಿನ್ ಬಾಕ್ಸ್ಗಳಲ್ಲಿರುವುದನ್ನು ಹಂಚಿಕೊಂಡು ತಿನ್ನಲು, ತಲೆಕೂದಲು ಬಾಚಲು, ಮೆಹಂದಿ, ನೇಲ್ಪಾಲಿಷ್ ಹಚ್ಚಲು ಅವರಿಗೆ ಇದಕ್ಕಿಂತ ಅತ್ಯುತ್ತಮ ಜಾಗ ಇನ್ನೊಂದಿಲ್ಲ.

‘ನಮಗೆ ಸ್ವಲ್ಪ ಬಿಡುವು ಸಿಕ್ಕಾಗಲೆಲ್ಲ ನಾವು ಈ ಕಾಲುದಾರಿಯತ್ತ ಬರುತ್ತೇವೆ. ಮಧ್ಯಾಹ್ನದ ವೇಳೆಯಂತೂ ಇಲ್ಲಿ ಕುಳಿತುಕೊಳ್ಳಲೂ ಜಾಗ ದೊರೆಯುವುದಿಲ್ಲ. ಆಗ ನಾವು ಮರದ ಕೆಳಗಿರುವ ಕಲ್ಲಿನ ಬೆಂಚಿನ ಮೊರೆ ಹೋಗುತ್ತೇವೆ. ಈ ಕಾಲುದಾರಿ ತರಗತಿ ಕೋಣೆಗಳಿಂದ ದೂರ ಇರುವುದರಿಂದ ನಾವು ಗಟ್ಟಿಯಾಗಿ ಮಾತನಾಡಿದರೂ ಯಾರಿಗೂ ತೊಂದರೆ ಇಲ್ಲ’ ಎನ್ನುತ್ತಾರೆ ದ್ವಿತೀಯ ಪಿಯುಸಿ ಕಾಮರ್ಸ್ ವಿದ್ಯಾರ್ಥಿನಿ ಶಿಲ್ಪಾ.

ಕಾಲೇಜಿನಲ್ಲಂತೂ ಡ್ರೆಸ್ ಕೋಡ್ ಇದೆ. ವಿದ್ಯಾರ್ಥಿಗಳು ಜೀನ್ಸ್, ಲೆಗ್ಗಿಂಗ್ಸ್ ಧರಿಸುವಂತಿಲ್ಲ. ಮೊಬೈಲ್ ಬಳಸುವಂತಿಲ್ಲ. ಅನಗತ್ಯವಾಗಿ ಕಾಲೇಜು ಬಿಟ್ಟು ಹೊರಗೆ ತೆರಳುವಂತಿಲ್ಲ, ಆದರೆ ಇವ್ಯಾವುವೂ ಈ ವಿದ್ಯಾರ್ಥಿಗಳಿಗೆ ಬೇಸರ ಉಂಟು ಮಾಡುತ್ತಿಲ್ಲ.

‘ಸ್ನೇಹಿತರು ಸುತ್ತಲೂ ಇರುವಾಗ ಯಾವುದೇ ಖಾಲಿ ಜಾಗವನ್ನು ಕೂಡ ಚಟುವಟಿಕೆಯ ಕೇಂದ್ರವನ್ನಾಗಿಸಬಹುದು. ಅದು ತರಗತಿ ಕೊಠಡಿಯೇ ಇರಲಿ, ಲೈಬ್ರೆರಿ, ಆಡಿಟೋರಿಯಂ ಆಗಿರಲಿ. ಅದಕ್ಕಿಂತಲೂ ಹೆಚ್ಚಾಗಿ ಕ್ಯಾಂಪಸ್ ಒಳಗೆ ನಾವು ಹೆಚ್ಚು ಸುರಕ್ಷಿತ ಎನ್ನಿಸುತ್ತದೆ’ ಶಿಲ್ಪಾ ಹೇಳುತ್ತಾರೆ.

ಪರೀಕ್ಷೆಗೆ ತಯಾರಿ ನಡೆಸಲು ಇದೀಗ ರಜೆ ಆದರೂ ಕೂಡ ಹೆಚ್ಚಿನಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಇಲ್ಲಿ ಕಾಣಬಹುದು.

