ಮಂಗಳೂರು: ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್(40) ಅವರನ್ನು ದುಷ್ಕರ್ಮಿಗಳ ತಂಡವೊಂದು ಗುರುವಾರ ಹಾಡಹಗಲೇ ಯದ್ವಾ ತದ್ವಾ ಕೊಚ್ಚಿ ಪರಾರಿಯಾಗಿದ್ದು, ಚುನಾವಣಾ ಸಮಯದಲ್ಲೇ ಬಿಜೆಪಿ ಮುಖಂಡರೊಬ್ಬರ ಮೇಲಿನ ದಾಳಿಯಿಂದ ನಗರ ಬೆಚ್ಚಿಬಿದ್ದಿದೆ.

ಮಂಗಳೂರು ಪೊಲೀಸ್ ಕಮಿಷನರೇಟ್ ಸ್ಥಾಪನೆಯಾದ ಬಳಿಕ ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ಪ್ರಮುಖ ರಾಜಕೀಯ- ಸಾಹಿತ್ಯಿಕ ವಲಯದ ಮುಖಂಡರೊಬ್ಬರ ಕೊಲೆ ಯತ್ನ ನಡೆದಿದೆ.

ಘಟನೆ ಹಿನ್ನೆಲೆ: ಗುರುವಾರ ಮಧ್ಯಾಹ್ನ 12.35ಕ್ಕೆ ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅಕಾಡೆಮಿಯಿಂದ ನಿರ್ಗಮಿಸಿದರು.

ಅತ್ತಾವರದ ಕಾಸಾ ಗ್ರಾಂಡೆಯಲ್ಲಿ ವಾಸವಿರುವ ರಹೀಂ ಉಚ್ಚಿಲ್ 12.45ರ ವೇಳೆಗೆ ಕಚೇರಿಗೆ ಆಗಮಿಸಿದರು. ಈ ವೇಳೆಗೆ ಗುಮಾಸ್ತ ಸತೀಶ್ ರೈ ಕಚೇರಿಯಲ್ಲಿದ್ದರು. ರಹೀಂ 18ರಂದು ನಡೆಯಲಿರುವ ಮಂಗಳೂರು ವಿಧಾನಸಭಾ ಕ್ಷೇತ್ರದ ಮತದಾರರ ಕಾರ್ಯಕ್ರಮದ ಆಹ್ವಾನಪತ್ರಗಳನ್ನು ಪರಿಶೀಲಿಸಿದರು.

ಬಳಿಕ ವ್ಯಕ್ತಿಯೊಬ್ಬರು ಅಕಾಡೆಮಿ ಅಧ್ಯಕ್ಷರು ಭೇಟಿಯಾಗಿ ತೆರಳಿದರು. ಒಂದು ಗಂಟೆ ಸುಮಾರಿಗೆ ಪಲ್ಸರ್ ಬೈಕ್ನಲ್ಲಿ ನಾಲ್ವರು ಯುವಕರು ಆಗಮಿಸಿ ಕಚೇರಿ ಮುಂಭಾಗದಲ್ಲಿ ಬೈಕ್ ನಿಲ್ಲಿಸಿದರು. ಕಚೇರಿಯೊಳಗೆ ಬಂದ ಇಬ್ಬರು ದುಷ್ಕರ್ಮಿಗಳು ಸತೀಶ್ ರೈ ಅವರಲ್ಲಿ `ರಹೀಂ ಉಚ್ಚಿಲ್ ಇದ್ದಾರಾ? ಅವರೊಂದಿಗೆ ಮಾತನಾಡಬೇಕಿದೆ~ ಎಂದು ಪ್ರಶ್ನಿಸಿದರು.

`ಅಧ್ಯಕ್ಷರು ಒಳಗಿದ್ದಾರೆ~ ಎಂದು ಸತೀಶ್ ರೈ ಉತ್ತರಿಸಿದರು. ಇಬ್ಬರ ಕೈಯಲ್ಲೂ ಬ್ಯಾಗ್ ಇತ್ತು. ಅಧ್ಯಕ್ಷರ ಕೊಠಡಿಯೊಳಕ್ಕೆ ತೆರಳಿದ ಇಬ್ಬರೂ ಬ್ಯಾಗ್ನಲ್ಲಿಟ್ಟಿಕೊಂಡಿದ್ದ ಲಾಂಗ್ನಿಂದ ರಹೀಂ ಅವರ ಕುತ್ತಿಗೆ, ಎರಡೂ ಕೈ, ಹೊಟ್ಟೆ ಮೇಲೆ ಪ್ರಹಾರ ನಡೆಸಿದೆ. ರಹೀಂ ತಪ್ಪಿಸಿಕೊಳ್ಳಲು ಯತ್ನಿಸಿದಾಗ ತಳ್ಳಾಟ ನಡೆದಿದೆ.

