ಭಾನುವಾರ, ಏಪ್ರಿಲ್ 11, 2021
31 °C

ರಾಜಕಾರಣ ಮತ್ತು ಪ್ರಾಮಾಣಿಕತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ಧಾಂತಗಳಿಲ್ಲದೆ ಪ್ರತಿಪಕ್ಷಗಳು ದುರ್ಬಲವೆನ್ನುವ ಭಾರತೀಯ ಜನತಾಪಕ್ಷದ ಕೆ.ಎಸ್. ಈಶ್ವರಪ್ಪನವರು ತಮಗರಿವಿಲ್ಲದೆಯೇ ತಮ್ಮ ಪೊಳ್ಳುತನವನ್ನು ಬಯಲು ಮಾಡಿಕೊಂಡಿದ್ದಾರೆ. ಇವರು ಕಾಂಗ್ರೆಸ್ ಮತ್ತು ಜೆಡಿಎಸ್‌ಗಳನ್ನು ಕುರಿತು ಹೀಗೆ ಹೇಳಿದ್ದಾರೆ. (ಪ್ರ.ವಾ. ಮಾ. 9). ಯಾವುದೇ ತತ್ವ ಅಥವಾ ಸಿದ್ಧಾಂತ ಅಸ್ತಿತ್ವ ಪಡೆಯುವುದು ಅದರ ಆಚರಣೆ ಅಥವಾ ಅನುಷ್ಠಾನದ ಮೂಲಕ. ಭಾಜಪದ ತತ್ವ ಮತ್ತು ಸಿದ್ಧಾಂತ (ಇದ್ದರೆ?) ಅವು ಹೇಗೆ ಮತ್ತು ಎಲ್ಲಿ ಕಾರ್ಯರೂಪದಲ್ಲಿ ಪ್ರಕಟಗೊಂಡಿದೆ ಎನ್ನುವುದನ್ನು ಈಶ್ವರಪ್ಪನವರು ಹೇಳುವರೇ? ‘ಬಿಜೆಪಿಯನ್ನು ಟೀಕೆ ಮಾಡುತ್ತಿದ್ದ ಪಕ್ಷಗಳ ಸದಸ್ಯರೇ ಈಗ ಬಿಜೆಪಿಗೆ ಬರುತ್ತಿದ್ದಾರೆ. ಪಕ್ಷಕ್ಕೆ ಪೂರ್ಣ ಬಹುಮತ ದೊರೆತಿದ್ದರೆ ಅವರನ್ನು ಅವಲಂಬಿಸುವ ಅಗತ್ಯ ಬರುತ್ತಿರಲಿಲ್ಲ’ ಎನ್ನುವಂತಹ ಒಂದಕ್ಕೊಂದು ಸಂಬಂಧವಿರದ ಅರ್ಥಹೀನ ಮಾತುಗಳನ್ನು ಈಶ್ವರಪ್ಪನವರು ನುಡಿದಿದ್ದಾರೆ. ಬೇರೆ ಪಕ್ಷದವರು ಭಾಜಪಕ್ಕೆ ವಲಸೆ ಬರುತ್ತಿರುವುದಕ್ಕೆ ಕಾರಣ ಇಂತಹ ವಲಸೆ ಅಧಿಕಾರ, ಹಣ ಮತ್ತಿತರ ಲಾಭಗಳನ್ನು ತಂದುಕೊಡುತ್ತದೆಂಬ ಭರವಸೆಯಿಂದ, ಅಥವಾ ಆಶ್ವಾಸನೆಗಳನ್ನು ಅವರ ಮುಂದೆ ಹಿಡಿದು ತೊನೆದಾಡಿಸುತ್ತಿರುವುದರಿಂದ. ತತ್ವ, ಸಿದ್ಧಾಂತ ಮತ್ತು ನಿಷ್ಠೆಗಳು ಎಂಬ ಪದಗಳು ಜನರನ್ನು ವಂಚಿಸುವುದಕ್ಕಾಗಿ ಬಳಕೆಯಾಗುವಂಥವು. ಯಾವ ರಾಜಕೀಯ ಪಕ್ಷವೂ ಇಂಥ ದುರ್ಬಳಕೆಗೆ ಹೊರತಲ್ಲ. ಆದ್ದರಿಂದ, ಈ ಪದಗಳು ಈಗ ರಾಜಕೀಯ ಕ್ಷೇತ್ರದಲ್ಲಿ ಸವಕಲಾಗಿವೆ; ರಾಜಕಾರಣಿಗಳಿಗೆ ಇವನ್ನು ಬಿಟ್ಟರೆ ಗತಿ ಇಲ್ಲ. ಹಾಗೆಂದು ಒಪ್ಪಿಕೊಳ್ಳುವ ಪ್ರಾಮಾಣಿಕತೆಯೂ ಇಲ್ಲ.ಎಷ್ಟೆಂದರೂ ರಾಜಕಾರಣ ಮತ್ತು ಪ್ರಾಮಾಣಿಕತೆ ಪರಸ್ಪರ ತದ್ವಿರುದ್ಧಗಳಲ್ಲವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.