ಜೈಪುರ(ಪಿಟಿಐ): ರಾಜಸ್ಥಾನದ 199 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಭಾನುವಾರ ಮಧ್ಯಾಹ್ನದ ವೇಳೆಗೆ ಶೇಕಡಾ 40ರಷ್ಟು ಮತದಾನವಾಗಿದ್ದು, ಪ್ರಕ್ರಿಯೆ ಮಂದಗತಿಯಿಂದ ಸಾಗಿದೆ.

ಬೆಳಿಗ್ಗೆ 8ಕ್ಕೆ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 2ರ ವೇಳೆಗೆ ಶ್ರೀಗಂಗಾನಗರದಲ್ಲಿ ಶೇ 46.55 ದಾಖಲೆಯ ಮತದಾನವಾಗಿದೆ.

ಮಧ್ಯಾಹ್ನ 12ರ ವೇಳೆಗೆ 4.8 ಕೋಟಿ ಮತದಾರರಲ್ಲಿ ಶೇ 20ರಷ್ಟು ಜನ ಮತ ಚಲಾಯಿಸಿದ್ದರು. ದೋಸ ಜಿಲ್ಲೆಯಲ್ಲಿ ಶೇ 23.34 ಹೆಚ್ಚಿನ ಮತದಾನವಾಗಿತ್ತು. 22.31ರಷ್ಟು ಮತ ಚಲಾವಣೆ ಆಗುವ ಮೂಲಕ ರಾಜಸಮಂದ್ ಜಿಲ್ಲೆ ಎರಡನೇ ಸ್ಥಾನದಲ್ಲಿತ್ತು.

ರಾಜ್ಯದ ಎಲ್ಲೆಡೆ ಮತದಾನ ಶಾಂತಿಯುತವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

2,087 ಅಭ್ಯರ್ಥಿಗಳು ಕಣದಲ್ಲಿದ್ದು, 10 ಸಾವಿರ ಸೂಕ್ಷ್ಮ ಮತಗಟ್ಟೆ ಸೇರಿದಂತೆ ಒಟ್ಟು 47 ಸಾವಿರ ಮತಗಟ್ಟೆಯಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಒಟ್ಟು 200 ಕ್ಷೇತ್ರಗಳಿದ್ದು, ಪ್ರಸ್ತುತ 199 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಚುರು ಕ್ಷೇತ್ರದಲ್ಲಿ ಕಣದಲ್ಲಿದ್ದ ಬಿಎಸ್ಪಿ ಅಭ್ಯರ್ಥಿ ಮೃತಪಟ್ಟ ಹಿನ್ನೆಲೆಯಲ್ಲಿ ಇಲ್ಲಿ ಡಿ. 13ರಂದು ಮತದಾನ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಗ್ರೆಸ್ ಪ್ರಾಭಲ್ಯ ಹೊಂದಿರುವ ರಾಜ್ಯದಲ್ಲಿ 2008ರಲ್ಲಿ ನಡೆದ ಚುನಾವಣೆಯಲ್ಲಿ 66.25 ದಾಖಲೆಯ ಮತದಾನವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.