ಭಾನುವಾರ, ಏಪ್ರಿಲ್ 11, 2021
28 °C

ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ

3 ಆಗಸ್ಟ್, ಶುಕ್ರವಾರ

ರಾಘವೇಂದ್ರ ಆರಾಧನಾ ಸಮಿತಿ: ನಂ.42, 16ನೇ ಮುಖ್ಯರಸ್ತೆ, ಮಾರುತಿ ಬಡಾವಣೆ, ವಿಜಯನಗರ. ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದಲ್ಲಿ ಅನಂತ ಕುಲಕರ್ಣಿ ಅವರಿಂದ ದಾಸವಾಣಿ. ಸಂಜೆ 6.30.

ಶ್ರೀಮದ್ ಮಧ್ವಗುರು ರಾಘವೇಂದ್ರ ಟ್ರಸ್ಟ್: ರಾಘವೇಂದ್ರ ಸ್ವಾಮಿ ಮೃತ್ತಿಕಾ ಬೃಂದಾವನ ಸನ್ನಿಧಾನ, 6ನೇ ಕ್ರಾಸ್, ನಾಗರಬಾವಿ ರಸ್ತೆ, ಅಮರಜ್ಯೋತಿನಗರ, ವಿಜಯನಗರ. ಬೆಳಿಗ್ಗೆ 9.30ಕ್ಕೆ ಲಕ್ಷ್ಮಿ ಹಯಗ್ರೀವ ಭಜನಾಮಂಡಳಿಯಿಂದ ದೇವರನಾಮ, ಸಂಜೆ 7ರಿಂದ ರೂಪಾ ಹಾಗೂ ದೀಪಾ ಅವರಿಂದ ಸಂಗೀತ ಕಾರ್ಯಕ್ರಮ.

ರಾಘವೇಂದ್ರ ಸೇವಾ ಸಮಿತಿ: 6ನೇ ಅಡ್ಡರಸ್ತೆ, ಸುಧೀಂದ್ರನಗರ (ಈಜುಕೊಳ ಬಡಾವಣೆ), ಮಲ್ಲೇಶ್ವರ. ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಮತ್ತು ಕೃಷ್ಣ ಜಯಂತಿ ಮಹೋತ್ಸವದಲ್ಲಿ ಗುರುಸಾರ್ವಭೌಮರ ಪೂರ್ವಾರಾಧನೆ. ಕಲ್ಲಾಪುರ ಪವಮಾನಾಚಾರ್ಯ ಅವರಿಂದ `ರಾಯರ ಅವತಾರ-ಜಗತ್ತಿಗೆ ಉಪಕಾರ~ ಪ್ರವಚನ. ಸಂಜೆ 6.30.

ಗುರುರಾಘವೇಂದ್ರ ಸೇವಾ ಟ್ರಸ್ಟ್: ದೂರವಾಣಿನಗರ. 39ನೇ ವರ್ಧಂತ್ಯುತ್ಸವ ಮತ್ತು ಬೆಳಿಗ್ಗೆ ನಿರ್ಮಲ್ಯ ವಿಸರ್ಜನೆ, ಅಷ್ಟೋತ್ತರ ಸೇವೆ. ಪಾದಪೂಜೆ, ರಾಘವೇಂದ್ರ ತತ್ವನ್ಯಾಸ ಮತ್ತು ಪುನಶ್ಚರಣ ಹೋಮ, ಪಂಚಾಮೃತ ಅಭಿಷೇಕ ಬೆಳಿಗ್ಗೆ 7.30. ಅಲಂಕಾರ, ಕನಕಾಭಿಷೇಕ, ಪ್ರವಚನ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ರಥೋತ್ಸವ/ದೀಪಾರಾಧನೆ. ಬೆಳಿಗ್ಗೆ 9.30.

ಸಂಜೆ 6ಕ್ಕೆ ರಥೋತ್ಸವ, 7ರಿಂದ ಎಸ್.ಎನ್. ಸುರೇಶ್ ಹಾಗೂ ವೃಂದದಿಂದ ಹರಿಕಥೆ. ರಾತ್ರಿ 9ಕ್ಕೆ ಮಹಾಮಂಗಳಾರತಿ.

ರಾಘವೇಂದ್ರ ಸ್ವಾಮಿ ಮಿಷನ್: 9ನೇ ಅಡ್ಡರಸ್ತೆ, ಇಂದಿರಾನಗರ ಮೊದಲನೇ ಹಂತ.  ಬೆಳಿಗ್ಗೆ 11ಕ್ಕೆ ಪ್ರವಚನ. ಸಂಜೆ 7ಕ್ಕೆ ಸುಕನ್ಯಾ ಪ್ರಭಾಕರ್ ಹಾಗೂ ತಂಡದಿಂದ ಶಾಸ್ತ್ರೀಯ ಸಂಗೀತ ಗಾಯನ.

