ಬೆಂಗಳೂರು: `ಚುನಾವಣೆಯಲ್ಲಿ ಹಣ ನೀಡದೆ ಮತವನ್ನು ಪಡೆಯುವಂತಾದರೆ, ಪ್ರಜಾಪ್ರಭುತ್ವಕ್ಕೆ ಒಂದು ಬೆಲೆ ಬರುತ್ತದೆ~ ಎಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಭಾನುವಾರ ನಡೆದ ಬಿ.ಆರ್.ರಾಮೇಗೌಡ ರಚಿತ `ಕೆಂಪೇಗೌಡ ಇತಿಹಾಸ ಹಾಗೂ ನಗರ ಕಾರ್ಪೋರೇಟರ್ಗಳು ನಡೆಸಿದ ಜಯಂತ್ಯುತ್ಸವಗಳು~ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

`ರಾಜಕಾರಣಿಗಳು ನಮಸ್ಕಾರ ಮಾಡಿ ಗೆದ್ದು ಬರಲಿಲ್ಲ. ಬದಲಿಗೆ ಹಣ ನೀಡಿ ಗೆದ್ದು ಬಂದಿದ್ದಾರೆ. ರಾಜಕಾರಣ ಅನಿವಾರ್ಯವಾಗಿದೆ. ಆದರೆ, ಮಾಡುವ ರಾಜಕಾರಣದಲ್ಲಿ ಆತ್ಮ ತೃಪ್ತಿಯಿಲ್ಲ, ಸಮಾಧಾನವಿಲ್ಲ~ ಎಂದು ನುಡಿದರು.

`ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಮಾನತೆ ದೊರೆಯಬೇಕು. ಅವನಿಗೆ ಎಲ್ಲ ಮೂಲಭೂತ ಅಂಶಗಳು ದೊರೆಯಬೇಕು ಆಗಲೇ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯವಾಗಿದೆ~ ಎಂದು ಹೇಳಿದರು.`ಕೆಂಪೇಗೌಡರು ಈ ನಾಡನ್ನು ಕಟ್ಟಿ ಬೆಳಸಿದರು. ಕೊನೆ ಉಸಿರು ಇರುವವರೆಗೂ ಈ ನಾಡಿನ ಪ್ರತಿಯೊಬ್ಬ ಪ್ರಜೆ ನಾಡು ಕಟ್ಟಿದ ನಾಡಗೌಡ ಕೆಂಪೇಗೌಡರನ್ನು ಸದಾ ನೆನಪಿಸಿಕೊಳ್ಳಬೇಕು~ ಎಂದರು.

ಮಾಜಿ ಸ್ಪೀಕರ್ ಕೃಷ್ಣ ಮಾತನಾಡಿ, `ವ್ಯವಸ್ಥೆ ತುಂಬ ಕೆಟ್ಟು ಹೋಗಿದೆ ಎಂದು ಬಡಬಡಿಸುವವರೇ ಹೆಚ್ಚಾಗಿದ್ದಾರೆ. ಅದರ ಬದಲು ತಮ್ಮ ಮಿತಿಯಲ್ಲಿ ಹೋರಾಟ ನಡೆಸಿದರೆ ಈ ವ್ಯವಸ್ಥೆಯನ್ನು ಬದಲಾವಣೆ ಮಾಡಬಹುದು~ ಎಂದು ಆಶಾ ಭಾವ ವ್ಯಕ್ತಪಡಿಸಿದರು.

`ವಿದ್ಯಾವಂತರು ಜಾತೀಯತೆಯನ್ನು ದಿನದಿಂದ ದಿನಕ್ಕೆ ಗಟ್ಟಿ ಮಾಡುತ್ತಿದ್ದಾರೆ. ಒಂದು ನೌಕರಿಗೆ, ಬಡ್ತಿ ಹೀಗೆ ನಾನಾ ರೀತಿಗೆ ಜಾತೀಯತೆಯ ಒತ್ತು ನೀಡಿ ವಿದ್ಯಾವಂತರೆನಿಸಿಕೊಂಡವರು ಜಾತೀಯತೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ~ ಎಂದರು.

ಯುವಜನ ಹಾಗೂ ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಆರ್.ಪೆರುಮಾಳ್, ಪ್ರೊ.ಟಿ.ಶಿವಣ್ಣ, ಕೃತಿ ಕತೃ ಬಿ.ಆರ್.ರಾಮೇಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.