ಭಾರತದಲ್ಲಿ ಪ್ರತಿದಿನವೂ ರಸ್ತೆ ಅಪಘಾತಗಳಲ್ಲಿ ಕನಿಷ್ಠ 360 ಜನ ಸಾವನ್ನಪ್ಪುತ್ತಾರೆ. ಇದು ಜಾಗತಿಕ ಮಟ್ಟದ ಒಟ್ಟು ಪ್ರಮಾಣದಲ್ಲಿ ಶೇಕಡ 10ರಷ್ಟಿದೆ. 2011ರಲ್ಲಿ ರಸ್ತೆ ಅಪಘಾತಗಳಲ್ಲಿ ಸತ್ತವರ ಸಂಖ್ಯೆ 1,42,492. ಇವರಲ್ಲಿ 12,867 ಮಂದಿ ಪಾದಚಾರಿಗಳು. ಯೋಜನಾ ಆಯೋಗದ ಅಂದಾಜಿನಂತೆ 1999 ಮತ್ತು 2000 ಇಸವಿಯಲ್ಲಿ ರಸ್ತೆ ಅಪಘಾತಗಳ ಪರಿಣಾಮದಿಂದಾಗಿ 55 ಸಾವಿರ ಕೋಟಿ ರೂಪಾಯಿಗಳಷ್ಟು ಸಾಮಾಜಿಕ ವೆಚ್ಚ ವ್ಯಯವಾಗಿರುವುದು ಕಂಡು ಬಂದಿದೆ...

ಇಂತಹ ಹತ್ತು ಹಲವು ಗಂಭೀರ ಸಂಗತಿಗಳನ್ನು `ರಸ್ತೆ ಸುರಕ್ಷತಾ ಹಾಗೂ ಸಂಚಾರ ನಿರ್ವಹಣಾ ಸಮಿತಿ~ ತನ್ನ ಕಳೆದ ತಿಂಗಳ ವರದಿಯಲ್ಲಿ ಉಲ್ಲೇಖಿಸಿದೆ.

ಭಾರತದ ರಸ್ತೆ ದುರಂತಗಳನ್ನು ಗಮನಿಸಿದಾಗ ಇಲ್ಲಿ ಮಾನವ ಜೀವಕ್ಕೆ ಬೆಲೆಯೇ ಇಲ್ಲ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಅದು ಯರ್ರನ್ ನಾಯ್ಡು ಇರಬಹುದು, ರಾಜ್ಯಸಭಾ ಸದಸ್ಯರಾಗಿದ್ದ ಬಿಹಾರದ ದಯಾನಂದ ಸಹಾಯ್ ಇರಬಹುದು ಅಥವಾ ಕ್ರಿಕೆಟಿಗ ಮಹಮ್ಮದ್ ಅಜರುದ್ದೀನ್ ಪುತ್ರನೇ ಇರಬಹುದು ಅಥವಾ ಯಾವುದೋ ಕೂಲಿ ಕೆಲಸಕ್ಕೆ ಜನರನ್ನು ಹೊತ್ತೊಯ್ಯುವ ಟಂಟಂ ವಾಹನಗಳೇ ಆಗಿರಬಹುದು. ಇವರೆಲ್ಲಾ ಹುಳುಗಳಂತೆ ರಸ್ತೆಯಲ್ಲಿ ಸತ್ತು ಹೋಗಿದ್ದಾರೆ.
ಭಾರತದ ರಸ್ತೆ ಅಪಘಾತಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಪದೇ ಪದೇ ಕಳವಳ ವ್ಯಕ್ತಪಡಿಸುತ್ತಲೇ ಇರುತ್ತದೆ. 2005ರಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿರ್ವಹಣೆಗಾಗಿ ಸಮಿತಿಯೊಂದನ್ನು ನೇಮಿಸಿತು. ಇದು ರಾಷ್ಟ್ರೀಯ ಮಟ್ಟದಲ್ಲಿ ರಸ್ತೆ ಸುರಕ್ಷತೆಗಳ ಬಗ್ಗೆ ಮತ್ತು ಅವುಗಳ ನಿರ್ವಹಣೆ ಜವಾಬ್ದಾರಿಗಳ ಬಗ್ಗೆ ಆಗಾಗ್ಗೆ ವರದಿ ಸಲ್ಲಿಸುವ ಪರಿಪಾಠ ಹೊಂದಿದೆ. ಈ ಸಮಿತಿಯ ಅನುಸಾರ ದೇಶದ ರಸ್ತೆ ಅಪಘಾತಗಳಿಗೆ ಹತ್ತು ಹಲವು ಆಯಾಮಗಳಿವೆ.