ಶ್ರೀಕೃಷ್ಣ ಮತ್ತು ರಾಘವೇಂದ್ರ ಸ್ವಾಮಿ ಸೇವಾ ಪ್ರತಿಷ್ಠಾನ ಟ್ರಸ್ಟ್: ಗಿರಿನಗರ. ಬೆಳಿಗ್ಗೆ 10ಕ್ಕೆ ಶ್ರೀಶ ವಿಠಲ ಭಜನಾ ಮಂಡಳಿಯಿಂದ ಭಜನೆ. ವೆಂಕಟೇಶ್ ಆಲ್ಕೋಡ್ ಹಾಗೂ ತಂಡದಿಂದ ದಾಸವಾಣಿ. ಸಂಜೆ 6.30.

ವ್ಯಾಸರಾಜ ಮಠ: ನಂ.1, ಬೆಣ್ಣೆ ಗೋವಿಂದಪ್ಪ ರಸ್ತೆ, ಬಸವನಗುಡಿ. ಬೆಳಿಗ್ಗೆ 7ಕ್ಕೆ ಫಲಪಂಚಾಮೃತ, ಪಾರಾಯಣ, ಪಾದಪೂಜೆ, ಕನಕಾಭಿಷೇಕ, ಪ್ರವಚನ, ಸಂಜೆ 5.30ಕ್ಕೆ ಪ್ರಕಾರೋತ್ಸವ, ಅಷ್ಟಾವಧಾನ, ಮಹಾಮಂಗಳಾರತಿ. ಆರ್.ಕೆ. ಪದ್ಮನಾಭನ್ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ. ಸಂಜೆ 6.30.

ರಾಘವೇಂದ್ರ ಸೇವಾ ಸಮಿತಿ: 6ನೇ ಅಡ್ಡರಸ್ತೆ, ಎನ್‌ಜಿಎಫ್ ಬಡಾವಣೆ, ರಾಜಮಹಲ್ ವಿಲಾಸ್, 2ನೇ ಹಂತ, ಸಂಜಯನಗರ. ಬೆಳಿಗ್ಗೆ 8ರಿಂದ ಪಂಚಾಮೃತ ಅಭಿಷೇಕ, ಸಾಮೂಹಿಕ ವೇದಪಾರಾಯಣ, ಅಷ್ಟೋತ್ತರ, ಪಾದಪೂಜೆ, ಕನಕಾಭಿಷೇಕ, ಮಹಾಮಂಗಳಾರತಿ.

ಪ್ರಭಾತ್ ಕಲಾವಿದರಿಂದ `ಸುಂದರ ಮುನೀಂದ್ರ ರಾಘವೇಂದ್ರ~- ಸಂಗೀತ, ನೃತ್ಯ, ವಾಚಕಗಳನ್ನೊಳಗೊಂಡ ಕಥಾ ಕೀರ್ತನ. ನಿರ್ದೇಶನ- ಪ್ರೊ.ಟಿ.ಕೆ. ರಾಮಚಂದ್ರ. ಸಂಜೆ 6.30.

ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ: ನಂ.177/1, ಪ್ಲಾಟ್‌ಫಾರಂ ರಸ್ತೆ, ರಾಜೀವ್ ಗಾಂಧಿ ಸರ್ಕಲ್ ಸಮೀಪ, ಶೇಷಾದ್ರಿಪುರಂ. ಪಂಚರಾತ್ರೋತ್ಸವದಲ್ಲಿ ವೇದಪಾರಾಯಣ, ಫಲಪಂಚಾಮೃತ ಅಭಿಷೇಕ, ಪಾದಪೂಜೆ, ಕನಕಾಭಿಷೇಕ, ತುಳಸಿ ಅರ್ಚನೆ. ಶ್ರೀನಿಧಿ ಆಚಾರ್ಯ ಅವರಿಂದ `ಶ್ರೀ ರಾಘವೇಂದ್ರ ವಿಜಯ~ ಪ್ರವಚನ. ಸಂಜೆ ಸಂಗೀತೋತ್ಸವದಲ್ಲಿ ಎಸ್. ಅನಿರುದ್ಧ, ಪಲ್ಲವಿ ಪ್ರಸನ್ನ, ಶ್ರೀದೇವಿ, ಸರಯೂ, ಅನಂತ ಕುಲಕರ್ಣಿ ಅವರಿಂದ ದಾಸ ನಮನ ಹಾಗೂ ಜಯಲಕ್ಷ್ಮಿ ತಂಡದಿಂದ ಪಂಚವೀಣಾ ವಾದನ. ಸಂಜೆ 6.

