ಬೆಂಗಳೂರು:  ಕಬ್ಬನ್ ಉದ್ಯಾನದಲ್ಲಿ ಮಕ್ಕಳ ಕಲರವ. ಆದರೆ, ಬಣ್ಣಗಳ ಲೋಕದಲ್ಲಿ ಮುಳುಗಿದ್ದ ಮಕ್ಕಳು ಚಿತ್ರಗಳನ್ನು ಬಿಡಿಸುವಲ್ಲಿ ತಲ್ಲೆನರಾಗಿದ್ದರು. ಸಂಚಾರ ನಿಯಮಗಳನ್ನು ಪಾಲಿಸುವ ಬಗ್ಗೆ ಮಕ್ಕಳು ತಮ್ಮದೇ ರೀತಿಯಲ್ಲಿ ಅಲ್ಲಿ ಚಿತ್ರಗಳ ಮೂಲಕ ನೀತಿ ಹೇಳುತ್ತಿದ್ದರು. ಜತೆಗೆ ತಮ್ಮ ಚಿತ್ರಗಳನ್ನು ನೋಡಲು ಬಂದಿದ್ದ ನೆಚ್ಚಿನ ನಟ- ನಟಿಯರನ್ನು ಕಂಡು ಹಿಗ್ಗಿದ ಮಕ್ಕಳು ಅವರಿಂದ ಹಸ್ತಾಕ್ಷರ ಪಡೆಯಲು ಮುಗಿಬಿದ್ದರು.

ಬೆಂಗಳೂರು ನಗರ ಸಂಚಾರ ಪೊಲೀಸರು ಕಬ್ಬನ್ ಉದ್ಯಾನದಲ್ಲಿ ಭಾನುವಾರ ಆಯೋಜಿಸಿದ್ದ `ಚಿತ್ರ ಬಿಡಿಸುವ ಮೂಲಕ ರಸ್ತೆ ಸುರಕ್ಷತೆ' ಸಮಾರಂಭದಲ್ಲಿ ಕಂಡುಬಂದ ನೋಟಗಳಿವು.

`ನನಗೆ ಚಿತ್ರ ಬಿಡಿಸುವುದು ತುಂಬ ಇಷ್ಟ. ಶಾಲೆಯಲ್ಲಿ ಚಿತ್ರಕಲೆಗೆ ಪ್ರೋತ್ಸಾಹವಿದೆ. ನನ್ನ ಚಿತ್ರಕಲಾ ಶಿಕ್ಷಕರು ನನಗೆ ರೇಖೆ ಹಾಗೂ ಬಣ್ಣಗಳ ಸಂಯೋಜನೆಯ ಬಗ್ಗೆ ಹೇಳಿಕೊಟ್ಟಿದ್ದಾರೆ. ಮನೆಯಲ್ಲಿ ಅಪ್ಪ - ಅಮ್ಮ ನನ್ನ ಚಿತ್ರಗಳ ಬಗ್ಗೆ ಹೆಮ್ಮೆ ಪಡುತ್ತಾರೆ. ಇಂದು ಸಂಚಾರ ನಿಯಮಗಳ ಸರಿಯಾದ ಪಾಲನೆಯ ಬಗ್ಗೆ ಚಿತ್ರ ಬಿಡಿಸುತ್ತಿದ್ದೇನೆ. ಸಂಚಾರ ನಿಯಮ ಪಾಲಿಸದಿದ್ದರೆ ಅಪಘಾತ ತಪ್ಪಿದ್ದಲ್ಲ ಎಂಬ ಸಂದೇಶ ಚಿತ್ರದಲ್ಲಿದೆ' ಎಂದು ನುಡಿದಳು ಆರನೇ ತರಗತಿ ವಿದ್ಯಾರ್ಥಿನಿ ದೀಕ್ಷಾ.