ನಂತರ ಹೊರಬಂದ ಯುವಕರಿಬ್ಬರೂ ಸತೀಶ್ ಅವರನ್ನು ತಳ್ಳಿ ಅಕಾಡೆಮಿ ಮುಂಬಾಗಿಲ ಪಕ್ಕದ ಪಾರ್ಟಿಷನ್ನ ಗಾಜು ಒಡೆದು ಹಾಕಿದೆ. ಅಷ್ಟಕ್ಕೆ ಸುಮ್ಮನಾಗದೆ ಪಕ್ಕದ ಅಂಗಡಿಯ ಗಾಜನ್ನೂ ಪುಡಿಗಟ್ಟಿ ನಂತರ ಬೈಕ್ಗಳಲ್ಲಿ ಪರಾರಿಯಾಗಿದೆ. ಕ್ಷಣಾರ್ಧದಲ್ಲಿ ಇಷ್ಟೆಲ್ಲ ಘಟನೆಯೂ ನಡೆದಿದೆ. ಪರಾರಿಯಾಗುವ ವೇಳೆ ಕಾಸಾ ಗ್ರಾಂಡೆ ಸಮೀಪದ ರಸ್ತೆಯಲ್ಲಿ ದುಷ್ಕರ್ಮಿಗಳು ಕೊಲೆ ಯತ್ನಕ್ಕೆಬಳಸಿದ ಲಾಂಗ್ ಎಸೆದು ಹೋಗಿದ್ದಾರೆ.

ಇತ್ತ ಮಾರಣಾಂತಿಕ ಹಲ್ಲೆಯಿಂದ ರಹೀಂ ತೀವ್ರವಾಗಿ ಗಾಯಗೊಂಡು ಕಚೇರಿಯೊಳಗೆ ಕುಸಿದುಬಿದ್ದರು. ಕುತ್ತಿಗೆಯಲ್ಲಿ ಆಳವಾದ ಗಾಯವಾಗಿದ್ದರಿಂದ ರಕ್ತ ಚಿಮ್ಮಿದ್ದು, ಕಚೇರಿ ತುಂಬಾ ಚೆಲ್ಲಾಡಿದೆ.
ರಹೀಂ ಮತ್ತು ಸತೀಶ್ ರೈ ಕಿರುಚಾಟ ಕೇಳಿದ ಅಕ್ಕಪಕ್ಕದವರು ಅಕಾಡೆಮಿ ಕಚೇರಿಗೆ ಧಾವಿಸಿ ಬಂದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ರಹೀಂ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಪಾಂಡೇಶ್ವರ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದರು. ಪೊಲೀಸ್ ಶ್ವಾನ ವಾಸನೆ ಹಿಡಿಯುತ್ತಾ ಸ್ವಲ್ಪ ದೂರ ತೆರಳಿ ವಾಪಸಾಯಿತು.
ಬೆರಳಚ್ಚು ತಜ್ಞರು ಕಚೇರಿಯಲ್ಲಿ ಬೆರಳಿನ ಗುರುತು ಸಂಗ್ರಹ ಯತ್ನ ನಡೆಸಿದ್ದ, ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಸ್ಥಳ ಪರಿಶೀಲನೆ ನಡೆಸಿದರು.

ದುಷ್ಕರ್ಮಿಗಳ ಸುಳಿವು ರಾತ್ರಿ 10 ಗಂಟೆವರೆಗೂ ಸಿಕ್ಕಿರಲಿಲ್ಲ. ದಾಳಿ ನಡೆಸಿದ ಯುವಕರ ಪ್ರಾಯ 25ರಿಂದ 30 ಎಂದು ಅಂದಾಜು ಮಾಡಲಾಗಿದೆ. ರಹೀಂ ಅಭಿಮಾನಿಗಳು ಅಕಾಡೆಮಿ ಕಚೇರಿ ಸಮೀಪ ಮತ್ತು ಖಾಸಗಿ ಆಸ್ಪತ್ರೆ ಬಳಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕುಟುಂಬದ ಸದಸ್ಯರ ರೋಧನ ಮುಗಿಲು ಮುಟ್ಟಿತ್ತು. ಬಿಜೆಪಿ ಮುಖಂಡರು ಆಸ್ಪತ್ರೆಗೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

`ಬೈಕ್ನಲ್ಲಿ ಇಬ್ಬರು ಆಗಮಿಸಿದ್ದರು. ಬೈಕ್ ರಿಜಿಸ್ಟ್ರೇಶನ್ ಸಂಖ್ಯೆ ಗೊತ್ತಾಗದಂತೆ ನಂಬರ್ ಪ್ಲೇಟ್ಗೆ ಕೆಸರು ಮೆತ್ತಿದ್ದರು. ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು~ ಎಂದು ರಹೀಂ ಅವರನ್ನು ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದ ವ್ಯಕ್ತಿಯೊಬ್ಬರು ತಿಳಿಸಿದರು. `ದಾಳಿ ನಡೆಸಿದವರನ್ನು ಈ ಹಿಂದೆ ಎಲ್ಲಿಯೂ ನೋಡಿಲ್ಲ~ ಎಂದು ಗುಮಾಸ್ತ ಸತೀಶ್ ರೈ ಪತ್ರಕರ್ತರಿಗೆ ಮಾಹಿತಿ ನೀಡಿದರು.

