ಮದ್ದೂರು: ಮುಂದಿನ ಚುನಾವಣೆಗೆ ಪಕ್ಷವನ್ನು ತಳಹಂತದಿಂದ ಕಟ್ಟುವ ಕೆಲಸಕ್ಕೆ ಚಾಲನೆ ನೀಡಿದ್ದು, ಇದು ತಮ್ಮ ರಾಜಕೀಯ ಜೀವನದ ಕೊನೆಯ ಹೋರಾಟ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶುಕ್ರವಾರ ಘೋಷಿಸಿದರು.

ಶಾಸಕಿ ಕಲ್ಪನ ಸಿದ್ದರಾಜು ಅವರ ನಿವಾಸಕ್ಕೆ ಭೇಟಿ ನೀಡಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. `ಮುಂದಿನ ಫೆಬ್ರುವರಿ 10ರ ನಂತರ ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲೂ ಪ್ರವಾಸ ಮಾಡುತ್ತೇನೆ. ಕೇವಲ ಭಾಷಣ ಮಾಡಿ ಸಮಯ ವ್ಯರ್ಥಗೊಳಿಸದೇ ಪಕ್ಷದ ಬಲವರ್ಧನೆಗೆ ಸ್ಥಳೀಯ ಮುಖಂಡರೊಡನೆ ಚರ್ಚಿಸಿ ಅಗತ್ಯ ರೂಪುರೇಷೆಗಳನ್ನು ಸಿದ್ಧಪಡಿಸುತ್ತೇನೆ~ ಎಂದರು.

`ಬಿಜೆಪಿ ಹಾಗೂ ಕಾಂಗ್ರೆಸ್ನ ಆಂತರಿಕ ಬಿಕ್ಕಟ್ಟಿನ ಬಗೆಗೆ ಪ್ರತಿಕ್ರಿಯಿಸುವುದಿಲ್ಲ. ಅದು ಅವರ ಪಕ್ಷಗಳಿಗೆ ಬಿಟ್ಟ ವಿಚಾರ. ಲೋಕಾಯುಕ್ತ ಬನ್ನೂರಮಠ ಅವರ ನೇಮಕದ ವಿಚಾರ ಕುರಿತು ಏನನ್ನೂ ಹೇಳುವುದಿಲ್ಲ. ರಾಜ್ಯದ ಜನರಿಗೆ ಈ ವಿವಾದದ ಆಳ ಅಗಲದ ಪರಿಚಯವಿದೆ. ರಾಜ್ಯದಲ್ಲಿ ಬಡಜನರ ಶೋಷಣೆ ಹೆಚ್ಚುತ್ತಿರುವುದು ನನ್ನ ಮನಸ್ಸಿಗೆ ನೋವಾಗಿದೆ. ಹೀಗಾಗಿ ಈ ಇಳಿವಯಸ್ಸಿನಲ್ಲಿ ಅಂತಹ ಜನರ ಒಳಿತಿಗಾಗಿ ಕೆಲಸ ಮಾಡಲು ನಿರ್ಧರಿಸಿದ್ದೇನೆ~ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.