ಶನಿವಾರ, ಮೇ 21, 2022
28 °C

ರಾಜನಕೋಳೂರ ಏತ ನೀರಾವರಿ ವಿಳಂಬ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸಗಿ: ಬಹು ನೀರಿಕ್ಷಿತ ಯೋಜನೆಯಾದ ರಾಜನಕೋಳೂರ ಏತ ನೀರಾ ವರಿ ಎಂದು ಪ್ರಾರಂಭವಾಗುತ್ತದೆ ಎಂದು ರೈತರು ಕಾದು ಕುಳಿತಿದ್ದರೂ ಅದು ಇನ್ನೂ ಪ್ರಾರಂಭವಾಗುವ ಲಕ್ಷಣ ಕಾಣುತ್ತಿಲ್ಲ. ನಿರೀಕ್ಷಿತ ದಿನದಂದು ನೀರು ಹರಿಸಿದ್ದರೆ ರೈತರು ಈಗಾಗಲೇ ಎರಡು ಮೂರು ಬಾರಿ ಬೆಳೆ ಪಡೆಯುತ್ತಿದ್ದರು. ಸುಮಾರು 2700 ಎಕರೆ ಪ್ರದೇಶಕ್ಕೆ ನೀರುಣಿಸುವ ಮಹತ್ವದ ಯೋಜನೆ ಇದಾಗಿದ್ದು. ಸುಮಾರು 8 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 2007ರಲ್ಲಿ ನಾರಾಯಣಪುರ ಎಡ ದಂಡೆ ಮುಖ್ಯ ಕಾಲುವೆಯ 40ನೇ ಕಿಮೀ ಬಳಿ 30ಕ್ಯೂಸೆಕ್ ನೀರನ್ನು ಎತ್ತಿ ಹಾಕಲು ಪಂಪ್ ಹೌಸ , ವಿದ್ಯುತ್ ಪರಿ ವರ್ತಕ ಅಳವಡಿಸಲಾಗಿದೆ.16 ಕಿಮೀ ಗಳವರೆಗೆ ಕಾಲುವೆ ಜಾಲ ಕೂಡಾ ನಿರ್ಮಿಸಲಾಗಿದೆ. ಆದರೆ ವಿದ್ಯುತ್ ಸಂಪರ್ಕದ ಸಮಸ್ಯೆ ಯಿಂದಾಗಿ ಇನ್ನೂ ರೈತರ ಜಮೀನು ಗಳಿಗೆ ನೀರು ಹರಿಸಲಾಗು ತ್ತಿಲ್ಲ ಎನ್ನಲಾಗಿದೆ. ಇದಕ್ಕೆ ಕಾರಣ ವಿದ್ಯುತ್ ಗುತ್ತಿಗೆದಾರರು ಸರಿಯಾಗಿ ಸ್ಪಂದಿಸು ತ್ತಿಲ್ಲ ಎಂದು ಅಧಿಕಾರಿಯೊಬ್ಬರು ಹೆಳುತ್ತಾರೆ. ಕೆಂಭಾವಿಯ 110 ಕೆವಿ ವಿದ್ಯುತ್ ಘಟಕದಿಂದ ಹುಣಸಗಿ ಮುಖಾಂತರ 3 ಕೋಟಿ ವೆಚ್ಚದಲ್ಲಿ ಎಕ್ಸಪ್ರೆಸ್ ಲೈನ್ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸ ಬೇಕಿದೆ. ಜನಪ್ರತಿನಿಧಿಗಳು ಆಸಕ್ತಿ ತೋರಿಸಿ ಕಾಮಗಾರಿ ತೀವ್ರವಾಗಿ ಮುಗಿಸಿ ಜಮೀನುಗಳಿಗೆ ನೀರು ಒದಗಿ ಸಬೇಕೆಂದು ರೈತರು ಆಗ್ರಹಿಸಿದ್ದಾರೆ.ವಿಶೇಷ: ರಾಜನಕೋಳೂರ ಸುರಂಗ ಮಾರ್ಗ ಎಂದರೆ  ಸದ್ಯ ಏತ ನೀರಾವರಿ ಮೂಲಕ ನೀರು ಒದಗಿಸಲಾಗುತ್ತಿರುವ ಜಮೀನುಗಳ ಕೆಳಗೆ ಸುರಂಗ ಮಾಗದ ಮೂಲಕ 3 ಕಿ.ಮೀ ಎಡದಂಡೆ ಮುಖ್ಯ ಕಾಲುವೆ ಹರಿದಿದೆ.  ಕಪ್ಪು ಮಣ್ಣಿನಿಂದ ಕೂಡಿದ ಫಲವತ್ತಾದ ಈ ಭೂಮಿಗೆ ಇದುವರೆಗೂ ನೀರಾವರಿ ಆಗಿರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.