ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜರಾಜೇಶ್ವರಿನಗರ ಮತ್ತು ದಾಸರಹಳ್ಳಿ ವಲಯಕ್ಕೆ ಸೇರಿರುವ ಲಗ್ಗೆರೆ ಮತ್ತು ಇತ್ತೀಚೆಗೆ ಅಭಿವೃದ್ಧಿಯಾದ ಚೌಡೇಶ್ವರಿ ನಗರ, ರಾಜೀವಗಾಂಧಿನಗರ ಕೆಂಪೇಗೌಡ ಬಡಾವಣೆಗಳು ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಂಡಿವೆ.

ಆದರೆ ಲಗ್ಗೆರೆ ಗ್ರಾಮದೊಳಗೆ ಹಾದುಹೋಗುವ ಮುಖ್ಯ ರಸ್ತೆಯು ಕಿರಿದಾಗಿದ್ದು ಬಿಎಂಟಿಸಿಯ 3-4 ಮಾರ್ಗಗಳ ಬಸ್ಸುಗಳು ಲಗ್ಗೆರೆಯ ಹೊರವಲಯದ ಬಸ್ಸು ನಿಲ್ದಾಣಕ್ಕೆ ಮಾತ್ರ ಬಂದು ಹೋಗುತ್ತವೆ. ಇದರಿಂದ ಲಗ್ಗೆರೆಯ ಹೊಸ ಬಡಾವಣೆಗಳ ನಿವಾಸಿಗಳು ಪ್ರತಿದಿನ 2-3 ಕಿ.ಮೀ. ದೂರ ನಡೆಯ ಬೇಕಾಗಿದೆ. ಮಹಿಳೆಯರಿಗೆ, ವೃದ್ಧರಿಗೆ ಇದು ತುಸು ತ್ರಾಸದಾಯಕವಾಗಿದೆ.

ಈ ಬಗ್ಗೆ ಹಲವು ಸಲ ಮನವಿಗಳನ್ನು ಸಲ್ಲಿಸಲಾಗಿದೆ. ಆದರೆ ಈ ತನಕ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಈಚೆಗೆ ಈ ಮುಖ್ಯ ರಸ್ತೆಯಲ್ಲಿ ದಿವಂಗತ ಚಲನಚಿತ್ರ ನಟರ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿದ್ದಾರೆ.

ಕಾವೇರಿ 4ನೇ ಹಂತದ ನೀರಿನ ಪೈಪುಗಳನ್ನು ಇದೇ ಮುಖ್ಯ ರಸ್ತೆಯಲ್ಲಿ ಹಾಕುವ ಕಾಮಗಾರಿ ಆರಂಭವಾಗಿದೆ. ಈಗಲಾದರೂ ಬಿಬಿಎಂಪಿಯ ಆಯುಕ್ತರು ಮತ್ತು ಮೇಯರ್ ಕಿರಿದಾದ ಈ ರಸ್ತೆಯನ್ನು ವಿಸ್ತರಿಸುವತ್ತ ಗಮನ ಹರಿಸುವರೆ? ಬಿಎಂಟಿಸಿಯ ಬಸ್ಸುಗಳು ಮುಂದಿನ ಹೊಸ ಬಡಾವಣೆಗಳಿಗೆ ಸುಲಭವಾಗಿ ಬಂದು ಹೋಗುವಂತೆ ಕ್ರಮ ಕೈಗೊಳ್ಳುತ್ತಾರೆಂದು ಆಶಿಸೋಣವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.