ಮೊದಲನೆಯದಾಗಿ ಕುಡಿದು ವಾಹನ ಚಲಾಯಿಸುವುದು, ಅತಿವೇಗ-ಅಜಾಗರೂಕತೆ, ರಸ್ತೆಗಳ ಮೂಲ ಸೌಕರ್ಯದ ಕೊರತೆ, ಅಸುರಕ್ಷಿತ ವಾಹನ ಚಾಲನೆ, ಹೆಲ್ಮೆಟ್ ಧರಿಸದೇ ಇರುವುದು, ಕಾರುಗಳಲ್ಲಿ ಕುಳಿತಾಗ ಬೆಲ್ಟ್ ಧರಿಸದೇ ಪಯಣಿಸುವುದು, ಕಾನೂನು ಮತ್ತು ಜಾರಿ ನಿರ್ದೇಶನಾಲಯದ ಹೊಣೆಗಾರಿಕೆಯ ಲೋಪಗಳು, ಸಂಚಾರ ಹೊರಡುವವರ ಉದಾಸೀನತೆ ಅಥವಾ ಪೂರ್ವಭಾವಿ ಸುರಕ್ಷತೆ ಇಲ್ಲದೇ ಇರುವುದು, ಅಪಘಾತ ಸಂಭವಿಸಿದ ಕೂಡಲೇ ಆರೋಗ್ಯ ಮತ್ತು ಆಸ್ಪತ್ರೆಗಳ ತುರ್ತು ಸೇವೆಯಲ್ಲಿ ಕಂಡುಬರುವ ವ್ಯತ್ಯಯ, ಮಕ್ಕಳ ಬಗ್ಗೆ ನಿಗಾ ವಹಿಸದೇ ಇರುವುದು, ನಗರ ಪ್ರದೇಶಗಳಲ್ಲಿನ ಇಕ್ಕಟ್ಟಾದ ರಸ್ತೆಗಳು, ವೇಗವಾದ ನಗರೀಕರಣ... ಇಂತಹ ಹಲವಾರು ದೋಷಗಳನ್ನು ಸಮಿತಿ ಪಟ್ಟಿ ಮಾಡಿದೆ.

ಉಮೇದಿನಲ್ಲಿ ವಾಹನ ಓಡಿಸುವವರು; ತಿರುವುಗಳಲ್ಲಿ ಅಪಾಯಕಾರಿಯಾಗಿ ನುಗ್ಗಿಸುವುದು, ಸರತಿಯನ್ನು ತುಂಡರಿಸಿ ಮಧ್ಯದಲ್ಲೇ ನುಗ್ಗುವುದು, ಸಿಗ್ನಲ್ಗಳನ್ನು ಲೆಕ್ಕಿಸದೆ ಹೋಗುವುದು, ಎಲ್ಲಿ ಬೇಕೆಂದರಲ್ಲಿ ಪಾರ್ಕಿಂಗ್ ಮಾಡುವುದು, ಫುಟ್ಪಾತ್ಗಳಲ್ಲಿ ನುಗ್ಗಿಸಿಕೊಂಡು ಮುಂದೆ ಸಾಗುವುದು ಒಂದು ಕಡೆಯಾದರೆ ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆ, ಹಳೆಯ ರಸ್ತೆಗಳು ಇದ್ದಂತೇ ಇರುವುದು, ವಿಸ್ತರಣೆ ಇಲ್ಲದಿರುವುದು, ರಸ್ತೆಗಳ ಅಸಮರ್ಪಕ ನಿರ್ವಹಣೆ ಹಾಗೂ ಅಸುರಕ್ಷಿತ ವಾಹನ ಚಾಲನೆ ಸಮಸ್ಯೆಯ ಮತ್ತೊಂದು ಮಗ್ಗಲು ಎನಿಸಿವೆ. ನಗರ ಪ್ರದೇಶಗಳ ಒಳಗೆ ಖಾಸಗಿ ವಾಹನ ಸವಾರರು ಹೆಚ್ಚಾಗಿ ಅಪಘಾತಗಳಿಗೆ ಕಾರಣರಾದರೆ, ಸರಕು ಸಾಗಣೆಯ ವಾಣಿಜ್ಯ ವಾಹನಗಳು ಮತ್ತು ಬಸ್ಗಳು ಹೊರವಲಯದ ಅಥವಾ ಹೆದ್ದಾರಿಗಳ ಅಪಘಾತಗಳಿಗೆ ಕಾರಣವಾಗುತ್ತಿವೆ.