`ರಸ್ತೆಯಲ್ಲಿ ನಿಯಮಗಳನ್ನು ಪಾಲಿಸುವಂತೆ ಸಂಚಾರ ಪೊಲೀಸರು ಸೂಚನಾ ಫಲಕಗಳನ್ನು ಹಾಕಿರುತ್ತಾರೆ. ಆದರೂ ಅದನ್ನು ನಿಯಮ ಮೀರುವವರು ಹೆಚ್ಚು. ಹೀಗಾಗಿ ಸಂಚಾರ ದೀಪಗಳ ನಿಯಮವನ್ನು ಪಾಲಿಸುವಂತೆ ಚಿತ್ರದ ಮೂಲಕ ಹೇಳುತ್ತಿದ್ದೇನೆ' ಎಂದು ಐದನೇ ತರಗತಿ ವಿದ್ಯಾರ್ಥಿ ತೃಪ್ತಿ ಹೇಳಿದಳು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಟಿ ತಾರಾ ಅನೂರಾಧಾ, `ಈ ರೀತಿಯ ಚಿತ್ರಕಲಾ ಕಾರ್ಯಕ್ರಮಗಳಿಂದ ಮಕ್ಕಳ ಬುದ್ಧಿ ವಿಕಾಸವಾಗುತ್ತದೆ. ಮಕ್ಕಳಿಗೆ ಪಠ್ಯ ವಿಷಯಗಳ ಜತೆಗೆ ಪಠ್ಯೇತರ ವಿಷಯಗಳಲ್ಲಿಯೂ ಆಸಕ್ತಿ ಬೆಳೆಯುವಂತೆ ಮಾಡಲು ಇಂತಹ ಚಿತ್ರಕಲಾ ಕಾರ್ಯಕ್ರಮಗಳು ಪ್ರಯೋಜನಕಾರಿ' ಎಂದರು.

`ಚಿಕ್ಕ ಮಕ್ಕಳು ಈ ರೀತಿ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಚಿತ್ರಗಳನ್ನು ಬಿಡಿಸುವುದು ನೋಡಿ ಆನಂದವಾಯಿತು. ಮಕ್ಕಳು ಯಾವುದನ್ನೇ ಆಗಲಿ ಬೇಗ ಗ್ರಹಿಸುತ್ತಾರೆ. ಇದರಿಂದ ಅವರ ನೆನಪಿನ ಶಕ್ತಿ ಮತ್ತು ಬೌದ್ಧಿಕ ಮಟ್ಟ ಬಹುಬೇಗ ಬೆಳೆಯುತ್ತದೆ. ಮಕ್ಕಳ ಒಂದೊಂದು ಚಿತ್ರಗಳನ್ನು ನೋಡಿದರೆ ಅವರ ಮುಗ್ಧ ಭಾವ ಎದ್ದು ಕಾಣುತ್ತದೆ' ಎಂದು ಚಿತ್ರ ನಟ ಸುದೀಪ್ ಹೇಳಿದರು.

`ಇಂತಹ ಕಾರ್ಯಕ್ರಮವನ್ನು ನೋಡಿ ನಿಜಕ್ಕೂ ಸಂತೋಷವಾಗಿದೆ. ಇಷ್ಟೊಂದು ಮಕ್ಕಳು ಚಿತ್ರವನ್ನು ಬಿಡಿಸಲು ಪಾಲ್ಗೊಂಡಿರುವುದು ಆಶ್ಚರ್ಯವಾಗಿದೆ. ಇಂದಿನ ಮಕ್ಕಳು ಕೇವಲ ಅಂಕದ ಹಿಂದೆ ಓಡದೇ, ಈ ರೀತಿ ಚಿತ್ರ, ನೃತ್ಯ, ಸಂಗೀತ ಹೀಗೆ ಇನ್ನೂ ವಿವಿಧ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸುತ್ತಿರುವುದು ಉತ್ತಮ ಬೆಳವಣಿಗೆ' ಎಂದು ನಟಿ ಪ್ರಿಯಾಂಕ್ ಉಪೇಂದ್ರ ಹೇಳಿದರು.

ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ.ಎಂ.ಎ.ಸಲೀಂ, `ಚಿಕ್ಕ ಮಕ್ಕಳಲ್ಲಿಯೇ ಸಂಚಾರ ನಿಯಮಗಳ ಕುರಿತು ತಿಳಿವಳಿಕೆ ನೀಡಬೇಕು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಅವರಿಗೆ ಈಗ ಜಾಗೃತಿ ಮೂಡಿಸಿದರೆ, ಅವರ ಮನೆಯ ಹಿರಿಯರಿಗೆ ಹೇಳುತ್ತಾರೆ. ಮುಂದೆ ತಾವೂ ನಿಯಮಗಳನ್ನು ಪಾಲಿಸುತ್ತಾರೆ. ಈ ಉದ್ದೇಶದಿಂದ ಚಿತ್ರ ಬಿಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ' ಎಂದರು.

`ಒಟ್ಟು ಮುನ್ನೂರು ಶಾಲೆಗಳ 3,200 ಮಕ್ಕಳು ಚಿತ್ರ ಬಿಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಮಕ್ಕಳಿಂದ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.