‘ಜೊತೆಯಾಗಿ ಕುಳಿತು ಓದಬೇಕೆನ್ನಿಸಿದರೆ ನಾವು ಕಾಲೇಜಿಗೆ ಬರುತ್ತೇವೆ. ಏಕೆಂದರೆ ಏನಾದರೂ ಪ್ರಶ್ನೆಗಳಿದ್ದರೆ ಕೂಡಲೇ ಅಧ್ಯಾಪಕರ ಬಳಿ ತೆರಳಿ ಅದನ್ನು ಪರಿಹರಿಸಿಕೊಳ್ಳಬಹುದು. ಮಾತ್ರವಲ್ಲ, ಇದು ಓದಲು ದೊರೆತ ರಜೆಯಾದರೂ ಕೂಡ ಮನೆಯಲ್ಲಿ ಕುಳಿತು ಒಂದೇ ಸಮನೆ ಓದಿ ಬೋರ್ ಹೊಡೆಯುವುದರಿಂದ ಇಲ್ಲಿಗೆ ಬರುತ್ತೇವೆ. ಕಾಲೇಜು ಕ್ಯಾಂಪಸ್ ನಮಗೆ ಹೊಸ ಹುಮ್ಮಸ್ಸು ನೀಡುತ್ತದೆ.

ಅದಕ್ಕಿಂತಲೂ ಹೆಚ್ಚಾಗಿ ಸ್ನೇಹಿತರ ಜೊತೆ ಕಳೆಯಲು ಸಿಗುವ ಈ ರಸಮಯ ಕ್ಷಣಗಳು ಪರೀಕ್ಷೆಯ ಎಲ್ಲಾ ಒತ್ತಡಗಳನ್ನು ದೂರ ಸರಿಸುತ್ತದೆ’ ಎನ್ನುತ್ತಾರೆ ಸುನಿತಾ.
ಇನ್ನು ಕಾಲೇಜಂತೂ ಮಹಾನಗರದ ಮಧ್ಯಭಾಗದಲ್ಲೇ ಇರುವುದರಿಂದ ವಿದ್ಯಾರ್ಥಿಗಳಿಗಂತೂ ಸಮಯ ಕಳೆಯಲು ಮಾಲ್ಗಳು, ಥಿಯೇಟರ್ಗಳು ಸುತ್ತಮುತ್ತಲಿವೆ.

‘ನಮಗಂತೂ ಸಿಗ್ಮಾ ಮಾಲ್ನಿಂದ ಹಿಡಿದು ಸಫೀನಾ ಪ್ಲಾಜಾ, ಚಿಕನ್ ಸೆಂಟರ್, ಪಿಜ್ಜಾ ಕಾರ್ನರ್ ಎಲ್ಲವೂ ಇವೆ ಕಾಲಕಳೆಯಲು. ನಿಧಿ ಕಾರ್ನರ್ ಅಂತೂ ನಮ್ಮೆಲ್ಲರ ಇಷ್ಟದ ತಾಣ. ನಾವೆಲ್ಲರೂ ಅಲ್ಲಿಗೆ ಆಗಾಗ ಹೋಗುತ್ತಲೇ ಇರುತ್ತೇವೆ. ಅಲ್ಲಿ ರುಚಿಯಾದ ಪರಾಟಾ ಮತ್ತು ಪಾವ್ಬಜಿ ದೊರೆಯುತ್ತದೆ. ಜೊತೆಗೆ ಕಮರ್ಷಿಯಲ್ ಸ್ಟ್ರೀಟ್ನಲ್ಲಿಯೂ ನಾವು ಸುತ್ತುತ್ತೇವೆ’ ಎನ್ನುತ್ತಾರೆ ವೀಣಾ.

ವಿದ್ಯಾರ್ಥಿ ಜೀವನದ ರಸಮಯ ಕ್ಷಣಗಳನ್ನು ಕಳೆಯಲು ಇದಕ್ಕಿಂತ ಇನ್ನೇನು ಬೇಕು ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.