ಅಪಘಾತಗಳಿಗೆ ಸಂಬಂಧಿಸಿದಂತೆ ಏನೆಲ್ಲಾ ಕಾನೂನು, ಕಟ್ಟಳೆಗಳಿದ್ದರೂ ಅವೆಲ್ಲಾ ಉಪಯೋಗಕ್ಕೆ ಬಾರದಂತಿವೆ. ನಿತ್ಯವೂ ರಸ್ತೆ ಅಪಘಾತಗಳ ಸಂಖ್ಯೆ ಏರುತ್ತಲೇ ಇದೆ. ರಸ್ತೆ ಅಪಘಾತಗಳಲ್ಲಿ ಸಾಯುವವರಲ್ಲಿ ಹೆಚ್ಚು ಜನ ಮಧ್ಯಮ ವರ್ಗದವರೇ. ಇವರಲ್ಲಿನ ವಾಹನ ಕೊಳ್ಳುವ ಆಸೆ, ಸಾಮಾಜಿಕ ಪ್ರತಿಷ್ಠೆ, 15-30 ವರ್ಷದೊಳಗಿನ ಯುವ ಜನತೆಯ ವಾಹನ ಓಡಿಸುವ ಖಯಾಲಿಗಳು, ಗ್ರಾಹಕ ಪ್ರವೃತ್ತಿ ಮುಖ್ಯ ಕಾರಣಗಳೆನಿಸಿವೆ.

ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ರಸ್ತೆ ಸುರಕ್ಷತೆ ಕುರಿತಂತೆ ತಂತಮ್ಮ ಜವಾಬ್ದಾರಿಗಳನ್ನು ನಿಭಾಯಿಸುತ್ತಿವೆ. ಕೇಂದ್ರದ ಮಟ್ಟದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿ ಎಂಬುದೊಂದು ಕೇಂದ್ರ ಸಚಿವರ ಮೂಗಿನಡಿಯಲ್ಲೇ ಕಾರ್ಯ ನಿರ್ವಹಿಸುತ್ತಿದೆ. ಇದು ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ದೇಶದ ಅತ್ಯುನ್ನತ ಸಲಹಾ ಸಮಿತಿಯೂ ಆಗಿದೆ. ರಸ್ತೆ ಸಾರಿಗೆ ಅಭಿವೃದ್ಧಿಗೆ ಸಾಮಾನ್ಯ ನೀತಿಗಳನ್ನು ರೂಪಿಸುವಲ್ಲಿ ಸಾಗಣೆ ಅಭಿವೃದ್ಧಿ ಕಾರ್ಪೊರೇಷನ್ ಅತ್ಯುನ್ನತ ವೇದಿಕೆಯಾಗಿದೆ.

ಅಂತೆಯೇ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ ಕೂಡಾ ರಸ್ತೆ ಅಪಘಾತಗಳು, ಚಿಕಿತ್ಸೆ ಇತ್ಯಾದಿಗಳ ಅಂಕಿ ಅಂಶ ಸಂಗ್ರಹಿಸಿಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಸ್ತೆ ಅಪಘಾತಗಳಲ್ಲಿ ಆ್ಯಂಬುಲೆನ್ಸ್ ಸೇವೆ ಮತ್ತು ಹೆದ್ದಾರಿ ಗಸ್ತು ಹಾಗೂ ಗಾಯಾಳುಗಳಿಗೆ ತುರ್ತು ವೈದ್ಯಕೀಯ ಸೇವೆ ಒದಗಿಸುವ ಜವಾಬ್ದಾರಿ ಹೊಂದಿದೆ.