ಗುರುರಾಘವೇಂದ್ರ ಸ್ವಾಮಿ ಟ್ರಸ್ಟ್: ಕೆ. ಆರ್. ಅಶ್ವತ್ಥನಾರಾಯಣ ರಸ್ತೆ, ಮಂಜುನಾಥನಗರ, ಪ್ರಸನ್ನ ಚಿತ್ರಮಂದಿರದ ಸಮೀಪ, ಮಾಗಡಿ ರಸ್ತೆ. ಬೆಳಿಗ್ಗೆ 10ಕ್ಕೆ ಭಜನೆ. ವಸಂತಲಕ್ಷ್ಮಿ ಅವರಿಂದ ಹರಿಕಥೆ. ಶ್ರೀನಿವಾಸಮೂರ್ತಿ (ಹಾರ್ಮೋನಿಯಂ), ಜಗದೀಶ್ (ತಬಲಾ). ಸಂಜೆ 6.

ನವ ಮಂತ್ರಾಲಯ ಮಂದಿರ: ನಂ 52, ಬಸವಣ್ಣನ ಗುಡಿ ರಸ್ತೆ. ಟಿ.ಎಸ್. ಸೇತೂರಾಂ ಅವರಿಂದ ಭಕ್ತಿ ಸಂಗೀತ. ಸಂಜೆ 6.

ರಾಘವೇಂದ್ರ ಗುರು ಸೇವಾ ಮಂಡಳಿ: 145, 13ನೇ ಎ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಗೋಕುಲ 1ನೇ ಹಂತ, ಮತ್ತಿಕೆರೆ. ಬೆಳಿಗ್ಗೆ 7ಕ್ಕೆ ಪಂಚಾಮೃತ ಮಹಾಭಿಷೇಕ, ಪವಮಾನ ಹೋಮ, ಅಲಂಕಾರ ಸೇವೆ, ಮಹಾಮಂಗಳಾರತಿ. ಸಂಜೆ 6ಕ್ಕೆ ದಿವ್ಯಾ ಗಿರಿರಾಜ್ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ. ರಾತ್ರಿ 8ಕ್ಕೆ ಪ್ರಾಕಾರೋತ್ಸವ.

ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ: ಪೂರ್ಣಪ್ರಜ್ಞ ನಗರ. ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಮತ್ತು ಚಾಂದ್ರ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ. ಬೆಳಿಗ್ಗೆ 6.30ಕ್ಕೆ ವೇದ-ಉಪನಿಷತ್ ಪಾರಾಯಣ, ರಾಘವೇಂದ್ರ ಅಷ್ಟೋತ್ತರ ಪಾರಾಯಣ-ಹರಿವಾಯು ಭಜನಾ ಮಂಡಳಿ. ಬೆಳಿಗ್ಗೆ 8.30ಕ್ಕೆ ಮಧ್ವೇಶ ಕೃಷ್ಣ ಭಜನಾ ಮಂಡಳಿ, ಅಂಬಾ ಭವಾನಿ ಭಜನಾ ಮಂಡಳಿಯಿಂದ ಭಜನೆ. ಪ್ರೊ.ಹಯವದನ ಪುರಾಣಿಕರಿಂದ ರಾಯರ ತಂತ್ರದೀಪಿಕಾ ಪ್ರವಚನ. ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ. ಸಂಜೆ 6.30ಕ್ಕೆ ಪಲ್ಲಕ್ಕಿ ಉತ್ಸವ, ರಂಗಪೂಜೆ ಹಾಗೂ ದೀಪಾರಾಧನೆ, 7.15ಕ್ಕೆ ಆದಿತ್ಯ ಪಲ್ಲಕ್ಕಿ ಹಾಗೂ ತಂಡದಿಂದ ದಾಸವಾಣಿ. 

ನಂಜನಗೂಡು ರಾಘವೇಂದ್ರ ಸ್ವಾಮಿ ಮಠ: ಜಯನಗರ 5ನೇ ಬಡಾವಣೆ. ವಾರಿಜಶ್ರೀ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಸಂಜೆ 7.

ದೇವಗಿರಿ ಶ್ರೀ ಗುರು ಸೇವಾ ಸಮಿತಿ: 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ.  ಕಲಾವತಿ ಅವಧೂತ್ ಅವರಿಂದ ದೇವರನಾಮ. ಸಂಜೆ 6.30.

ರಾಘವೇಂದ್ರ ಸ್ವಾಮಿಗಳವರ ಬೃಂದಾವನ ಸನ್ನಿಧಿ ಟ್ರಸ್ಟ್: 1106, 6ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, ಪ್ರಕಾಶನಗರ. ಶಂಕರ ಶ್ಯಾನಭಾಗ್ ಮತ್ತು ತಂಡದಿಂದ ದಾಸವಾಣಿ. ಸಂಜೆ 6.30.