ಹತ್ಯೆ ಯತ್ನ ಘಟನೆಗೆ ರಾಜಕೀಯ ದ್ವೇಷ ಕಾರಣ ಎಂದು ಪೊಲೀಸರು ಶಂಕಿಸಿದ್ದು, ಸುಪಾರಿ ಕೊಟ್ಟಿರುವ ಸಾಧ್ಯತೆ ಇದೆ ಎಂದು ಊಹಿಸಿದ್ದಾರೆ. ಈ ಮಧ್ಯೆ ಆರೋಪಿಗಳು ಬಜ್ಪೆಯವರಾಗಿದ್ದು, ಬಜ್ಪೆ ಪೊಲೀಸರು ರಾತ್ರಿ ಬಂಧಿಸಿದ್ದಾರೆ~ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ ಪೊಲೀಸರು ಬಂಧನ ವಿಚಾರ ನಿರಾಕರಿಸಿದ್ದಾರೆ. ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.

ರಹೀಂ ಹಿನ್ನೆಲೆ:  ಬ್ಯಾರಿ ಅಕಾಡೆಮಿ ಸ್ಥಾಪನೆಯಾಗಿ ಅಬ್ದುಲ್ ರಹಿಮಾನ್ ಅಧ್ಯಕ್ಷರಾಗಿದ್ದಾಗ ರಹೀಂ ಸದಸ್ಯರಾಗಿದ್ದರು. ಜನವರಿ 19ರಂದು ರಹೀಂ ಅವರನ್ನು ಬ್ಯಾರಿ ಅಕಾಡೆಮಿ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿದ್ದು, ಫೆ. 6ರಂದು ಅಧಿಕಾರ ಸ್ವೀಕರಿಸಿದ್ದರು.

ಬಿಜೆಪಿಯಲ್ಲಿ ಕೆಲವು ವರ್ಷಗಳಿಂದ ಸಕ್ರಿಯರಾಗಿದ್ದ ಅವರು, ಬ್ಯಾರಿ ಸಾಹಿತ್ಯ-ಸಾಮಾಜಿಕ ಚಟುವಟಿಕೆ, ಬ್ಯಾರಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. ಸ್ವರ್ಣ ಕಮಲ ಪುರಸ್ಕೃತ ಬ್ಯಾರಿ ಸಿನೆಮಾದಲ್ಲೂ ನಟಿಸಿದ್ದರು.
ರಹೀಂ ಮಂಗಳೂರು ವಿಧಾನಸಭಾ ಮತದಾರರ ಕ್ಷೇತ್ರದ ನೂತನ ಕಾರ್ಯಕ್ರಮ ಪ್ರಯುಕ್ತ ಬುಧವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದರು. ಮರುದಿನವೇ ಈ ದುರ್ಘಟನೆ ನಡೆದಿದೆ.

4 ತಂಡ:  `ದುಷ್ಕರ್ಮಿಗಳ ಪತ್ತೆಗೆ 4 ತಂಡ ರಚಿಸಲಾಗಿದ್ದು, ಕೆಲವು ಸುಳಿವು ಆಧರಿಸಿ ಶಂಕಿತರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ. ರಹೀಂ ಅಪಾಯದಿಂದ ಪಾರಾಗಿದ್ದಾರೆ. ಅವರು ಹೇಳಿಕೆ ನೀಡುವವರೆಗೂ ಹತ್ಯೆ ಯತ್ನದ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಆರೋಪಿಗಳು ಶೀಘ್ರ ಪೊಲೀಸ್ ಬಲೆಗೆ ಬೀಳುವರು~ ಎಂದು ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಪ್ರಜಾವಾಣಿಗೆ ಗುರುವಾರ ರಾತ್ರಿ ತಿಳಿಸಿದರು.

ಹಲ್ಲೆ ವದಂತಿ:  ತಿಂಗಳ ಹಿಂದೆ ಪಡುಬಿದ್ರಿಯಲ್ಲಿ ರಹೀಂ ಅವರ ಮೇಲೆ ಕೊಲೆ ಯತ್ನ ನಡೆದಿದೆ ಎಂಬ ಸುದ್ದಿ ಹಬ್ಬಿತ್ತು. ಅಂದೇ ಸಂಜೆ ಮಾಧ್ಯಮದವರನ್ನು ಖುದ್ದು ನಗರದಲ್ಲಿ ಹುಡುಕಿಕೊಂಡು ಬಂದಿದ್ದ ರಹೀಂ `ನನ್ನ ಮೇಲೆ ಹಲ್ಲೆ ನಡೆದಿಲ್ಲ~ ಎಂದು ಸ್ಪಷ್ಟಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.