ರಾಜ್ಯಮಟ್ಟದಲ್ಲಿ ಮೋಟಾರು ವಾಹನಗಳ ಕಾಯ್ದೆ-1988ರ ಅನುಸಾರ ರಸ್ತೆ ಸುರಕ್ಷತಾ ಮಂಡಳಿಯ ರಚನೆ ರಾಜ್ಯ ರಸ್ತೆ ಸಾರಿಗೆ ಸಚಿವಾಲಯದ ಹೊಣೆ ಎಂಬುದನ್ನು ಸ್ಪಷ್ಟವಾಗಿ ವಿಶದಪಡಿಸುತ್ತದೆ. ಇದರೊಟ್ಟಿಗೆ ಸೇತುವೆ ಮತ್ತು ರಸ್ತೆಗಳ ನಿರ್ವಹಣೆ ಹಾಗೂ ರಸ್ತೆ ಸುರಕ್ಷತೆಯ ಮಾರ್ಗಸೂಚಿಗಳನ್ನು ರೂಪಿಸುವ ಭಾರತೀಯ ರಸ್ತೆಗಳ ನಿರ್ವಹಣಾ ಸಮಿತಿ ಹಾಗೂ ಕೇಂದ್ರ ರಸ್ತೆ ಅಭಿವೃದ್ಧಿ ಸಂಶೋಧನಾ ಸಂಸ್ಥೆಗಳು ಅಪಘಾತಗಳ ತಡೆಗೆ ಶ್ರಮಿಸಬೇಕು. ಹೆದ್ದಾರಿ ಎಂಜಿನಿಯರ್ಗಳಿಗೆ ತರಬೇತಿ ನೀಡುವ ರಾಷ್ಟ್ರೀಯ ಸಂಸ್ಥೆಯು ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಸರ್ಕಾರದ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಹಾಗೂ ಸಂಬಂಧಿಸಿದವರಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಹೇಳುತ್ತದೆ.

ಮೋಟಾರು ವಾಹನ ಕಾಯ್ದೆಯ ಅನುಸಾರ ರಸ್ತೆ ಅಪಘಾತಗಳಿಗೆ ನೇರವಾಗಿ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಪ್ರತಿಪಾದಿಸಲಾಗುತ್ತದೆ. ವಿಶ್ವದಲ್ಲಿ ಸದ್ಯ ಒಟ್ಟು ಸಂಚರಿಸುತ್ತಿರುವ ವಾಹನಗಳಲ್ಲಿ ಕೇವಲ 48ರಷ್ಟು ಮಾತ್ರ ನೋಂದಣಿ ಹೊಂದಿದ ವಾಹನಗಳಿವೆಯಂತೆ! ಭಾರತದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ `ರಸ್ತೆ ಸುರಕ್ಷತಾ ಹಾಗೂ ಸಂಚಾರ ನಿರ್ವಹಣಾ ಸಮಿತಿ~ ಕೆಲವೊಂದು ನಿಯಂತ್ರಣಗಳ ಪಟ್ಟಿ ಮಾಡಿದೆ. ಅವುಗಳಲ್ಲಿ ಮುಖ್ಯವಾಗಿ ಜಾಗತಿಕ ಮಟ್ಟದ ಸೂತ್ರಗಳ ಅನುಸಾರ ರಸ್ತೆ ಅಪಘಾತ ತಡೆಯಲು ಸಮಗ್ರ ಕ್ರಿಯಾ ಯೋಜನೆ ರೂಪಿಸುವುದಾಗಿದೆ.

ತುರ್ತು ಚಿಕಿತ್ಸಾ ಸೇವೆಗಳನ್ನು ಹೆಚ್ಚಿಸುವುದು ಹಾಗೂ ರಸ್ತೆಯ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಇದರಲ್ಲಿ ಅಡಕವಾಗಿರುವ ಅಂಶಗಳು. ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸುವುದು, ಸೀಟು ಬೆಲ್ಟ್ಗಳನ್ನು ಹಾಕಿಕೊಳ್ಳುವುದು, ಕುಡಿದು ವಾಹನ ಚಾಲನೆ ಮಾಡುವುದು ಹಾಗೂ ವೇಗ ಮಿತಿಯನ್ನು ಮೀರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಹ ಸಂಗತಿಗಳೂ ಇದರಡಿ ಸೇರುತ್ತವೆ.

ಭಾರತದಲ್ಲಿ ಶೇಕಡ 70ರಷ್ಟು ಸರಕುಸಾಗಣೆ ಟ್ರಕ್ಗಳ ಮುಖಾಂತರವೇ ನಡೆಯುತ್ತದೆ. ಹೆದ್ದಾರಿಗಳಲ್ಲಿ ವೇಗಮಿತಿಯನ್ನು ಪತ್ತೆಹಚ್ಚುವ, ಪಾನಮತ್ತ ಚಾಲಕರನ್ನು ಗುರುತಿಸುವ ಲಕ್ಷಣಗಳೇ ಕಡಿಮೆ. ಇದರಿಂದಾಗಿ ಲಾರಿಗಳ ಅಪಘಾತ ನಮ್ಮಲ್ಲಿ ಹೆಚ್ಚಿನ ಸಂಖ್ಯೆಯ್ಲ್ಲಲಿದೆ.

