ಗುರುವಾರ , ಮೇ 13, 2021
16 °C

`ರಾಜಕಾರಣಿಗಳಿಗೆ ಪ್ರಾಮಾಣಿಕತೆಯ ಕೊರತೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾಳಿ: ಕಲುಷಿತಗೊಂಡಿರುವ ಇಂದಿನ ರಾಜಕಾರಣದಲ್ಲಿ ಗುರುಗಳ ಮಾರ್ಗದರ್ಶನ ಅವಶ್ಯಕತೆ ಇದೆಯಾದ್ದರಿಂದ ನಾನು ಹಿರೇಕಲ್ಮಠ ಶ್ರೀಗಳ ಮಾರ್ಗದರ್ಶನದಲ್ಲಿ  ಕಾರ್ಯ ನಿರ್ವಹಿಸುವೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಅವರು ಶನಿವಾರ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿದ್ದ ಅಮಾವಾಸ್ಯೆ ಧರ್ಮ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮತದಾರರ ಮನಸ್ಸೆಳೆಯಲು ಅನೇಕ ಮಾರ್ಗಗಳನ್ನು ಅನುಸರಿಸಲಾಯಿತು ಇಂದು ಯಾವ ರಾಜಕಾರಣಿಯು ಪ್ರಾಮಾಣಿಕನಾಗಿ ಉಳಿದಿಲ್ಲ, ಇದರ ಜತೆ ಮತದಾರರು ಹೊರತಾಗಿಲ್ಲ ಎಂದು ಅವರು ತಮ್ಮ ಮನದಾಳದ ಮಾತನ್ನು ಹೇಳಿದರು.ಮುಂದಿನ ದಿನಗಳಲ್ಲಿ ಹಿರೇಕಲ್ಮಠದ ಶ್ರೀಗಳು ತಿಂಗಳಿಗೊಂದು ಬಾರಿ ಕರೆಸಿ, ತಾಲೂಕಿನಲ್ಲಿರುವ ಸಮಸ್ಯಗಳು ತಮ್ಮ ಗಮನಕ್ಕೆ ಬಂದು ಅದನು ತಿಳಿಸಿ ಕೆಲಸ ಮಾಡುವ ಬಗ್ಗೆ ಸೂಚಿಸಿದರೆ ಅದರಂತೆ ಶಿರಾಸವಹಿಸಿ  ಕೆಲಸ ಮಾಡುವೆ ಎಂದು ಅವರು ಹೇಳಿದರು.\

ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಾಸಕರು ಪಕ್ಷಭೇದ ಮಾಡದೆ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು  ಎಂದು ಹೇಳಿದರು. ಬಡತನ ರೇಖೆಗಿಂತ ಕೆಳಗಿರುವವರನ್ನು ಗುರ್ತಿಸಿ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಶಾಸಕರಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ವರ್ತಕ ನ್ಯಾಮತಿ ಕೆ.ವಿ.ಮನೋಹರ್. ಚನ್ನಪ್ಪಸ್ವಾಮಿ ವಿದ್ಯಾಪೀಠದ ಕಾರ್ಯದರ್ಶಿಗಳಾದ ಚನ್ನಯ್ಯ ಬೆನ್ನೂರುಮಠ, ಎಂ.ಈಶ್ವರಪ್ಪ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.