ವ್ಯಾಸರಾಜ ಮಠ (ಸೋಸಲೆ): ಸುಬ್ರಹ್ಮಣ್ಯನಗರ ಶಾಖೆ, ನಂ.1160, 5ನೇ ಮುಖ್ಯರಸ್ತೆ, `ಎ~ ಬ್ಲಾಕ್, ಎರಡನೇ ಹಂತ, ರಾಜಾಜಿನಗರ. ಬೆಳಿಗ್ಗೆ 7ಕ್ಕೆ ಪಂಚಾಮೃತ, ಪಾರಾಯಣ, ಕನಕಾಭಿಷೇಕ, ಪಾದಪೂಜೆ, ರಾಯರ ಸ್ತೋತ್ರ ವಾಯುಸ್ತುತಿ. ಬೆಳಿಗ್ಗೆ 10ಕ್ಕೆ ಉಪನ್ಯಾಸ. ಜಾಹ್ನವಿ ಭಜನಾ ಮಂಡಳಿಯಿಂದ ದಾಸರ ಪದಗಳು. ಸಂಜೆ 5.30. ಸಂಜೆ 7ರಿಂದ ಸುರಭಿ ಗಾನ ವೃಂದದಿಂದ ಸಂಗೀತ ಕಾರ್ಯಕ್ರಮ.

ಉಡುಪಿ ಫಲಿಮಾರು ಮಠ: ರಾಮಾಂಜನೇಯ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿ, ನಂ.330, 13ನೇ ಕ್ರಾಸ್, ಸಂಪಿಗೆ ರಸ್ತೆ, ಮಲ್ಲೇಶ್ವರ.  ಬೆಳಿಗ್ಗೆ 9ಕ್ಕೆ ಅಖಿಲ ಭಾರತ ಮಾಧ್ವ ಮಹಿಳಾ ಮಂಡಳಿಯಿಂದ ಭಜನೆ, ಆನಂದ ಬಳಗದ ಮಹಿಳಾ ವಿಭಾಗದ ಕುರುಡಿ ವೆಂಕಣ್ಣಾಚಾರ್ ಶಿಷ್ಯರಿಂದ ಭಕ್ತಿ ಗಾಯನ. ಸಂಜೆ 5.30.

ಭೀಮನಕಟ್ಟೆ ರಾಘವೇಂದ್ರ ಸ್ವಾಮಿಗಳವರ ಮಠ: ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯಪುರ ಮುಖ್ಯರಸ್ತೆ. ಬೆಳಿಗ್ಗೆ 5.30ರಿಂದ ಪಾದಪೂಜೆ, ಪಲ್ಲಕ್ಕಿ ಸೇವೆ, ರಥೋತ್ಸವ, ಸ್ವಸ್ತಿವಾಚನ.

ನಿರ್ಮಾಣ್ ದೇವಾಲಯಗಳ ವಿಶ್ವಸ್ಥ ಮಂಡಳಿ: ನಂ. 336-ಬಿ, ನಿಸರ್ಗ ಲೇಔಟ್, ಬನ್ನೇರುಘಟ್ಟ. ಪೂರ್ವಾರಾಧನೆ. ಬೆಳಿಗ್ಗೆ 6ಕ್ಕೆ ಸುಪ್ರಭಾತ, ನಿರ್ಮಾಲ್ಯ ಪೂಜೆ, ಪಂಚಾಮೃತ ಅಭಿಷೇಕ, ಅಲಂಕಾರ, `ಶ್ರೀರಾಘವೇಂದ್ರಾಷ್ಟೋತ್ತರ~ ಪಾರಾಯಣ, ಹಸ್ತೋದಕ, ಮಹಾಪೂಜೆ.

ಬೇವಿನ ಕರಗ

ಶ್ರೀ ಮಾಂಕಾಳಿ ಅಮ್ಮನವರ ದೇವಾಲಯ: 11ನೇ ಬೀದಿ, ಎಂ.ವಿ. ಗಾರ್ಡನ್, ಹಲಸೂರು. ಶುಕ್ರವಾರದಿಂದ ಸೋಮವಾರದವರೆಗೆ (ಆ.3ರಿಂದ 13ರವರೆಗೆ) ಶ್ರೀ ಮಾಂಕಾಳಿ ಅಮ್ಮನವರ ಆಷಾಡ ಹಬ್ಬ ಆಚರಣೆ. ಶುಕ್ರವಾರ ಬೆಳಿಗ್ಗೆ 10ಕ್ಕೆ ಧ್ವಜಾರೋಹಣ, ಮಧ್ಯಾಹ್ನ 12.30ಕ್ಕೆ ಅಮ್ಮನವರಿಗೆ ಕಂಕಣ ಕಟ್ಟುವುದು. ಮಧ್ಯಾಹ್ನ 3ಕ್ಕೆ ಬೇವಿನ ಕರಗ ಮೆರವಣಿಗೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.