`ವಾಹನಗಳಿಗೇನೋ ಪವರ್ ಬ್ರೇಕ್, ಪವರ್ ಸ್ಟಿಯರಿಂಗ್ ಅಳವಡಿಸುವಷ್ಟು ಆಧುನಿಕವಾಗಿರುವ ನಾವು ಅದೇ ಪ್ರಮಾಣದಲ್ಲಿ ರಸ್ತೆಗಳ ಮೂಲ ಸೌಕರ್ಯದಲ್ಲಿ ಹಿಂದೆ ಬಿದ್ದಿದ್ದೇವೆ. ಕಾನೂನೇ ಎಲ್ಲವನ್ನೂ ನಿಗ್ರಹಿಸಲು ಸಾಧ್ಯವಿಲ್ಲ. ಇವುಗಳನ್ನೆಲ್ಲಾ ಸ್ವಯಂ ಅಳವಡಿಸಿಕೊಂಡಾಗ ಮಾತ್ರ ಸಾಧ್ಯ. ಹಾಗಾಗಿ ವಾಹನ ಚಾಲಕರಿಗೆ ಪರವಾನಗಿ ನೀಡುವಲ್ಲಿ ಕಠಿಣ ನಿಯಮಗಳನ್ನು ಅನುಸರಿಸಬೇಕು

ರಸ್ತೆ ಸುರಕ್ಷತೆ ಬಗ್ಗೆ ಕನಿಷ್ಠ ಮಟ್ಟದ ಶಿಕ್ಷಣ ನೀಡಬೇಕು. ಅದರಲ್ಲೂ ಮಕ್ಕಳಿಗೆ ಈ ಬಗ್ಗೆ ಹೆಚ್ಚಿನ ತಿಳಿವಳಿಕೆ ನೀಡಬೇಕು. ಈ ಮೂಲಕ ಸಮಗ್ರ ಚಾಲನಾ ನೀತಿಯನ್ನು ರೂಪಿಸಬೇಕು~ ಎಂದು ರಸ್ತೆ ಅಪಘಾತಗಳನ್ನು ತಡೆಯುವಲ್ಲಿ ಶ್ರಮಿಸುತ್ತಿರುವ ಸಂಶೋಧಕರು ಹೇಳುತ್ತಾರೆ.

ಭಾರತದಲ್ಲಿನ ಅಪಘಾತಗಳಲ್ಲಿ ವಾರ್ಷಿಕವಾಗಿ 50 ಲಕ್ಷಕ್ಕೂ ಹೆಚ್ಚು ಜನರು ಗಾಯಗೊಳ್ಳುತ್ತಿದ್ದಾರೆ. ಇವರಲ್ಲಿ ಕನಿಷ್ಠ ಮೂರು ಲಕ್ಷ ಜನರು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುತ್ತಿದ್ದಾರೆ. ಇಂತಹುದೇ ಪರಿಸ್ಥಿತಿ ನೆರೆಯ ಚೀನಾ ದೇಶದಲ್ಲೂ ಇದೆ. ಇದು ಹೀಗೆಯೇ ಮುಂದುವರಿದರೆ 2020ರ ವೇಳೆಗೆ ಭಾರತ ರಸ್ತೆ ಅಪಘಾತಗಳಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನಕ್ಕೆ ಏರಲಿದೆ ಎಂದು ಜಾಗತಿಕ ಸಂಶೋಧನಾ ವರದಿಗಳು ಎಚ್ಚರಿಸುತ್ತಿವೆ.

ಮುಂದುವರಿದ ದೇಶಗಳಲ್ಲಿ ರಸ್ತೆ ಅಪಘಾತಗಳ ನಿಯಂತ್ರಣಕ್ಕಾಗಿ ಸಂಚಾರ ಯೋಜನೆ ರೂಪಿಸುವಾಗ ಮತ್ತು ರಸ್ತೆ ವಿನ್ಯಾಸಗೊಳಿಸುವಾಗ ಮನಃಶಾಸ್ತ್ರಜ್ಞರು, ಎಂಜಿನಿಯರ್ಗಳು, ವೈದ್ಯರು, ಸಾಮಾಜಿಕ ಕಾರ್ಯಕರ್ತರು ಹಾಗೂ ವಾಹನ ತಜ್ಞರ ಒಡಗೂಡಿ ರಚಿಸಲಾಗುತ್ತದೆ. ಆದರೆ ಭಾರತದಲ್ಲಿ ಮಾತ್ರ ಈ ವಿಷಯ ಏನಿದ್ದರೂ ಸಿವಿಲ್ಎಂಜಿನಿಯರ್ಗಳ ಪಾಲಿನ ಕೆಲಸವಾಗಿಯೇ ಉಳಿದಿದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.